ಬಿಜಾಪುರ ಪಾಲಿಕೆ ಚುನಾವಣೆಗೆ ಹಸಿರು ನಿಶಾನೆ

ವಾರ್ಡ ವಿಂಗಡಣೆ ಮಾಡಿ, ಮೀಸಲು ನಿಗದಿಗೊಳಿಸಿ, 90 ದಿನದೊಳಗೆ ಚುನಾವಣೆ ಪ್ರಕಿಯೆ ಪೂರ್ಣಕ್ಕೆ ಹೈಕೋರ್ಟ್ ಆದೇಶ

0

Gummata Nagari : Bijapur News

ಬಿಜಾಪುರ : ನನೆಗುದಿಗೆ ಬಿದ್ದಿದ್ದ ಇಲ್ಲಿಯ ಮಹಾನಗರ ಪಾಲಿಕೆ ಚುನಾವಣೆಯನ್ನು 90 ದಿನದೊಳಗೆ ನಡೆಸಲು ರಾಜ್ಯ ಸರಕಾರಕ್ಕೆ ಬೆಂಗಳೂರಿನ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ಈ ಕುರಿತು ಗುಮ್ಮಟ ನಗರಿ ಪತ್ರಿಕೆಗೆ ಮಾಹಿತಿ ನೀಡಿರುವ ನಗರದ ವಕೀಲ ಮುಖ್ತಿಯಾರ್ ದಖನಿ, ಮೂರು ವಾರದೊಳಗೆ ನಗರದ ವಾರ್ಡಗಳ ವಿಂಗಡಣೆ ಮತ್ತು ಮೀಸಲಾತಿ ನಿಗದಿಗೊಳಿಸಲು ನ್ಯಾಯಾಲಯ ಆದೇಶ ನೀಡಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ 45 ದಿನದೊಳಗೆ ಮತದಾರರ ಪಟ್ಟಿಯನ್ನು ಪೂರ್ಣಗೊಳಿಸಿ, 90 ದಿನದೊಳಗೆ ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಉಚ್ಚ ನ್ಯಾಯಾಲಯ ಆದೇಶಿಸಿದೆ ಎಂದು ವಿವರಿಸಿದ್ದಾರೆ.

ಪಾಲಿಕೆ ಚುನಾವಣೆ ನಡೆಸುವ ಕುರಿತಂತೆ ಪಾಲಿಕೆಯ ಐವರು ಮಾಜಿ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. ಮಾಜಿ ಸದಸ್ಯರ ಪರವಾಗಿ ನ್ಯಾಯವಾದಿ ಕೆ.ದಿವಾಕರ ವಾದ ಮಂಡಿಸಿದ್ದರು.

ಉಚ್ಚ ನ್ಯಾಯಾಲಯದ ಈ ಆದೇಶದಿಂದ ನಗರದಲ್ಲೆಡೆ ಸಂಚಲನ ಮೂಡಿದ್ದು, ಚುನಾವಣೆ ಚಟುವಟಿಕೆಗಳು ಗರಿಗೆದರಿವೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.