ಡಿಸಿಸಿ ಬ್ಯಾಂಕ್ ಚುನಾವಣೆ ಗೊಂದಲ ಬೇಡ; ಡಿಸಿಎಂ ಸವದಿ ಸ್ಪಷ್ಟನೆ

0

Gummata Nagari : Belgaum News

ಅಥಣಿ : ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಕಣದಲ್ಲಿ ರಂಗೇರುತ್ತಿದ್ದಂತೆಯೇ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಆರ್ ಎಸ್ ಎಸ್ ತನ್ನ ಕಾವು ಪಡೆದುಕೊಂಡಿದೆ.

ಈ ಬಗ್ಗೆ ಖಾಸಗಿ ಕಾರ್ಯಕ್ರಮ ವೇಳೆ ಮಾತನಾಡಿರುವ ಡಿಸಿಎಮ್ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಆರ್ ಎಸ್ ಎಸ್, ಬಿಜೆಪಿ ಎರಡು ಒಂದೆ ಆಗಿವೆ ಆರ್ ಎಸ್ ಎಸ್ ನೇರವಾಗಿ ರಾಜಕೀಯ ಮಾಡುವದಿಲ್ಲಾ, ಅದು ಬಿಜೆಪಿಗೆ ಮಾರ್ಗದರ್ಶನ ಮಾಡುತ್ತದೆ.

ಡಿ ಸಿ ಸಿ ಬ್ಯಾಂಕ ರಾಜ್ಯದಲ್ಲೇ ದೊಡ್ಡದಾದ ಬ್ಯಾಂಕ ಆಗಿದ್ದು ಡಿಸಿಸಿ ಬ್ಯಾಂಕ ಚುನಾವಣೆ ಹಿನ್ನಲೆಯಲ್ಲಿ ಆರ್ ಎಸ್ ಎಸ್ ಮುಖಂಡರ ಜೊತೆಗೆ ನಿನ್ನೆ ಅಥಣಿಯಲ್ಲಿ ಸಭೆ ನಡೆದಿದ್ದು ನಿಜ. ಬೆಳಗಾವಿ ಜಿಲ್ಲೆಯ ಬಿಜೆಪಿ ಪಕ್ಷದಲ್ಲಿ ಲಕ್ಷ್ಮಣ ಸವದಿ, ಕತ್ತಿ ಕುಟುಂಬ, ಹಾಗೂ ಜಾರಕಿಹೋಳಿ ಕುಟುಂಬ ಇರುವದರಿಂದ ನಮ್ಮ ಮದ್ಯ ವೈಮನಸ್ಸು ಬರಬಾರದು ಅನ್ನುವ ನಿಟ್ಟಿನಲ್ಲಿ ಸಭೆ ನಡೆದಿದೆ. ಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಸೌಹಾರ್ಧಯುತವಾಗಿ ನಡೆಸಬೇಕು ಅಲ್ಲದೆ ಅವಿರೋಧವಾಗಿ ಆಯ್ಕೆ ನಡೆಯಬೇಕು ಅನ್ನುವ ಬಗ್ಗೆ ಚರ್ಚೆ ನಡೆದಿದ್ದು ಮತ್ತೆ  ಬೆಳಗಾವಿಯಲ್ಲಿ ಸಭೆ ಸೇರಿ ಯಾವ ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಇರಬೇಕು ಅನ್ನುವದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಅಲ್ಲದೆ ಡಿಸಿಸಿ ಬ್ಯಾಂಕ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ನಾನು ಇನ್ನು ನಿರ್ಧಾರ ಮಾಡಿಲ್ಲಾ, ಪಕ್ಷ ಹಾಗೂ ಕಾರ್ಯಕರ್ತರ ಸಭೆ ನಡೆಸಿ ತಿರ್ಮಾನ ತೆಗೆದುಕೊಳ್ಳುತ್ತೇನೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.