ರೈತ ಪರ ಕಾಯಿದೆಗೆ ವಿರೋಧಿಸುವುದು ಸರಿಯಲ್ಲ

0

Gummata Nagari : Bidar News

ಭಾಲ್ಕಿ : ರೈತಪರವಾದ ಕಾಯಿದೆಗೆ ಕೆಲ ಸ್ವಾರ್ಥ ರೈತಪರ ಸಂಘಟನೆಯ ಮುಖಂಡರು ವಿರೋಧ ವ್ಯಕ್ತ ಪಡಿಸಿರುವುದು ಸರಿಯಲ್ಲ ಎಂದು ಸಾವಯವ ಕೃಷಿ ಕ್ಷೇತ್ರದ ರೈತ ಮುಖಂಡ ಪ್ರಶಾಂತ.ಜಿ.ವಡಗೀರೆ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿದ ಅವರು, ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಹಾಗು ಮಾರಾಟ ಮಾಡುವ ಸಾತಂತ್ರ್ಯ ನೀಡುತ್ತಿರುವ ರೈತ ಪರವಾದ ಕಾಯಿದೆಯು, ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ದಲ್ಲಾಳಿಗಳ ಹಾವಳಿ ತಪ್ಪಸಿದಂತಾಗಿದೆ. ಕೃಷಿ ಬಿಲ್ ಮಸೂದೆ ಪಾಸ್ ಆದ ಕೇಲವ 10 ದಿವಸಳಗಲ್ಲಿಯೇ ರೈತರು ಬಳೆದ ಬೆಲೆಗೆ ಮಾರುಕಟ್ಟೆಬೆಲೆ ಪ್ರತಿಶತ 10% ರಿಂದ 20% ವೃದ್ಧಿಯಾಗಿದೆ. ಇದರರ್ಥ ಈ ಮಸೂದೆ ರೈತರ ಪರವಾಗಿದೆ ಎಂದು ಪ್ರತಿಪಾದಿಸಿದರು. ಆದರೆ ಕೆಲ ರೈತ ಮುಖಂಡರು ತಮ್ಮ ಸ್ವಾರ್ಥ ಸಾಧನೆಗಾಗಿ ರಾಜಕೀಯ ಮುಖಂಡರ ಜೊತೆ ಸೇರಿಕೊಂಡು ರೈತಪರ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಕಾಯಿದೆ ಮಂಡನೆಯಾದ ಕೆಲವೇ ದಿನಗಳಲ್ಲಿ ಬೆಳೆಗಳ ಬೆಲೆ ಹೆಚ್ಚಾಗಿದ್ದು, ರೈತರಿಗೆ ಖುಸಿ ತಂದು ಕೊಟ್ಟಿದೆ. ಅಲ್ಲದೇ ದಲ್ಲಾಳಿಗಳ ಹಾವಳಿಯೂ ತಪ್ಪಿದಂತಾಗಿದೆ ಎಂದು ಹೇಳಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.