ಸ್ವಚ್ಛಗೊಳಿಸಲು ನಾಗರಿಕರ ಮನವಿ

ಮಳೆ ನೀರಿನಿಂದ ಗಬ್ಬೆದ್ದು ನಾರುತ್ತಿರುವ ಚರಂಡಿ

0

Gummata Nagari : Bidar News

ಬೀದರ : ಕಳೆದ ಒಂದು ವಾರದಿಂದ ಬೀದರ ನಗರದಲ್ಲಿ ಬೀಳುತ್ತಿರುವ ಧಾರಾಕಾರ ಮಳೆಯಿಂದ ಬೀದರ ನಗರಸಭೆ ವಾರ್ಡ ಸಂಖ್ಯೆ 11ರ ವ್ಯಾಪ್ತಿಯಲ್ಲಿ ಬರುವ ಬಡಾವಣೆ, ಕಾಲೋನಿ ಹಾಗೂ ಮೋಹಲ್ಲಾಗಳ ಚರಂಡಿಗಳು ಮಳೆ ನೀರಿನಿಂದ ತುಂಬಿ ಹೋಗಿದ್ದು, ಚರಂಡಿಯ ಹೊಲಸು ನೀರು ಮನೆಗಳಲ್ಲಿ ಸೇರುತ್ತಿದೆ. ಆದ್ದರಿಂದ ನಗರಸಭೆ ಪೌರಾಯುಕ್ತರು ಆದಷ್ಟು ಬೇಗ ವಾರ್ಡ 11ರ ವ್ಯಾಪ್ತಿಯ ಚರಂಡಿಗಳನ್ನು ಸ್ವಚ್ಛಗೊಳಿಸಲು ನಗರಸಭೆ ಪೌರ ಕಾರ್ಮಿಕರಿಗೆ ಸೂಚಿಸಬೇಕು ಎಂದು ವಾರ್ಡ 11ರ ಜನರು ವಿನಂತಿಸಿಕೊಂಡಿದ್ದಾರೆ.

ಈಗಾಗಲೇ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದಿನಾಂಕ 22-06-2020 ರಂದು ಮತ್ತು ನಗರಸಭೆ ಪೌರಾಯುಕ್ತರಿಗೆ 22-09-2020 ರಂದು ಮನವಿ ಪತ್ರಗಳು ಸಲ್ಲಿಸಿದ್ದರೂ ಯಾವುದೇ ರೀತಿಯ ಪ್ರಯೀಜನವಾಗಿಲ್ಲ ಎಂದು ವಾರ್ಡ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಳೆ ನೀರು ಮನೆಗಳಲ್ಲಿ ಹೋಗಿದ್ದರಿಂದ ಮನೆಯವರು ಮನೆಯಲ್ಲಿ ಬಂದ ಹೋರ ಹಾಕಲು ಹರಸಾಹಸ ಮಾಡುತ್ತಿದ್ದಾರೆ. ಚರಂಡಿಗಳು ಸ್ವಚ್ಛವಾಗಿದ್ದರೆ, ಮಳೆಯ ನೀರು ಸಲೀಸಾಗಿ ಚರಂಡಿ ಮೂಲಕ ಹರಿದು ಹೋಗುತ್ತವೆ. ಆದರೆ, ಚರಂಡಿ ಕಸದಿಂದ ತುಂಬಿ ಹೋಗಿದ್ದರಿಂದ ಮಳೆ ನೀರು ಸುಗಮವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ನಗರಸಭೆ ಅಧಿಕಾರಿಗಳು ಈ ಕೂಡಲೇ ಚರಂಡಿ ದುರಸ್ತಿ ಕಾರ್ಯ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.

ದಿನಾಂಕ : 14-09-2020 ರಂದು ನಗರಸಭೆ ಎಇಇ ಅವರು ವಾರ್ಡ ನಂಬರ 11ರ ಜನರಿಗೆ ನೋಟಿಸ್ ಜಾರಿ ಮಾಡಿದ ಬಳಿಕವೂ ಇಲ್ಲಿಯವರೆಗೆ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಈತ್ತ ತಲೆ ಹಾಕಿಲ್ಲ. ಆದ್ದರಿಂದ ಒಂದು ವಾರದೊಳಗಾಗಿ ವಾರ್ಡ ಸಂಖ್ಯೆ 11ರ ಚರಂಡಿಗಳು ಸ್ವಚ್ಛ ಮಾಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕುಟುಂಬ ಸಮೇತ ಬಂದು ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.