ಹೆಣ್ಣು ಮಗುವಿನ ಪೋಷಕರ ಪತ್ತೆಗೆ ಮನವಿ

ಚಿಂಚೋಳಿ ತಾಲೂಕಿನ ರಟಕಲ್ ಬಸ್‌ನಿಲ್ದಾಣದ ಸಮೀಪದ ಬ್ರಿಜ್ಡ್ ಹತ್ತಿರ ಒಂದು ದಿನದ ಹೆಣ್ಣು ಮಗು ಪತ್ತೆ

0

ಕಲಬುರಗಿ: ಚಿಂಚೋಳಿ ತಾಲೂಕಿನ ರಟಕಲ್ ಬಸ್‌ನಿಲ್ದಾಣದ ಸಮೀಪದ ಬ್ರಿಜ್ಡ್ ಹತ್ತಿರದಲ್ಲಿ ೨೦೨೦ರ ಆಗಸ್ಟ್ ೨೨ರಂದು ಪತ್ತೆಯಾದ ಸುಮಾರು ಒಂದು ದಿನದ ಹೆಣ್ಣು ಮಗುವನ್ನು ಪಾಲನೆ, ಪೋಷಣೆಗಾಗಿ ಅದೇ ದಿನದಂದು ಕಲಬುರಗಿ ನಗರದ ಆಳಂದ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಲಾಗಿದೆ ಎಂದು ಕಲಬುರಗಿ ಅಮೂಲ್ಯ ಶಿಶು ಗೃಹದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹೆಣ್ಣು ಮಗುವನ್ನು ಚಿಂಚೋಳಿ ತಾಲೂಕಿನ ರಟಕಲ್ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ನಂತರ ರಟಕಲ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ, ಕಲಬುರಗಿ ಜಿಲ್ಲಾ ಆಸ್ಪತ್ರೆಯ ಎನ್.ಐ.ಸಿ.ಯು. ವಾರ್ಡ್ದಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಿರುತ್ತಾರೆ. ನಂತರ ಮಗುವಿನ ಪಾಲನೆ, ಪೋಷಣೆಗಾಗಿ ಚಿಂಚೋಳಿಯ ಮೇಲ್ವಿಚಾರಕಿಯಾದ ಶಹಾಜಾದ್ ಕಾಗಲ್ ಅವರು ಕಲಬುರಗಿಯ ಅಮೂಲ್ಯ ಶಿಶುಗೃಹದಲ್ಲಿ ದಾಖಲಿಸಿರುತ್ತಾರೆ. ಬಿಳುಪು ಬಣ್ಣ ಹೊಂದಿರುವ ಈ ಹೆಣ್ಣು ಮಗುವಿನ ಆರೋಗ್ಯ ಸ್ಥಿತಿ ಸಾಮಾನ್ಯವಾಗಿದೆ.
ಮೇಲ್ಕಂಡ ಹೆಣ್ಣು ಮಗುವಿನ ಪಾಲಕರು ಮತ್ತು ಪೋಷಕರು ಪ್ರಕಟಣೆಯಾದ ೩೦ ದಿನದೊಳಗೆ ಅಗತ್ಯ ದಾಖಲೆಗಳೊಂದಿಗೆ ಅಧೀಕ್ಷಕರು, ಅಮೂಲ್ಯ ಶಿಶು ಗೃಹ, ಆಳಂದ ರಸ್ತೆ ಕಲಬುರಗಿ ಕಚೇರಿಗೆ ಭೇಟಿ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಕಾನೂನು ಪ್ರಕಾರ ಈ ಹೆಣ್ಣು ಮಗುವಿನ ದತ್ತು ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಮೂಲ್ಯ ಶಿಶುಗೃಹದ ಅಧೀಕ್ಷಕರನ್ನು ದೂರವಾಣಿ ಸಂಖ್ಯೆ ೦೮೪೭೨-೨೬೫೫೮೮ ಹಾಗೂ ಮೊಬೈಲ್ ಸಂಖ್ಯೆ ೭೪೦೬೫೫೦೭೮೮ಗೆ ಸಂಪರ್ಕಿಸಬೇಕೆAದು ಕೋರಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.