ಕುಂಭದ್ರೋಣ ಮಳೆ: ದೇವಾಸ್ಥಾನ ಜಲಾವೃತ

0

Gummata Nagari : Belgaum News

ಅಥಣಿ : ತಾಲೂಕಿನಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಯಲ್ಲಮವಾಡಿ ಯಲ್ಲಮ್ಮ ದೇವಿ ದೇವಾಲಯ ಜಲಾವೃತವಾಗಿದೆ.

ಯಲ್ಲಮವಾಡಿ ಕೆರೆ ತುಂಬಿದ ಪರಿಣಾಮವಾಗಿ ಹೆಚ್ಚಾದ ನೀರು ಹಳ್ಳದ ಮುಖಾಂತರ ಹರಿಯುತ್ತಿದೆ, ಇದರಿಂದ ದೇವಾಸ್ಥಾದ ಗರ್ಭಗುಡಿಗೆ ನೀರು ನುಸುಳಿದ್ದು, ಮಹಾ ಮಳೆಗೆ ತಾಲೂಕಿನ ಯಲ್ಲಮ್ಮನ ದೇವಾಲಯ ಜಲಾವೃತಗೊಂಡಿವೆ. ಭಕ್ತರು ದೇವಿಗೆ ದೂರದಿಂದ ನಮಸ್ಕರಿಸಿ ಪೂಜಿಸುತ್ತಿದ್ದಾರೆ. ಪೂಜಾ ಕೈಂಕರ್ಯಗಳಿಗೆ ಇದುವರೆಗೆ ಯಾವುದೇ ತೊಂದರೆಯಾಗಿಲ್ಲ ಇನ್ನು ಸ್ವಲ್ಪ ನೀರಿನ ಹರಿವು ಹೆಚ್ಚಾದರೆ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗುವುದು ಎಂದು ಅರ್ಚಕ ರಾಹುಲ್ ಪೂಜಾರಿ ದೂರವಾಣಿ ಮೂಲಕ ಗುಮ್ಮಟ ನಗರಿ ದಿನ ಪತ್ರಿಕೆ ವರದಿಗಾರರಿಗೆ ತಿಳಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.