ಚಿಂಚೋಳಿಯಲ್ಲಿ ಮಹಾನಾಯಕ ಧಾರವಾಹಿಯ ಪೋಸ್ಟರ್ ಬಿಡುಗಡೆ

0

Gummata Nagari : Bidar News

ಭಾಲ್ಕಿ : ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ಜಿಕನ್ನಡ ವಾಹಿನಿಯಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರರವರ ಜೀವನ ಚೆರಿತ್ರೆ ಉಳ್ಳ ಮಹಾನಾಯಕ ಧಾರವಾಹಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿದ್ದು ಅದರ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜರುಗಿತು.

ಸಂದರ್ಭದಲ್ಲಿ ಎಸ್.ಬಿ. ಬ್ಯಾಂಕ ಅಧಿಕಾರಿ ಯಶವಂತ ಎಲ್.ಜಿ ಮಾತನಾಡಿ ಡಾಕ್ಟರ್ ಬಿ.ಆರ್ ಅಂಬೇಡ್ಕರ ರವರನ್ನು ಕೇವಲ ಒಂದು ಧರ್ಮಕ್ಕೆ ಸೀಮಿತಗೊಳೆಸದೆ ಪ್ರತಿ ಒಬ್ಬರು ಗೌರವಿದಿಂದ ಕಾಣಬೇಕೆಂದು ನುಡಿದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರೇವಣಸಿದ್ದ ಜಾಡರ್ ಮಾತನಾಡಿ ಅಂಬೇಡ್ಕರರವರು ತಮ್ಮ ಜೀವನದಲ್ಲಿ ಸಾಕಷ್ಟು ಕಹಿ ನೋವುಗಳನ್ನು ಉಂಡು ಸಮಾಜದ ಕಲ್ಯಾಣಕ್ಕಾಗಿ ಅಮ್ರುತಾವ ನೀಡಿದ್ದಾರೆ. ಸಂವಿಧಾನ ನಿರ್ಮಾಣದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಕಟ್ಟಿಗೊಳೆಸುವದರೊಂದಿಗೆ ಪ್ರತಿಯೊಬ್ಬರು ತಲೆಎತ್ತಿ ಬಾಳುವಂತೆ ಮಾಡಿದ್ದಾರೆ. ದಿನದ 18 ತಾಸುಗಳ ಕಾಲ ಸುದೀರ್ಘ ಅಧ್ಯಾಯನ ಶಿಲರಾಗಿದ್ದ ಇವರು ಕಾನೂನು ಶಾಸ್ತ್ರ, ಅರ್ಥ ಶಾಸ್ತ್ರ, ರಾಜ್ಯಶಾಸ್ತ್ರ ಸೇರಿದಂತೆ ಹಲವು ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡಿಯುವದರೊಂದಿಗೆ ಸಮಾನತೆಯ ಭಾರತ ಕಟ್ಟುವಲ್ಲಿ ಹಾಗೂ ದೇಶದ ಎಳ್ಗೆಯಲ್ಲಿ ಅವಿರತವಾಗಿ ಶ್ರಮಿಸಿದ್ದು ವಿಶ್ವಜ್ಞಾನಯೋಗಿ ಯಾಗಿದ್ದಾರೆ ಎಂದು ನುಡಿದರು.

ಅದೆ ಧರ್ಮಪ್ರಚಾರಕರಾದ ಬೌದ್ದೆ ಕ್ರಾಂತಿ ಮಾತನಾಡಿ ಸಮಾಜದಲ್ಲಿ ಅಂಬೇಡ್ಕರ್ ರವರ ಕೊಡುಗೆ ಅಪಾರವಿದ್ದು ಮಹಿಳಾ ಸಬಲೀಕರಣ ಅಸ್ಪೃಶ್ಯತೆ ನಿವಾರಣಗೆ ಸ್ವಾತಂತ್ರ್ಯವಾಗಿ ಜೀವಿಸುವ ಹಕ್ಕು ಸೇರಿದಂತೆ ದೇಶಕ್ಕೆ ಸಾಕಷ್ಟು ಯೋಗದಾನ ಅವರದ್ದಾಗಿದ್ದು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಅವರ ಆದರ್ಶವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕೆಂದು ನುಡಿದರು.

ಪ್ರಮುಖರಾದ ತಾಲೂಕ ಪಂಚಾಯತ ಸದಸ್ಯ ವಿಜಯಕುಮಾರ ಕಡಗಂಚಿ. ನಾಗರಾಜ ಪೋಲಿಸ್ ಪಾಟಿಲ್. ವೈದ್ಯಾಧಿಕಾರಿ ಶೆಷನಾಗ ಹಿಬಾರೆ. ಅಶೊಕ ಗಾಯಕವಾಡ. ಶಿವಕೂಮಾರ ಮೇತ್ರೆ. ಶಿವರಾಜ ಬರದಾಪೂರೆ. ದಯಾನಂದ ಚಿಟ್ಟಾ. ರವಿ ಸಿಂದಬಂದಗಿ. ಪ್ರವಿಣ ಡಾಂಗೆ. ಸತಿಷ ಸಾಗರ. ಓಂಕಾರ ಪ್ಯಾಗೆ. ಅರುಣ ಸಾಗರ. ಓಂಕಾರ ಸಾಗರ. ರಾಹೂಲ ಭೌದ್ದೆ. ರಾಹೂಲ ಪ್ಯಾಗೆ. ಅರುಣ ಕಾರಪೇಂಟರ್. ಬಸವರಾಜ ಪ್ಯಾಗೆ. ದೇವಿಂದ್ರ ಭಾವಿಕಟ್ಟಿ. ಅಮ್ರುತ ಶಿಕ್ಷಣಕರ. ಅಶ್ವಿನ ಮೇತ್ರೆ. ಸಚಿನ ಕಾರಪೇಂಟರ್. ಅರ್ಜುನ ಸಾಗರ. ಸಚಿನ ಹುಳಕರ. ಶಿವಕುಮಾರ ಹೊಸಮನಿ. ಸಂತೋಷ ಕಲ್ಲುರೆ ಉಪಸ್ಥಿರಿದ್ದರು.

ಕಾರ್ಯಕ್ರಮವನ್ನು ಸತಿಷ ಸಾಗರ ನಿರೂಪಿಸಿದರು. ಒಂಕಾರ ಪ್ಯಾಗೆ ಸ್ವಾಗತಿಸಿದರು. ಬಲಭೀಮ ಹುಲಿಮನಿ ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.