ಭಾರಿ ಮಳೆಗೆ ರಸ್ತೆ ಸಂಪರ್ಕ ಕಡಿತ, ಕುಸಿದ ಮನೆ

ಭಾಲ್ಕಿ ತಾಲೂಕಿನ ಆನಂದವಾಡಿ ಸೇತುವೆ ಮೇಲಿಂದ ಹರಿಯುತ್ತಿರುವ ನೀರು

0

Gummata Nagari : Bidar News

ಭಾಲ್ಕಿ : ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಕಾರಂಜಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಆನಂದವಾಡಿ, ಇಂಚೂರ, ದಾಡಗಿ ಸೇತುವೆ ಮೇಲಿಂದ ನೀರು ಹರಿದ ಪರಿಣಾಮ ಬುಧವಾರ ಸಂಜೆವರೆಗೂ ರಸ್ತೆ ಸಂಪರ್ಕ ಕಡಿತಗೊಂಡಿತ್ತು.

ತಾಲ್ಲೂಕಿನ ಹಾಲಹಳ್ಳಿ (ಕೆ) ಗ್ರಾಮದಲ್ಲಿ ದಾಖಲೆಯ 148 ಮಿ.ಮೀ ಮಳೆ ಸುರಿದಿದೆ. ಖಟಕ ಚಿಂಚೋಳಿ 118, ಹಲಬಗಾ9 117.2, ಭಾಲ್ಕಿ 97.8, ನಿಟ್ಟೂರ (ಬಿ) 85.6, ಲಖನಗಾಂವ 82.6, ಸಾಯಿಗಾಂವ 68.8 ಮಿಮೀ ಮಳೆ ಆಗಿದೆ.

ಬಿರುಗಾಳಿ ಸಹಿತ ಮಳೆಗೆ ಹಾಲಹಳ್ಳಿಯ 11 ಕೆವಿ, ಹಲಬರ್ಗಾ, ನಿಟ್ಟೂರ 33 ಕೆವಿ ವಿದ್ಯುತ್ ಪ್ರಸರಣ ಅಡಿಯಲ್ಲಿ ಬರುವ ಗ್ರಾಮಗಳಿಗೆ ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆವರೆಗೂ ವಿದ್ಯುತ್ ಸಂಪರ್ಕ ಇರಲಿಲ್ಲ. ಜನರು ಮೊಬೈಲ್ ಚಾರ್ಚ್ ಮಾಡಿಕೊಳ್ಳಲು ಹೆಣಗಾಡಿದರು.

ಹಲಬರ್ಗಾ ಗ್ರಾಮದ ಮನೆಗಳಿಗೆ ನೀರು ನುಗ್ಗಿದ್ದರಿಂದ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಭೇಡಿ ನೀಡಿ ಜನರ ಸಮಸ್ಯೆ ಆಲಿಸಿದರು. ಕಾರಂಜಾ ಜಲಾಶಯ, ದಾಡಗಿ ಸೇರಿದಂತೆ ಇತರೆಡೆ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ, ಇತರ ಅಧಿಕಾರಿಗಳು ಸಂಚರಿಸಿ ಮಳೆಯಿಂದಾದ ಹಾನಿ, ಮನೆ ಕುಸಿತದ ಮಾಹಿತಿ ಕಲೆ ಹಾಕಿದರು.

ಸುರಕ್ಷಿತವಾಗಿರಲು ಶಾಸಕ ಖಂಡ್ರೆ ಮನವಿ

ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯುತ್ತಿದ್ದು, ಯಾರು ಸಹ ನದಿ ಹಾಗೂ ಹಳ್ಳಗಳನ್ನು ದಾಟುವ ಆತುರ ಮಾಡಬೇಡಿ. ಜೊತೆಗೆ ಜಾನವಾರುಗಳನ್ನು ಹಳ್ಳ, ನದಿ ತೀರಿಗೆ ಬಿಡಬೇಡಿ. ಮಳೆ ಇನ್ನೂ ಎರಡು ದಿನ ಹೀಗೆ ಮುಂದುವರಿಯುವ ಸಾಧ್ಯತೆಯಿದೆ. ರೈತರು ಮತ್ತು ಸಾರ್ವಜನಿಕರು ಆದಷ್ಟು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ಅತಿವೃಷ್ಟಿಯಿಂದಾಗಿ ಉಂಟಾಗಿರುವ ಬೆಳೆ ಹಾನಿ, ಮನೆ ಬಿದ್ದಿರುವ ಹಾಗೂ ಜೀವ ಹಾನಿ ಕುರಿತು ಕೂಡಲೇ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಬಿಡುಗಡೆಗೆ ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಶಾಸಕ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.