ಗ್ರಾಮೀಣ ಸೈಕ್ಲಿಂಗ್ ಪ್ರತಿಭೆ ಖೇಲೋ ಇಂಡಿಯಾ ಕ್ಯಾಂಪ್ಗೆ ಸೆಲೆಕ್ಟ್..!

0

Gummata Nagari : Gadag News

ಗದಗ : ಕುಗ್ರಾಮದಲ್ಲಿ ಜನಿಸಿದ ಬಾಲೆವೋರ್ವಳು ಇಂದು ತನ್ನ ಪ್ರತಿಭೆಯ ಮೂಲಕ ಎಲ್ಲರು ತಲೆ ಎತ್ತಿ ನೋಡುವಂತ ಸಾಧನೆ ಮಾಡಿದ್ದಾರೆ.

ಮುದ್ರಣ ಕಾಶಿ ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಲು ತುದಿಗಾಲಿನಲ್ಲಿ ನಿಂತಿದ್ದಾಳೆ ಹೌದು ಬಡತನದ ಬೇಗೆಯಲ್ಲಿ ಬೆಳೆದ ಬಾಲಕಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸನ್ನದ್ಧಳಾಗಿದ್ದಾಳೆ.

ಸೈಕ್ಲಿಂಗ ಅಭ್ಯಾಸ ಮಾಡುತ್ತಿರುವ ಈ ಬಾಲಕಿ ಹೆಸರು ಪವಿತ್ರಾ ಕುರ್ತಕೋಟಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ನಿವಾಸಿ. ಅಶೋಕ ರೇಣವ್ವಾ ಎನ್ನುವ ದಂಪತಿಗೆ ಆರತಿಗೊಬ್ಬಳು ಕೀರ್ತಿಗೊಬ್ಬ ಎನ್ನುವಂತೆ ಪ್ರವೀಣ ಹಾಗೂ ಸೈಕ್ಲಿಂಗ ಕ್ರೀಡಾಪಟು ಪವಿತ್ರಾ ಇಬ್ಬರು ಮಕ್ಕಳು ತಂದೆ ಅಶೋಕ ಕೂಲಿ ಕೆಲಸ ಮಾಡಿದ್ರೆ ತಾಯಿ ರೇಣವ್ವಾ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡ್ತಾರೆ.

ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದರ ಮಧ್ಯೆ, ಏನಾದರೂ ಸಾಧನೆ ಮಾಡಬೇಕು ಎಂದು 14 ರ ಪೋರಿ ಪವಿತ್ರಾ ನಿರಂತರ ಪರಿಶ್ರಮ ಪಟ್ಟಿದ್ದಾಳೆ. ಮೊದಲು ಸೈಕ್ಲಿಂಗ ಅಭ್ಯಾಸ ಮಾಡಲು ಸೈಕಲ್ ಇರದಿದ್ದಾಗ ಗದಗ ಹಿಂದಿನ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಪವಿತ್ರಾಗೆ ಒಂದು ಲಕ್ಷ ಮೌಲ್ಯದ ಸೈಕಲ್ ಕೊಡಿಸಿದ್ದರು. ಅದರಿಂದಲೇ ನಿತ್ಯ ಅಭ್ಯಾಸ ಮಾಡಿದ್ದಾಳೆ.

2015ರಲ್ಲಿ ನಡೆದ ಅರ್ಹತಾ ಪರೀಕ್ಷೆಯಲ್ಲಿ ಆಯ್ಕೆಯಾಗಿ, 5 ನೇ ತರಗತಿಗೆ ಜಿಲ್ಲಾ ಕ್ರೀಡಾ ಶಾಲೆಗೆ ಆಯ್ಕೆಯಾಗಿದ್ದಾಳೆ. ಮೊದಲ ಬಾರಿಗೆ 14 ಮತ್ತು 16 ವರ್ಷದೊಳಗಿನ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸೈಕ್ಲಿಂಗ್ ಅಶೋಶಿಯೇಶನ್ ಅವಳನ್ನು ರಾಜ್ಯದಿಂದ ರಾಷ್ಟ್ರ ಮಟ್ಟಕ್ಕೆ ಕಳಿಸಿದ್ದರು.

2017 ರಲ್ಲಿ ರಾಷ್ಟ್ರಮಟ್ಟದಲ್ಲಿ ನಡೆದ ಸೈಕ್ಲಿಂಗ್ ಸ್ಪರ್ಧೆ (ಕುರಕ್ಷೇತ್ರ)ಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿ 5 ನೇ ಸ್ಥಾನ ಪಡೆದ್ದಾಳೆ. ಅಂದು ಅಲ್ಲಿದ್ದ ಕೆಲ ಹಿರಿಯ ಸೈಕ್ಲಿಸ್ಟ್ ಗಳು ಪವಿತ್ರಾಳ ಪ್ರತಿಭೆಯನ್ನು ಗುರುತಿಸಿ, ದೆಹಲಿಯ ಖೇಲೋ ಇಂಡಿಯಾ ಕ್ಯಾಂಪ್ ಗೆ ಆಯ್ಕೆ ಮಾಡಿದ್ದಾರೆ. ಇದು ತರಬೇತಿದಾರರಿಗೂ ಸಂತಸ ತಂದಿದೆ. ಕುಗ್ರಾಮದ ಪ್ರತಿವೊಂದು ಇಂದು ದೇಶದ ಕೀರ್ತಿ ಪತಾಕೆ ಹಾರಿಸಲು ಶ್ರಮಿಸುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.