ವಾಕ್ ಫಾರ್ ಹಾರ್ಟ್ ಕಾರ್ಯಕ್ರಮಕ್ಕೆ ಡಿಎಸ್ಪಿ ಡಾ.ದೇವರಾಜ ಚಾಲನೆ

0

Gummata Nagari : Bidar News

ಭಾಲ್ಕಿ : ಸಾರ್ವಜನಿಕರು ಮಾನಸಿಕ, ಶಾರೀರಿಕ, ಸಾಮಾಜಿಕ ಸ್ವಾಸ್ತ್ಯ ಕಾಪಾಡಿ ರೋಗಮುಕ್ತ ಜೀವನ ನಡೆಸಬೇಕು ಎಂದು ಡಿವೈಎಸ್‌ಪಿ ಡಾ.ದೇವರಾಜ ಬಿ. ಸಲಹೆ ನೀಡಿದರು.

ಇಲ್ಲಿನ ಚನ್ನಬಸವಾಶ್ರಮದ ಆವರಣದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ವತಿಯಿಂದ ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಆಯೋಜಿಸಿದ ವಾಕ್ ಫಾರ್ ಹಾರ್ಟ್ ಕಾರ್ಯಕ್ರಮಕ್ಕೆ ಹಸಿರು ಧ್ವಜ ತೋರಿಸಿ ಚಾಲನೆ ನೀಡಿ ಮಾತನಾಡಿದ ಅವರು, ಕಾಲ ಕಳೆದಂತೆ ಜನರಲ್ಲಿ ಪರಸ್ಪರ ಸ್ಪರ್ಧೆ ಹೆಚ್ಚುತ್ತಿದೆ. ಇದರಿಂದ ಮಾನಸಿಕವಾಗಿ ಒತ್ತಡಕ್ಕೊಳಗಾಗುತ್ತಿದ್ದಾರೆ. ನಮ್ಮ ದೇಶದಲ್ಲಿ ಜನರು ಅತೀ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಖೇದಕರ ಸಂಗತಿ.

ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗಿ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಉತ್ತಮ ದೇಹದಾರ್ಢ್ಯಕ್ಕಾಗಿ ಪ್ರತಿಯೊಬ್ಬರು ಪ್ರತಿನಿತ್ಯ ವಾಯುವಿಹಾರ ಮಾಡುವುದು ಅಗತ್ಯವಾಗಿದೆ. ರೊಟರಿ ಕ್ಲಬ್‌ನವರು ಆರೋಗ್ಯಪೂರ್ಣ ಜೀವನಕ್ಕಾಗಿ ಸಮಾಜೋಪಯೋಗಿ ಕಾರ್ಯಗಳು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರೋಟರಿ ಕೋಶಾಧ್ಯಕ್ಷ ಡಾ.ವಸಂತ ಪವಾರ, ಡಾ.ಶೈಲಜಾ ತಳವಾಡೆ, ಡಾ.ವೈಶಾಲಿ ಜಾಧವ, ಡಾ.ಅನೀಲ ಸುಕಾಳೆ, ಡಾ.ನಿತೀನ ಪಾಟೀಲ, ಡಾ.ಧನರಾಜ ಹುಲಸೂರೆ, ಡಾ.ಶ್ರೀರಂಗ ಬಿರಾದಾರ, ಡಾ.ಪ್ರಭು ಕೋಟೆ, ಉಮಾಕಾಂತ ವಾರದ, ಜೈಕಿಶನ ಬಿಯಾಣಿ, ಶಾಂತವೀರ ಸಿರ್ಗಾಪೂರೆ, ಸಂಜೀವಕುಮಾರ ಪಂಡರಗೆರೆ, ಅಶ್ವೀನ ಭೊಸ್ಲೆ, ವಿಜಯಕುಮಾರ ಪಾಟೀಲ, ನಾಗಶೆಟೆಪ್ಪ ಲಂಜವಾಡೆ, ಸಂತೋಷ ಬಿಜಿ ಪಾಟೀಲ್, ಸತೀಷ ಸೂರ್ಯವಂಶಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಾಕ್ ಫಾರ್ ಹಾರ್ಟ್ : ಚನ್ನಬಸವಾಶ್ರಮದಿಂದ ಆರಂಭಗೊAಡ ವಾಯುವಿಹಾರ ಬಸವೇಶ್ವರ, ಗಾಂಧಿ ಮತ್ತು ಅಂಬೇಡ್ಕರ್ ವೃತ್ತದ ಮೂಲಕ ಆಶ್ರಮದಲ್ಲಿ ಸಮಾವೇಶಗೊಂಡಿತ್ತು.

ರೋಟರಿ ಅಧ್ಯಕ್ಷ ಡಾ.ಯುವರಾಜ ಜಾಧವ ಸ್ವಾಗತಿಸಿದರು.ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಿಸಿದರು. ಕಾರ್ಯದರ್ಶಿ ಸಾಗರ ನಾಯಕ ವಂದಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.