ರೆಡಿ ಮಿಕ್ಸ್ ಕಾಂಕ್ರೇಟ್ ಘಟಕ ಉದ್ಘಾಟನೆ

0

Gummata Nagari : Belgaum News

ಅಥಣಿ : ಪಟ್ಟಣದ ಹೊರವಲಯದಲ್ಲಿ ಪ್ರಾರಂಭವಾದ ರೆಡಿ ಮಿಕ್ಸ್ ಕಾಂಕ್ರೇಟ್ ಘಟಕವನ್ನು ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಗಚ್ಚಿನಮಠದ ಪೂಜ್ಯರಾದ ಶಿವಬಸವ ಸ್ವಾಮೀಜಿ ಅವರು ಉದ್ಘಾಟನೆ ಮಾಡಿದರು.

ರೆಡಿ ಮಿಕ್ಸ್ ಘಟಕವನ್ನು ಉದ್ಘಾಟಿಸಿ  ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ ಈ ಘಟಕದಿಂದ ಅಥಣಿ ತಾಲೂಕಿನ ಜನರಿಗೆ ಅನಕೂಲವಾಗಲಿದೆ. ದೊಡ್ಡ ಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲು  ಕೂಲಿ ಕಾರ್ಮಿಕರ ಕೊರತೆ ಇದೆ. ಅಲ್ಲದೆ ಗುಣಮಟ್ಟದ ಮಿಶ್ರಣ ಹಾಗೂ ಕಾಮಗಾರಿಗಳು ಆಗುತ್ತಿರಲಿಲ್ಲ. ಅಲ್ಲದೆ ಅಥಣಿ ತಾಲೂಕಿನ ಸುತ್ತಮುತ್ತ 75 ಕಿ.ಮೀ ವರೆಗೆ ಯಾವುದೇ ಆರ್ ಎಮ್ ಸಿ ಪ್ಲಾಂಟ್‌ಗಳು ಇರಲಿಲ್ಲ ಸದ್ಯ ರಾಜು ಅಲಬಾಳ ಅವರು ಸುಮಾರು 1 ಕೋಟಿ 75 ಲಕ್ಷ ರೂ.ಗಳ ವ್ಯಚ್ಚದಲ್ಲಿ ಈ ಪ್ಲಾಂಟ್ ನಿರ್ಮಾಣ ಮಾಡಿದ್ದು ಇದರ ಸದುಪಯೋಗವನ್ನು ಎಲ್ಲ ಗುತ್ತಿಗೆದಾರರು, ಉದ್ದಿಮಿಗಳು, ಹಾಗೂ ದೊಡ್ಡ ಮಟ್ಟದ ಕಟ್ಟಡ ಕಾಮಗಾರಿಗಳಿಗೆ ಬಳಕೆ ಮಾಡವಂತೆ ಮನವಿ ಮಾಡಿದರು.

ಗಚ್ಚಿನ ಮಠದ ಪೂಜ್ಯರಾದ ಶಿವಬಸವ ಸ್ವಾಮಿಜಿಯವರು ಮಾತನಾಡಿ ಸಮಯ, ಶ್ರಮ ವ್ಯರ್ಥವಾಗುವುದಿಲ್ಲ, ಅಲ್ಲದೆ  ತಾಲೂಕಿನಲ್ಲಿ ಗುಣಮಟ್ಟದ ರೆಡಿ ಮಿಕ್ಸ್ ಪ್ಲಾಂಟ್ ನಿರ್ಮಾಣ ಮಾಡಿರುವುದರಿಂದ ಜನರಿಗೆ ಹೆಚ್ಚಿಗೆ ಅನಕೂಲವಾಗಲಿದೆ ಎಂದು ಹೇಳಿದರು.

ಈ ವೇಳೆ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಬಸವರಾಜ ಬುಟಾಳಿ, ಅಧಿಕಾರಿಗಳಾದ ವೀರಣ್ಣಾ ವಾಲಿ, ಮಹಾಂತೇಶ ಕವಲಾಪುರ, ಅರುಣ ಯಲಗುದ್ರಿ, ಗುತ್ತಿಗೆದಾರರಾದ ಬಾಹುಸಾಬ ಜಾಧವ, ಶಿವರುದ್ರಪ್ಪ ಗುಳ್ಳಪ್ಪನವರ, ಆರ್ ಎಮ ಪಾಟೀಲ, ಸಂತೋಷ ಸಾವಡಕರ  ಸೇರಿದಂತೆ ಇನ್ನೂ ಹಲವರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.