ಪ್ರತಿ ಹೇಕ್ಟರ್ಗೆ 50 ಸಾವಿರ ಪರಿಹಾರ ನೀಡಲು ಆಗ್ರಹ

ಹಾನಿ ಪ್ರದೇಶಗಳಿಗೆ ಶಾಸಕ ಈಶ್ವರ ಖಂಡ್ರೆ ಭೇಟಿ

0

Gummata Nagari : Bidar News

ಭಾಲ್ಕಿ : ತಾಲೂಕಿನ ಭಾತಂಬ್ರಾ, ಇಂಚೂರ, ಸಾಯಿಗಾಂವ, ಬೋಳೆಗಾಂವ ಸೇರಿ ಮುಂತಾದ ಕಡೆ ರೈತರ ಹೊಲಗಳಿಗೆ ಶಾಸಕ ಈಶ್ವರ ಖಂಡ್ರೆ ಅವರು ಭೇಟಿ ನೀಡಿ ಬೆಳೆಹಾನಿ ವೀಕ್ಷಿಸಿದರು.

ತಾಲೂಕಿನಲ್ಲಿ ಎರಡನೇ ಬಾರಿಗೆ ಪ್ರವಾಹ ಸಂಭವಿಸಿದ್ದು ಶೇ.90 ರಷ್ಟು ಬೆಳೆಹಾನಿ ಆಗಿದೆ. ರೈತರು ಕಟಾವು ಮಾಡಿಟ್ಟ ಸೋಯಾಬಿನ್ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ತೊಗರಿ ಹೊಲಗಳು ಜಲಾವೃತಗೊಂಡಿವೆ. ಕಬ್ಬಿನ ಹೊಲಗಳಲ್ಲಿ ಕಬ್ಬು ನೆಲಕ್ಕುರಳಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.

ಸೆಪ್ಟೆಂಬರ್‌ನಲ್ಲಿ ಆದ ಅತಿವೃಷ್ಟಿಗೂ ಇದು ವರೆಗೂ ಸರಕಾರ ನಯಾ ಪೈಸೆ ಪರಿಹಾರ ನೀಡಿಲ್ಲ. ಇದೀಗ ಎರಡನೇ ಬಾರಿಗೆ ಅತಿವೃಷ್ಟಿ ಆಗಿದ್ದು ರೈತರು ಸಂಕಷ್ಟದಲ್ಲಿ ಇದ್ದಾರೆ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ರೈತರ ಪ್ರತಿ ಹೇಕ್ಟರ್ ಜಮನೀಗೆ ಕನಿಷ್ಠ 50 ಸಾವಿರ ರೂ ಪರಿಹಾರ ನೀಡಬೇಕು ಹಾಗೂ ಕಬ್ಬು ಬೆಳೆ ವಿಮೆ ವ್ಯಾಪ್ತಿಗೆ ಸೇರಿಸಿ ಕಬ್ಬು ಬೆಳೆಗಾರರನ್ನು ರಕ್ಷಿಸಬೇಕು ಎಂದು ಶಾಸಕ ಖಂಡ್ರೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ಎಪಿಎಂಸಿ ಅಧ್ಯಕ್ಷ ಬನಸಿಲಾಲ್, ತಾಪಂ ಸದಸ್ಯ ಮಾರುತಿರಾವ ಮಗರ್ ಸೇರಿದಂತೆ ಮುಂತಾದವರು ಇದ್ದರು.

ಸಾಯಿಗಾಂವ ಸೇತುವೆಗೆ ಭೇಟಿ

ಶಾಸಕ ಈಶ್ವರ ಖಂಡ್ರೆ ಅವರು ಇದೇ ವೇಳೆ ಇಂಚೂರು ಸೇತುವೆಗೆ ಭೇಟಿ ನೀಡಿ ಸೇತುವೆ ಎತ್ತರಿಸುವ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಅಲ್ಲಿಂದ ಸಾಯಿಗಾಂವ ಸೇತುವೆ ಭೇಟಿ ನೀಡಿ ಪ್ರವಾಹ ಪ್ರದೇಶ ಹಾಗೂ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬ್ಯಾರೇಜ್ ವೀಕ್ಷಿಸಿದರು.

ಪ್ರವಾಹದಿಂದ ಬೆಳೆಹಾನಿ ಸಂಭವಿಸಿದ್ದು ಹೆಚ್ಚಿನ ಪರಿಹಾರ ಕೊಡಿಸಲು ಸರಕಾರ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು. 1 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ಬ್ಯಾರೇಜ್ ನಲ್ಲಿ ನೀರು ಸಂಗ್ರಹವಾಗಿರುವುದು ಸಂತಸ ತಂದಿದೆ. ಇದರಿಂದ ಈ ಭಾಗದಲ್ಲಿ ರೈತರ ನೀರಾವರಿ ಪ್ರದೇಶ ಹೆಚ್ಚಾಗಲಿದೆ ಶಾಸಕ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.