ಆರೋಗ್ಯವೇ ಭಾಗ್ಯ ರೈತರ ಆರೋಗ್ಯ, ದೇಶದ ಆರೋಗ್ಯ: ಅಷ್ಟೂರೆ.

ಅನ್ನದಾತ ರೈತರು ಆರೋಗ್ಯವಂತರಾಗಿದ್ದರೆ ಮಾತ್ರ ನಾವೆಲ್ಲರೂ ಹಸಿವು ಮುಕ್ತರಾಗಿ ಬಾಳಲು ಸಾಧ್ಯ

0

ಭಾಲ್ಕಿ: ನಮ್ಮ ದೇಶದ ರೈತರ ಆರೋಗ್ಯವೇ, ದೇಶದ ಆರೋಗ್ಯವಾಗಿದೆ ಎಂದು ಹಿರಿಯ ನ್ಯಾಯವಾದಿ ರಾಜಶೇಖರ ಅಷ್ಟೂರೆ ಪ್ರತಿಪಾದಿಸಿದರು.
ಪಟ್ಟಣದ ಗಾಂಧಿ ವೃತ್ತದ ಹತ್ತಿರ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ನಡೆದ ಮಾಸ್ಕ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನ್ನದಾತ ರೈತರು ಆರೋಗ್ಯವಂತರಾಗಿದ್ದರೆ ಮಾತ್ರ ನಾವೆಲ್ಲರೂ ಹಸಿವು ಮುಕ್ತರಾಗಿ ಬಾಳಲು ಸಾಧ್ಯ. ಈ ನಿಟ್ಟಿನಲ್ಲಿ ರೈತ ಸಂಘದ ಮುಖಂಡರು, ಕೊರೋನಾ ಸಂದಿಗ್ದತೆಯನ್ನು ಎದುರಿಸಲು ಮಾಸ್ಕ್ ವಿತರಣೆ ಮಾಡುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ ಅಣ್ಣಾರಾವ ಪಾಟೀಲ, ಕೊರೋನಾ ಮಾಹಾಮಾರಿ ಇನ್ನೂ ನಮ್ಮಿಂದ ಬಿಟ್ಟುಹೊಗಿಲ್ಲ. ಇದನ್ನು ತಡೆಗಟ್ಟಲು ಮಾಸ್ಕ ಒಂದೇ ಅತ್ಯವಶ್ಯಕವಾಗಿದೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಅಣದೂರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ವಂಕೆ, ರೈತ ಸಂಘದ ರಾಜ್ಯ ಪ್ರತಿನಿಧಿ ಶೇಷರಾವ ಕಣಜಿಕರ, ಕಿಶನರವ ಪಾಟೀಲ ಕಳಸದಾಳ, ವಿಶ್ವಹಿಂದೂ ಪರಿಷತ್ ಮುಖಂಡ ಶಿವು ಲೋಖಂಡೆ ಕೊರೋನಾ ಮಾಹಾಮಾರಿ ಎದುರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಸುವರ್ಣಾ ಬಳತೆ, ವೈಜಿನಾಥ ಖಂಡು, ರಾಜಕುಮಾರ ಪಾಂಚಾಳ, ವೈಜಿನಾಥ ಪಾಟೀಲ ಉಪಸ್ಥಿತರಿದ್ದರು.
ರೈತ ಸಂಘದ ತಾಲೂಕು ಅಧ್ಯಕ್ಷ ಬಾಬುರಾವ ಜೊಳದಪಕಾ ಸ್ವಾಗತಿಸಿದರು. ಮಲ್ಲಿಕಾರ್ಜುನ ನಿರೂಪಿಸಿದರು. ಏಕನಾಥ ಪಾಂಚಾಳ ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.