ಮಾಸ್ಕ್ ಇಲ್ಲದ ವಾಹನ ಸವಾರರಿಗೆ ಛಳಿ ಬಿಡಿಸಿದ ಪಿಎಸ್ಐ

0

ಸಾರ್ವಜನಿಕರ ಹಿತ ಕಾಪಾಡುವದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಪೌರ ಕಾರ್ಮಿಕರು, ಕೊರೋನಾ ಹೋಗಲಾಡಿಸಲು ಸಾಕಷ್ಟು ಶ್ರಮಿಸುತ್ತಿದ್ದಾರೆ, ಅದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಮಹಾಮಾರಿ ಕೊರೋನಾ ದಿನದಿನಕ್ಕೆ ಹೆಚ್ಚು ಹರಡುತ್ತಿರುವದರಿಂದ ಸಾರ್ವಜನಿಕರು ಮನೆಯಿಂದ ಹೊರಗಡೆ ಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಲೇಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮಾಸ್ಕ ಧರಿಸದೆ ಕೊರೋನಾ ಹರಡುವಿಕೆಗೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯವಾಗಿ ಎಪ್ಐಆರ್ ದಾಖಲಿಸಬೇಕು, ಕೊರೋನಾಗೆ ಭಯಪಡುವ ಅಗತ್ಯವಿಲ್ಲ ಜಾಗೃತೆ ಇರಲಿ.

Gummata Nagari : Belgaum News

ಅಥಣಿ: ಪಟ್ಟಣದಲ್ಲಿ ಕೊರೊನಾ ಮಹಾಮಾರಿ ಇನ್ನೂ ಸಹಜ ಸ್ಥಿತಿಯತ್ತ ಮರಳದೇ ಇದ್ದುದರಿಂದ  ಮಾಸ್ಕ್ ಇಲ್ಲದೇ ತಿರುಗಾಡುತ್ತಿದ್ದ ವಾಹನ ಸವಾರರಿಗೆ ಅಥಣಿ ಪಿಎಸ್ಐ ಕುಮಾರ ಹಾಡಕಾರ ನೇತೃತ್ವದಲ್ಲಿ ಇವತ್ತು ದಂಡ ಹಾಕುವದರ ಮೂಲಕ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ಪಟ್ಟಣದಲ್ಲಿ ಮಧ್ಯಾಹ್ನದ ವೇಳೆಗೆ ಮಾಸ್ಕ್ ಇಲ್ಲದೆ ವಾಹನ ಸವಾರರು ಹಾಗೂ ಸಾರ್ವಜನಿಕರ ಓಡಾಟವನ್ನು ಗಮನಿಸಿ ಕಾರ್ಯಾಚರಣೆಗೆ ಇಳಿದ  ಪಿಎಸ್ಐ ಕುಮಾರ ಹಾಡಕಾರ ಹಾಗೂ ಸಿಬ್ಬಂದಿ ವರ್ಗದವರು ಪಟ್ಟಣದ ವಿವಿಧ ಕಡೆ ಸಂಚರಿಸುತ್ತಿದ್ದವರಿಗೆ  ವಾಹನಗಳನ್ನು ತಡೆದು ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದವರಿಗೆ ದಂಡ ಹಾಕಿ ಬಿಸಿ ಮುಟ್ಟಿಸಿದ್ದಾರೆ.

ಈ ಬಗ್ಗೆ ಅಥಣಿ ಪಿಎಸ್ಐ ಕುಮಾರ ಹಾಡಕಾರ ಮಾತನಾಡಿ ಸರ್ಕಾರದ  ನಿಯಮದಂತೆ ನಾಗರಿಕರು ತಮ್ಮನ್ನು ತಾವು ರಕ್ಷಿಸಿಕೊಂಡು ಇತರರನ್ನೂ ರಕ್ಷಿಸಿ, ನಾವು ನಿಮಗಾಗಿ ಎನ್ನುವ ನಿಯಮದಡಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಲೇ ಬೇಕು. ಕಡ್ಡಾಯವಾಗಿ ಆದೇಶ ಇದ್ದರೂ ಕೆಲವರು ಮಾಸ್ಕ್ ಇಲ್ಲದೆ ಓಡಾಡುವುದು ಸರಿಯಲ್ಲ ಅಥಣಿ ಪಟ್ಟಣದ ಜನಸಾಮಾನ್ಯರು ಮಹಾಮಾರಿ ಕೊರೋನಾ ಸೋಂಕಿನಿಂದ ಜಾಗೃತರಾಗುವ ಅವಶ್ಯಕತೆ ಇದ್ದು ಜನರು ಯಾವತ್ತೂ ಮನೆಗಳಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಅನಿವಾರ್ಯವಾಗಿದೆ.

ನಿನ್ನೆಯೂ ಕೂಡ ಪುರಸಭೆಯವರು ಸರ್ಕಾರದ ಆದೇಶದ ಮೇರೆಗೆ ಮಾಸ್ಕ್ ಇಲ್ಲದವರಿಗೆ ದಂಡ ವಸೂಲಿ ಮಾಡಿದ್ದು, ಸರ್ಕಾರದ ನಿರ್ದೇಶನದಂತೆ ನಡೆಯುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಸರ್ಕಾರದ ಆದೇಶದ ಉಲ್ಲಂಘನೆ ಆದಂತೆ ಅಂಥವರ ಮೇಲೆ ಕಾನೂನಿನ ಪ್ರಕಾರ ಶಿಸ್ತು ಕ್ರಮ ಕೈಗೊಂಡು ಪ್ರಕರಣ ದಾಖಲಿಸಲಾಗುವುದು ಎಂದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.