ಜಪ್ತಿ ಮಾಡಲಾದ ಕಳ್ಳಭಟ್ಟಿ ಸರಾಯಿ ನಾಶ

0

Gummata Nagari : Kalaburgi News

ಕಲಬುರಗಿ : ಕಲಬುರಗಿ ವಿಭಾಗ ಕಲಬುರಗಿ (ಜಾ ಮತ್ತು ತ) ಅಬಕಾರಿ ಜಂಟಿ ಆಯುಕ್ತರ ನಿರ್ದೇಶನ ಹಾಗೂ ಕಲಬುರಗಿ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ ಕಲಬುರಗಿ ಉಪವಿಭಾಗ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಜೇವರ್ಗಿ ಅಬಕಾರಿ ವಲಯ ವ್ಯಾಪ್ತಿಯಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡಿರುವ ಸ್ವದೇಶಿ ಮದ್ಯ, ಬಿಯರ್ ಹಾಗೂ ಕಳ್ಳಭಟ್ಟಿ ಸರಾಯಿಯನ್ನು ಜೇವರ್ಗಿ ಹೊರ ವಲಯದ ಸರ್ಕಾರಿ ಜಾಗದಲ್ಲಿ ನಾಶಪಡಿಸಲಾಯಿತು.

ಜೇವರ್ಗಿ ಅಬಕಾರಿ ವಲಯದ ವ್ಯಾಪ್ತಿಯಲ್ಲಿ ದಾಖಲಾದ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ 712.210 ಲೀಟರ್ ಸ್ವದೇಶಿ ಮದ್ಯ, 117.499 ಲೀಟರ್ ಬಿಯರ್, 38 ಲೀಟರ್ ಕಳ್ಳಬಟ್ಟಿ ಸಾರಾಯಿ ಹಾಗೂ 422(15ಎ) ಪ್ರಕರಣಗಳಡಿ 181.440 ಲೀಟರ್ ಮದ್ಯವನ್ನು ಪರಿಸರಕ್ಕೆ ಧಕ್ಕೆಯಾಗದಂತೆ ನಾಶಪಡಿಸಿ, ಖಾಲಿ ಬಾಟಲಿಗಳಿಂದ ಬಂದ ಹಣವನ್ನು ಸರ್ಕಾರಕ್ಕೆ ಚಲನ ಮೂಲಕ ಭರಿಸಲಾಯಿತು. ನಾಶಪಡಿಸಿದ ಪ್ರಕ್ರಿಯೆ ಕುರಿತು ವಿಡಿಯೋಗ್ರಾಫಿ ಮತ್ತು ಫೋಟೋಗಳ ದಾಖಲೆ ಮಾಡಿಸಲಾಯಿತು.

ಈ ನಾಶಪಡಿಸುವ ಪ್ರಕ್ರಿಯೆಯಲ್ಲಿ ಕಂದಾಯ ನಿರೀಕ್ಷಕರಾದ ಚಂದ್ರಶೇಖರ್, ಗ್ರಾಮ ಲೆಕ್ಕಾಧಿಕಾರ ರಜನಿಕಾಂತ್, ಕಲಬುರಗಿ ಉಪ ವಿಭಾಗದ ಅಬಕಾರಿ ನಿರೀಕ್ಷಕ ವಿಠ್ಠಲರಾವ ಎಮ್.ವಾಲಿ, ಜೇವರ್ಗಿ ವಲಯದ ಅಬಕಾರಿ ನಿರೀಕ್ಷಕರಾದ ವನಿತಾ. ಎಸ್., ಅಬಕಾರಿ ಉಪ ನಿರೀಕ್ಷಕ ನಿಂಗನಗೌಡ ಪಾಟೀಲ, ಜೇವರ್ಗಿ ತಹಶೀಲ್ದಾರ ಕಚೇರಿ ಸಿಬ್ಬಂದಿ, ಕಲಬುರಗಿ ಕೆ.ಎಸ್.ಬಿ.ಸಿ.ಎಲ್.ಸಿಬ್ಬಂದಿಗಳು ಹಾಗೂ ಜೇವರ್ಗಿ ವಲಯದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.