ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ರೋಟರಿ ಸದಸ್ಯರು ಶ್ರಮಿಸಲಿ

0

Gummata Nagari : Belgaum News

ಅಥಣಿ : ಸ್ವಚ್ಚ ಹಾಗೂ ಸಮೃದ್ದ ದೇಶವನ್ನು ಕಟ್ಟಬೇಕಾದರೆ ಪ್ರತಿಯೊಬ್ಬರು ಸ್ವಚ್ಚತೆ ಆದ್ಯತೆ ನೀಡಬೇಕು. ಕೋರೋನಾದಂತಹ ಅನೇಕ ಮಹಾಮಾರಿ ಕಾಯಿಲೆಗಳನ್ನು ಎದುರಿಸಲು ನಾವೇಲ್ಲರೂ ಒಗ್ಗಟ್ಟಿನಿಂದ ಹೋರಾಡುವದು ಅಗತ್ಯವಿದೆ. ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ರೋಟರಿ ಸದಸ್ಯರು ಶ್ರಮಿಸಬೇಕು ಎಂದು ಕೋಲ್ಹಾಪೂರ ಜಿಲ್ಲಾ ಪ್ರಾಂತಪಾಲ (ಆರ್.ಐ.ಡಿ3170) ಸಂಗ್ರಾಮ ಪಾಟೀಲ ಹೇಳಿದರು.

ಸ್ಥಳೀಯ ಡಾ.ಆರ್.ಎಚ್.ಕುಲಕರ್ಣಿ ಸಭಾಭವನದಲ್ಲಿ ರೋಟರಿ ಕ್ಲಬ್ ಅಥಣಿ ಇದರ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಕೆಲಯೊಂದು ಮಾರಣಾಂತಿಕ ಕಾಯಿಲೆಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ರೋಗಿಗಳು ಮರಣ ಹೊಂದುತ್ತಿದ್ದಾರೆ. ವಿದೇಶಗಳಲ್ಲಿ ಮೋಬೈಲ್ ಅಂಬ್ಯುಲೇನ್ಸ್ ಬಳಸುವ ಮೂಲಕ ಅನೇಕ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದಾರೆ.ಅದೇ ಮಾದರಿ ನಮ್ಮಲ್ಲಿ ಕೂಡಾ ಅಗತ್ಯವಿದೆ. ಅದರ ಜೊತೆಗೆ ಜನರಿಗೆ ಆರೋಗ್ಯ ಜೀವನದ ಬಗ್ಗೆ ತಿಳುವಳಿಕೆ ಅಗತ್ಯವಿದೆ. ಸ್ವಚ್ಚತೆ ಮತ್ತು ಶಸ್ತುಬದ್ದ ಜೀವನ ನಡೆಸುವಂತೆ ಜಾಗ್ರತಿ ಮೂಡಿಸಬೇಕಾಗಿದೆ. ಅದರ ಜೊತೆಗೆ ನಮ್ಮಲ್ಲಿ ಶಿಕ್ಷಣದ ಅರಿವು ಇನ್ನೂ ಹೆಚ್ಚಾಗಬೇಕು.ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ಇಂದಿನ ಮಕ್ಕಳಿಗೆ ಹೊಸತನವನ್ನು ಕಲಿಸಿಕೊಡಬೇಕು. ನಮ್ಮಲ್ಲಿ ಕೃಷಿ ಪ್ರಧಾನ ಉದ್ಯೋಗವಾಗಿದ್ದು, ರೈತಾಪಿ ಜನರಿಗೆ ಸಾವಯುವ ಕೃಷಿಯ ಬಗ್ಗೆ ತಿಳುವಳಿಕೆ ನೀಡಬೇಕಾದ ಅವಶ್ಯಕತೆಯಿದೆ. ಸಮಾಜಮುಖಿ ಸೇವೆಯಲ್ಲಿ ರೋಟರಿ ಸಂಸ್ಥೆಯುವ ಅನೇಕ ಕಾರ್ಯಕ್ರಮಗಳನ್ನು ಪ್ರತಿವರ್ಷ ನೀಡುತ್ತಲೇ ಬಂದಿದೆ. ಹಿಂದಿನ ಸದಸ್ಯರು ಕಳೆದ 21 ವರ್ಷಗಳಿಂದ ಮಾಡಿದ ಕಾರ್ಯಗಳು ಮುಂದಿನ ಪದಾಧಿಕಾರಿಗಳಿಗೆ ಸ್ಫೂರ್ತಿ ನೀಡುತ್ತವೆ. ಕಳೆದ ವರ್ಷ ನೇರೆ ಸಂತ್ರಸ್ಥರಿಗೆ ಸೇಲ್ಟರ್ ಕಿಟ್ ವಿತರಿಸಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಅಥಣಿ ರೋಟರಿ ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡಿ ತಾಲೂಕಿನಲ್ಲಿ ರೋಟರಿ ಸಂಸ್ಥೆಯ ಮೂಲಕ 21 ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ. ಕಳೆದ ಬಾರಿ ನಮ್ಮ ತಾಲೂಕಿನ ಕೃಷ್ಣಾ ನದಿ ತೀರದ 22 ಗ್ರಾಮಗಳ ನೇರೆ ಸಂತ್ರಸ್ಥರಿಗೆ ನೂರಾರು ಅಗತ್ಯ ವಸ್ತುಗಳನ್ನು ಒಳಗೊಂಡ ಸೇಲ್ಟರ್ ಕಿಟ್ ವಿತರಿಸಲಾಗಿದ್ದು, ಕೋರೋನಾ ಸಂದರ್ಭದಲ್ಲಿ ಕೂಡಾ ಸೇನಿಟೈಜರ್ ಮತ್ತು ಮಾಸ್ಕ ವಿತರಿಸಿ ಜಾಗ್ರತಿ ಮೂಡಿಸಲಾಗಿದೆ ಎಂದು ಹೇಳಿದ ಅವರು ರೋಟರಿ ಸಂಸ್ಥೆಯಲ್ಲಿ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಂತಸದಿಂದ ನಡೆಯುತ್ತದೆ. ಇಲ್ಲಿ ಅಧಿಕಾರ ಸ್ವೀಕರಿಸುವವರು ನಗುನಗುತಾ ಪಡೆದರೆ, ಅಧಿಕಾರ ಹಸ್ತಾಂತಿರಸುವವರು ಅಷ್ಟೇ ಖುಷಿಯಿಂದ ಅಧಿಕಾರ ನೀಡುತ್ತಾರೆ. ಹಿಂದಿನ ಸದಸ್ಯರು ಮಾಡಿದ ಕಾರ್ಯಗಳು ಮತ್ತು ಮುಂದೆ ಮಾಡುವ ಕಾರ್ಯಕ್ರಮಗಳು ಯಾವತ್ತೂ ಸಮಾಜಮುಖಿಯಾಗಿರುತ್ತದೆ. ಮುಂದಿನ ಸದಸ್ಯರು ಸದ್ಯದ ಸ್ವಲಂತ ಸಮಸ್ಯೆಗಳ ಬಗ್ಗೆ ಯೋಜನೆ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರೋಟರಿ ಕ್ಲಬ್‌ನ 2020-21 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸಿದ ಮೇಘರಾಜ ಪಾರಮಾರ ಮಾತನಾಡಿ ನನ್ನ ಜನ್ಮಭೂಮಿ ರಾಜಸ್ತಾನ ಆಗಿದ್ದರೂ ಕರ್ಮಭೂಮಿ ಅಥಣಿಯಾಗಿದ್ದು,ಇಲ್ಲಿನ ಸಿದ್ದೇಶ್ವರ ಮತ್ತು ಶಿವಯೋಗಿಗಳ ಕೃಪಾಶಿರ್ವಾದದಿಂದ ವ್ಯಾಪಾರ ಮತ್ತು ಸಮಾಜ ಸೇವೆ ಮಾಡುತ್ತಾ ಬಂದಿದ್ದೆನೆ.ಇಂದು ರೋಟರಿ ಕ್ಲಬ್‌ನ ಅಧ್ಯಕ್ಷನಾಗಿರುವದು ನನಗೆ ಸಂತಸ ತಂದಿದೆ.ನನಗೆ ಸಿಕ್ಕಿರುವ ಈ ಜವಾಬ್ದಾರಿಯನ್ನು ಎಲ್ಲ ಸದಸ್ಯರ ವಿಶ್ವಾಸ ಪಡೆದು ಪ್ರಾಮಾಣಿಕತೆಯಿಂದ ನಿರ್ವಹಣೆ ಮಾಡುವ ಮೂಲಕ ಸಮಾಜಕ್ಕಾಗಿ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತೇವೆ ಎಂದು ಹೇಳಿದರು. ಇದೇ ವೇಳೆ ಗೋವುಗಳ ಸಂರಕ್ಷಣೆಗಾಗಿ ಸ್ಥಳೀಯ ಗೋಶಾಲೆಗೆ 10 ಸಾವಿರ ರೂ.ಗಳ ಸಹಾಯಧನವನ್ನು ಕಾಣಿಕೆಯಾಗಿ ನೀಡಿದರು.

