ಅರಣ್ಯ ಇಲಾಖೆಯ ಸಯೊಗದಲ್ಲಿ ಗಿಡನೆಡುವ ಕಾರ್ಯಕ್ರಮ

0

Gummata Nagari : Bidar News

ಭಾಲ್ಕಿ : ತಾಲೂಕಿನ ಖಟಕ ಚಿಂಚೋಳಿ ಕ್ರಾಸ್‌ನಿಂದ ಗ್ರಾಮದ ವರೆಗೂ ಹಾಗೂ ಸರಕಾರಿ ಅಸ್ಪತ್ರೆಯ ಆವರಣದಲ್ಲಿ ಒಂದು ಸಾವಿರ ಗಿಡನೆಡುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಹಾಗೂ ಅರಣ್ಯ ಇಲಾಖೆಯ ಸಯೊಗದಲ್ಲಿ ನಡೆಯಿತು.

ಸಾಮಾಜಿಕ ವಲಯ ಅರಣ್ಯಾಧಿಕಾರಿ ಕರೇಪ್ಪಾ ಪೂಜಾರಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನಿಡಿ ಪ್ರತಿಒಬ್ಬರು ಪರಿಸರ ಕಾಳಜಿವಹಿಸಬೇಕು, ಗಿಡ ನೆಡುವದರೊಂದಿಗೆ ಕನಿಷ್ಠ ಮೂರು ವರ್ಷ ಪಾಲಕರಂತೆ ಪೋಷಿಸಿದಲ್ಲಿ ಅವೂಗಳು ನಮಗೆ ನೂರು ವರ್ಷ ಪೋಷಿಸುತ್ತವೆ ಎಂದು ನುಡಿದರು.

ಕಾರ್ಯಕ್ರಮದ ಮುಖ್ಯಅತಿಥಿಸ್ಥಾನ ವಹಿಸಿದ ವೈದ್ಯಾಧಿಕಾರಿ ಶೇಷನಾಗ ಹಿಬಾರೆ ಮಾತನಾಡಿ ಗ್ರಾಮದ ಪ್ರಮುಖ ಬಿದಿಗಳು ಸೆರಿದಂತೆ ಅಸ್ಪತ್ರೆಯ ಆವರಣದಲ್ಲಿಯೂ ಗಿಡನೆಡುವ ಕಾರ್ಯಕ್ಕೆ ಚಾಲನೆ ದೊರೆತಿದ್ದು ಗ್ರಾಮ ಪಂಚಾಯತ ಹಾಗೂ ಅರಣ್ಯ ಇಲಾಖೆಯ ಕಾರ್ಯ ಶ್ಲಾಘನೀಯವಾಗಿದೆ ಹಾಗೆ ಅವಗಳ ಪೋಷಣಗೆ ವಿಶೇಷ ಕ್ರಮಕೈಗೊಳ್ಳಬೆಕೆಂದು ನುಡಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರೇವಣಸಿದ್ದ ಜಾಡರ್ ಮಾತನಾಡಿ ಪರಿಸರ ಉಳಿದಲ್ಲಿ ಮಾತ್ರ ನಾವೂ ಉಳಿಯಲು ಸಾದ್ಯ ಅದನ್ನರಿತ ಗ್ರಾಮದ ಯುವಕರು ಪರಿಸರ ಬೆಳಿಸಿ ಉಳಿಸುವಲ್ಲಿ ವಿಶೆಷ ಉತ್ಸಕತೆ ತೊರುತಿದ್ದು ಇಡಿ ಗ್ರಾಮವೆ ಹಸಿರು ಗ್ರಾಮವನ್ನಾಗಿ ಮಾಡುವ ಕಾರ್ಯದಲ್ಲಿ ತೋಡಗಿದ್ದೆವೆ ಎಂದು ನುಡಿದರು.

ಈ ಸಂದರ್ಭಲ್ಲಿ ತಾಲೂಕ ಪಂಚಾತಯ ಸದಸ್ಯರಾದ ವಿಜಯಕುಮಾರ ಕಡಗಂಚಿ. ವಲಯ ಅರಣ್ಯ ಉಪಾಧಿಕಾರಿ ಸಂಜುಕೂಮಾರ. ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ದಿಪಿಪ ಸಂತಪೂರೆ. ಅಪರೇಟರ್ ಶ್ರೀಕಾಂತ. ಗುರನಾಥರೆಡ್ಡಿ.ಬಸವರಾಜ ರಾಜೋಳ್ಳೆ. ಬಸವರಾಜ ಮಾಕಾ.ಮಲ್ಲಿಕಾರ್ಜುನ ಕುರಬಖೇಳಗೆ.ಶಂಕ್ರೆಪ್ಪಾ ಮಣಿಗೆರೆ. ಉಮೆಶ ತೇಲಂಗ್. ಸೆರಿದಂತೆ ವೈದ್ಯಕೀಯ ಸಿಬಂದ್ದಿ ಗ್ರಾಮದ ಗಣ್ಯರು ಉಪಸ್ಥಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.