ಅಥಣಿ ತಾಲೂಕಾಡಳಿತದಿಂದ ಗ್ರಾಪಂ ಚುನಾವಣೆಗೆ ಸಿದ್ಧತೆ

0

Gummata Nagari : Belgaum News

ಅಥಣಿ : ತಾಲೂಕಾಡಳಿತದಿಂದ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆ ಸಲುವಾಗಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಪೂರ್ವಭಾವಿಯಾಗಿ ಮತಪೆಟ್ಟಿಗೆಗಳನ್ನು ಸಿದ್ದಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಉಪತಹಶಿಲ್ದಾರ ಆರ್.ಆರ್.ಬುರ್ಲಿ ಹೇಳಿದರು.

ಪಟ್ಟಣದ ಹಳೆ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಪ್ರತಿ ಗ್ರಾಮದ ಗ್ರಾಮ ಸಹಾಯಕರು ಸೇರಿದಂತೆ ಇತರೆ ಸಿಬ್ಬಂದಿಗಳು ಮತಪೆಟ್ಟಿಗೆಯ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಇದರ ಉಸ್ತುವಾರಿ ವಹಿಸಿಕೊಂಡ ಉಪ ತಹಶೀಲ್ದಾರ ಆರ್, ಆರ್, ಬುರ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಗೆ ಪ್ರತಿ ಮತಗಟ್ಟೆವಾರು ಮತಪೆಟ್ಟಿಗೆಗಳಿಗೆ ಯಾವುದೇ ರೀತಿಯ ಧಕ್ಕೆಯಾಗದ ರೀತಿಯಲ್ಲಿ ಅವುಗಳನ್ನು ಶುದ್ದ ಹಾಗೂ ದುರಸ್ತಿಗೊಳಿಸಲಾಗುತ್ತಿದ್ದು ಸರ್ಕಾರದ ನಿರ್ದೇಶನದಂತೆ ತಾಲೂಕಾ ಆಡಳಿತ ಚುನಾವಣಾ ತಯಾರಿ ಕಾರ್ಯ ಪ್ರಾರಂಭಿಸಲಾಗಿದೆ ಚುನಾವಣಾ ದಿನಾಂಕ ನಿಗದಿ ಆದ ಕೂಡಲೇ ಎಲ್ಲ ಮತಪೆಟ್ಟಿಗೆ ಆಯಾ ಮತಗಟ್ಟೆಗಳಿಗೆ ಸಾಗಿಸಲು ಸಿದ್ದತೆಯಾಗಿ ಮಾಡಿಕೊಳ್ಳಲಾಗುತ್ತಿದೆ ಅಥಣಿ ತಾಲೂಕಿನ ಒಟ್ಟು 41 ಗ್ರಾಮ ಪಂಚಾಯತಿಯ ಚುನಾವಣೆ ನಡೆಯಬೇಕಿದ್ದು ಅದಕ್ಕೆ ಬೇಕಾದ 373 ಮತ ಪೆಟ್ಟಿಗೆಗಳನ್ನು ಸಿದ್ದ ಮಾಡಿಕೊಳ್ಳಲಾಗುತ್ತಿದ್ದು, ನಾಲ್ಕು ಪಂಚಾಯತಿಗಳಾದ ದರೂರ, ನಂದೇಶ್ವರ, ಮಹೇಶವಾಡಗಿ, ತೆಲಸಂಗ ಈ ನಾಲ್ಕು ಪಂಚಾಯತಿಗಳ ಚುನಾವಣೆಗಳು ಸದ್ಯ ನಡೆಯುವದಿಲ್ಲ ಏಕೆಂದರೆ ಅವು ಮುಂದಿನ ವರ್ಷದಲ್ಲಿ ಚುನಾವಣೆ ನಡೆಯುತ್ತವೆ ಎಂದು ಹೇಳಿದರು

ಈ ವೇಳೆ ಅಥಣಿ ಕಂದಾಯ ನಿರೀಕ್ಷಕ ಎಸ್, ಬಿ, ಮೆಣಸಂಗಿ, ಅನಂತಪುರ ಹೋಬಳಿ ಕಂದಾಯ ನಿರೀಕ್ಷಕ ತಮ್ಮಣ್ಣಾ ಖಲಾಟೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.