ಭಾಲ್ಕಿ ತಾಲೂಕಿನಲ್ಲಿ ವಠಾರ ಶಾಲೆಗಳಲ್ಲಿ ಪಾಠ

ಅನುಷ್ಠಾನ ಶಿಕ್ಷಕರ ಕಾರ್ಯಕ್ಕೆ ಅಧಿಕಾರಿಗಳ ಮೆಚ್ಚುಗೆ

0

ಕೊರೊನಾ ಸಮಯದಲ್ಲಿ ಶೈಕ್ಷಣಿಕ ವರ್ಷದ ಅರ್ಧ ಅವಧಿ ಮುಗಿಯುತ್ತ ಬಂದಿದ್ದು ಇಂಥಹ ಸಂದಿಗ್ಧ ಪರೀಸ್ಥಿತಿಯಲ್ಲಿಯೂ ಕೂಡಾ ಶಿಕ್ಷಕರು ವಾರಿಯರ್ಸ ಆಗಿ ಮಕ್ಕಳಿಗೆ ವಠಾರ ಶಾಲೆಗಳಲ್ಲಿ ಸರಕಾರದ ನಿಯಮಗಳಂತೆ ಪಾಠ ಹೇಳಿಕೊಡುತ್ತಿದ್ದಾರೆ ಹಾಗೂ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನ ಮಾಡುವಲ್ಲಿ ಶಿಕ್ಷಕರ ಪರೀಶ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮನೋಹರ ಹೋಳ್ಕರ ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.

ಭಾಲ್ಕಿ : ಕೊರೊನಾ ಸಮಯದಲ್ಲಿ ಶೈಕ್ಷಣಿಕ ವರ್ಷದ ಅರ್ಧ ಅವಧಿ ಮುಗಿಯುತ್ತ ಬಂದಿದ್ದು ಇಂಥಹ ಸಂದಿಗ್ಧ ಪರೀಸ್ಥಿತಿಯಲ್ಲಿಯೂ ಕೂಡಾ ಶಿಕ್ಷಕರು ವಾರಿಯರ್ಸ ಆಗಿ ಮಕ್ಕಳಿಗೆ ವಠಾರ ಶಾಲೆಗಳಲ್ಲಿ ಸರಕಾರದ ನಿಯಮಗಳಂತೆ ಪಾಠ ಹೇಳಿಕೊಡುತ್ತಿದ್ದಾರೆ ಹಾಗೂ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನ ಮಾಡುವಲ್ಲಿ ಶಿಕ್ಷಕರ ಪರೀಶ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಮನೋಹರ ಹೋಳ್ಕರ ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಸಂಗಮೇಶ್ವರ ಪ್ರೌಢಶಾಲೆಯ ಮಕ್ಕಳಿಗೆ ಅಲ್ಲಿಯ ಶಿಕ್ಷಕರು ತರಗತಿವಾರು ಮತ್ತು ವಿಷಯವಾರು ಪಾಠ ಹೇಳಿಕೊಡುತ್ತಿದ್ದ ಸ್ಥಳಕ್ಕೆ ಅವರು ಭೇಟಿ ನೀಡಿ ಶಿಕ್ಷಕರ ಕಾರ್ಯ ವೈಖರಿಯನ್ನು ಮನಗಂಡು ಸಂತಸ ವ್ಯಕ್ತ ಪಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿದ್ಯಾಗಮ ಕಾರ್ಯಕ್ರಮಕ್ಕೆ ವಠಾರ ಶಾಲೆಯೇ ಮೂಲವಾಗಿದೆ. ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಇಂಟರನೆಟ್ ಸೌಲಭ್ಯವುಳ್ಳ ಸಾಧನಗಳಿರುತ್ತವೆ. ಅವರು ಅಂತರ್ಜಾಲದ ಮೂಲಕ ಪಾಠ ಕೇಳಬಹುದು. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಅದು ತಲುಪುವುದು ಬಹು ಕಷ್ಟದ ಕೆಲಸವಾಗಿದೆ. ಹೀಗಾಗಿ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳ ಮನೆ, ಮನೆಗೆ ತೆರಳಿ, ವಠಾರ ಶಾಲೆಗಳನ್ನು ಆಯೋಜಿಸಿ ಅವರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ಇಂದು ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮದಂತೆ ಎಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳು ಶಿಕ್ಷಕರಿಗೆ ಸೂಕ್ತ ಮಾಹಿತಿ ನೀಡಿ ಈ ಕಾರ್ಯಕ್ರಮ ಇನ್ನೂ ಚನ್ನಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.