ಎಕರೆಗೆ 50ಸಾವಿರ ರೂ. ಬಿಡುಗಡೆ ಮಾಡಿ; ಜೆ.ಡಿ.ಎಸ್.

ಇತ್ತಿಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೀಡಾದ ರೈತರ ಜಮೀನು ಮತ್ತು ಬೆಳೆ ನಾಶಗಿದೆ

0

ಭಾರಿ ಮಳೆಯಿಂದ ರೈತರು ಬೆಳೆದ ಉದ್ದು. ಹೆಸರು. ಸೋಯಾ. ಜೊತೆಗೆ ಫಲವತ್ತಾದ ಮಣ್ಣು ಕೂಡಾ ಕೊಚ್ಚಿಕೊಂಡು ಹೋಗಿದ್ದು ಸರ್ಕಾರ ಕೂಡಲೇ ಸರ್ವೇ ಮಾಡಿಸಿ ಬೆಳೆ ಹೋದ ರೈತರಿಗೆ ಪ್ರತಿ ಎಕರೆಗೆ ಇಪ್ಪತೈದು ಸಾವಿರ ಮತ್ತು ಮಣ್ಣು ಕೊಚ್ಚಿಕೊಂಡು ಹೋದ ರೈತರಿಗೆ ಪ್ರತಿ ಎಕರೆಗೆ ಐವತ್ತು ಸಾವಿರ ರೂಪಾಯಿ ಕೂಡಲೇ ಬಿಡುಗಡೆ ಮಾಡಬೇಕಾಗಿ ಎಂದು ಮನವಿ ಮಾಡಿದರು

ಭಾಲ್ಕಿ : ತಾಲೂಕಿನಾದ್ಯಂತ ಇತ್ತಿಚೆಗೆ ಸುರಿದ ಭಾರಿ ಮಳೆಯಿಂದ ಹಾನಿಗೀಡಾದ ರೈತರ ಜಮೀನು ಮತ್ತು ಬೆಳೆ ನಾಶಗಿದ್ದರಿಂದ ಇಂದು ಜೆ. ಡಿ. ಎಸ್. ತಾಲೂಕ ಘಟಕ ಹಾಗೂ ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರ ಆದೇಶ ಮೇರೆಗೆ  ಭತಂಬ್ರಾ, ಮೇಹಕರ, ಅಟ್ಟರ್ಗಾ, ಎಚ್. ತುಂಗವ, ಹಾಗೂ ಅನೇಕ ಗ್ರಾಮಗಳಲ್ಲಿ ಭೇಟಿ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೆ ಡಿ ಎಸ್ ತಾಲೂಕಾಧ್ಯಕ್ಷ ಗೋವಿಂದರಾವ್ ಬಿರಾದಾರ ಮಾತನಾಡಿ ಭಾರಿ ಮಳೆಯಿಂದ ರೈತರು ಬೆಳೆದ ಉದ್ದು. ಹೆಸರು. ಸೋಯಾ. ಜೊತೆಗೆ ಫಲವತ್ತಾದ ಮಣ್ಣು ಕೂಡಾ ಕೊಚ್ಚಿಕೊಂಡು ಹೋಗಿದ್ದು ಸರ್ಕಾರ ಕೂಡಲೇ ಸರ್ವೇ ಮಾಡಿಸಿ ಬೆಳೆ ಹೋದ ರೈತರಿಗೆ ಪ್ರತಿ ಎಕರೆಗೆ ಇಪ್ಪತೈದು ಸಾವಿರ ಮತ್ತು ಮಣ್ಣು ಕೊಚ್ಚಿಕೊಂಡು ಹೋದ ರೈತರಿಗೆ ಪ್ರತಿ ಎಕರೆಗೆ ಐವತ್ತು ಸಾವಿರ ರೂಪಾಯಿ ಕೂಡಲೇ ಬಿಡುಗಡೆ ಮಾಡಬೇಕಾಗಿ ಎಂದು ಮನವಿ ಮಾಡಿದರು. ಮಾಜಿ ಶಾಸಕ ಪ್ರಕಾಶ ಖಂಡ್ರೆ ಅವರ ಆರೋಗ್ಯ ಸರಿ ಇಲ್ಲದಿದ್ದರೂ ತಾಲೂಕಿನಾದ್ಯಂತ ವೀಕ್ಷಣೆ ಮಾಡಿ ರೈತರಿಗೆ ಧೈರ್ಯ ಹೇಳಲು ಹೇಳಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜಗದೀಶ ಖಂಡ್ರೆ  ಮತ್ತು ಕಿರಣ ಖಂಡ್ರೆ ಮಾತನಾಡಿ ರೈತರು ಬೆಳೆ ನಾಶವಾಗಿದ್ದರಿಂದ ಕಂಗಾಲಾಗಿ ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿದ್ದಾರೆ ಕೂಡಲೇ ಸರ್ಕಾರ ಪರಿಹಾರ ಒದಗಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಶೋಕ ಪಾಟೀಲ್ ಮೇಹಕರ. ಅಣ್ಣರಾವ್ ಹಲಸೆ, ಪಾಂಡುರಂಗ ಕನಸೆ, ಸುರಾಜ ಮಜಗೆ, ಪ್ರದೀಪ ನಾಗುರೆ, ಜಗನ್ನಾಥ ಬಿರಾದಾರ, ಸೂರ್ಯಕಾಂತ ಕೇಸ್ಕರ, ತಾನಾಜಿ ಗಜರೆ, ಯುಸುಫ ಶೇರಿಕಾರ, ಅಶೋಕ್ ಮಸ್ಕೆ, ತಾನಾಜಿ ಹಿಲಾಲಪುರೇ ಹಾಗೂ ಅನೇಕ ರೈತರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.