ಇನ್ನರವ್ಹಿಲ್ ಕ್ಲಬ್‌ನ ಉತ್ಕರ್ಷಾ ಪಾಟೀಲ, ಸಹಾಯಕ ಪ್ರಾಂತಪಾಲ ಸಚೀನ ದೇಶಮುಖ ಮತ್ತು ರೋಟರಿ ಕ್ಲಬ್‌ನ ಕಾರ್ಯದರ್ಶಿ ಸಂತೋಷ ಬೊಮ್ಮಣ್ಣನವರ,ಖಜಾಂಚಿ ಪ್ರಭಾಕರ ಸತ್ತಿ, ನಿಟಕಪೂರ್ವ ಅಧ್ಯಕ್ಷ ಶ್ರೀಕಾಂತ ಅಥಣಿ ಮಾತನಾಡಿದರು.

ಈ ವೇಳೆ ರೋಟರಿ ಕ್ಲಬ್ ವತಿಯಿಂದ ಅಥಣಿ ವಿದ್ಯಾವರ್ಧಕ ಪ್ರಾಥಮಿಕ ಶಾಲೆಗೆ 40 ಸಾವಿರ ರೂ.ಮೌಲ್ಯದ ಪ್ರೋಜೆಕ್ಟರ್ ದೇಣಿಗೆ ನೀಡಿದರು. ಈ ವೇಳೆ ಸುರೇಶ ಬಳ್ಳೊಳ್ಳಿ, ಸಚೀನ ದೇಸಾಯಿ, ವಿಜಯ ಬುರ್ಲಿ, ಅರುಣ ಯಲಗುದ್ರಿ, ಡಾ.ಚಿದಾನಂದ ಮೇತ್ರಿ, ಡಾ.ಆನಂದ ಕುಲಕರ್ಣಿ, ಡಾ.ಪಿ.ಪಿ ಮಿರಜ, ಭರತ ಸೋಮಯ್ಯಾ, ಅನೀಲ ದೇಶಪಾಂಡೆ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.