ಬೆಳಗಾವಿಯಲ್ಲಿ ಕೈಗಾರೀಕರಣದ ಸುವರ್ಣಯುಗ ಶುರು: ಡಿಸಿಎಂ ಅಶ್ವತನಾರಾಯಣ

ಬೆಳಗಾವಿಯಲ್ಲಿ ಉಪಕರಣಾಗಾರ ಘಟಕ ಮತ್ತು ತರಬೇತಿ ಕೇಂದ್ರದ ಕಟ್ಟಡ ಉದ್ಘಾಟನೆ

0

Gummata Nagari : Belgaum News

ಬೆಳಗಾವಿ: ತರಬೇತಿ ಕೇಂದ್ರದಲ್ಲಿ ಕೌಶಲ್ಯಧಾರಿತ ಹಲವಾರು ಕೋರ್ಸಗಳು ವಿದ್ಯಾರ್ಥಿಗಳಿಗಾಗಿ ಲಭ್ಯವಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿ ಕೇಂದ್ರದಲ್ಲಿ ಪ್ರವೇಶಾತಿ ಪಡೆದು, ತರಬೇತಿ ಪಡೆದುಕೊಂಡು ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತನಾರಾಯಣ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಉದ್ಯಮಭಾಗದಲ್ಲಿರುವ ಸರ್ಕಾರಿ ಉಪಕರಣಾಗಾರ ಘಟಕ ಮತ್ತು ತರಬೇತಿ ಕೇಂದ್ರದ (ಜಿ.ಟಿ.ಟಿ.ಸಿ) ಕಟ್ಟಡದ ಉದ್ಘಾಟನೆಯು ಆನಲೈನ್ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಪೌಂಡ್ರಿ ಉದ್ಯೋಗ ಈಗಾಗಲೇ ಚಾಲನೆಯಲ್ಲಿದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರೀಕರಣ ಮುಂದುವರೆದು, ಬೆಳಗಾವಿಯಲ್ಲಿ ಕೈಗಾರಿಕರಣದ ಸುವರ್ಣಯುಗ ಪ್ರಾರಂಭವಾಗಲು ಅನೂಕುಲವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು, ಈ ಒಂದು ನೂತನ ಹಾಗೂ ಅತ್ಯಾಧುನಿಕ ಸೌಲಭ್ಯವುಳ್ಳ ಕಟ್ಟಡದಿಂದ ವಿದ್ಯಾರ್ಥಿಗಳ ಶಿಕ್ಷಣದ ಅನೂಕೂಲಕ್ಕಾಗಿ ಕಾರಣಿಬುತರಾದ ಅಭಯ ಪಾಟೀಲ ಅವರಿಗೆ ಧನ್ಯವಾದಗಳು ಕೋರಿದರು.

ಸ್ಮಾರ್ಟ್ ಸಿಟಿ ಅನುದಾನದಲ್ಲಿ ಶಾಸಕರಾದ ಅಭಯ ಪಾಟೀಲ ಅವರು ಕಾಲೇಜಿನ ಕಟ್ಟಡಕ್ಕೆ ರೂ. 10 ಕೋಟಿ ಅನುದಾನ ನೀಡಿದಕ್ಕಾಗಿ ಸರ್ಕಾರದ ಪರವಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.

ನೂತನ ಕೋರ್ಸ ಸೇರ್ಪಡೆ:

ಅದೇ ರೀತಿ ಡಿ.ಸಿ.ಎಂ ಸಿ.ಎನ್. ಅಶ್ವತನಾರಯಣ ಅವರು ಈ ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಮೆಕ್ಯಾಟ್ರಾನಿಕ್ಸ್ ವಿಭಾಗದ ನೂತನ ಕೋರ್ಸನ್ನು ಸೇರ್ಪಡೆ ಮಾಡಲು ಅನುಮತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ ಅವರು ಮಾತನಾಡಿ ಡಿ.ಸಿ.ಎಂ ಸಿ.ಎನ್. ಅಶ್ವತನಾರಯಣ ಅವರು ಡಿಪ್ಲೊಮಾ ಇನ್ ಮೆಕೊಟ್ರಾನಿಕ್ಸ ಒಂದು ಕೋರ್ಸನ್ನು ಪ್ರಾರಂಭಿಸಲು ಅವಕಾಶ ನೀಡಿದ ಅವರಿಗೆ ನನ್ನ ಹಾಗೂ ಬೆಳಗಾವಿ ಜಿ.ಟಿ.ಟಿ.ಸಿ ಸಂಸ್ಥೆ ಪರವಾಗಿ ಅಭಿನಂದನೆ ಕೋರುತ್ತೆನೆ.

ಕರ್ನಾಟಕ ಸರಕಾದಿಂದ ಬೆಳಗಾವಿಯಲ್ಲಿ ಮುಂದಿನ ದಿನಗಳಲ್ಲಿ ಐಟಿ.ಬಿಟಿ. ಕ್ಷೇತ್ರವನ್ನು ಪ್ರಾರಂಭಿಸಲು ಈಗಾಗಲೇ ಸತತ ಪ್ರಯತ್ನ ನಡೆದಿದ್ದು, ಬೆಂಗಳೂರು ನಗರಕ್ಕೆ ಬೆಳಗಾವಿ ಸಮಾಂತರವಾಗಿ ನಿಲ್ಲುವಂತೆ ಪ್ರಯತ್ನ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಪ್ರಾಸ್ತವಿಕವಾಗಿ ಜಿ.ಟಿ.ಟಿ.ಸಿ ತರಬೇತಿ ಕೇಂದ್ರದ ಪ್ರಾಧ್ಯಾಪಕರಾದ ಅರವಿಂದ ಖಡೇದ ಅವರು ಮಾತನಾಡಿ, ಈ ತರಬೇತಿ ಕೇಂದ್ರವು 1997 ರಲ್ಲಿ ಬೆಳಗಾವಿಯಲ್ಲಿ ಪ್ರಾರಂಭ ಮಾಡಲಾಯಿತು. ಇಲ್ಲಿ ವಿದ್ಯಾಭ್ಯಾಸ ಮುಗಿಸಿದಂತಹ ಅನೇಕ ವಿದ್ಯಾರ್ಥಿಗಳು ಈಗ (MNC) ಕಂಪನಿಗಳಲ್ಲಿ ಪ್ರಸ್ತುತವಾಗಿ ಉದ್ಯೋಗವನ್ನು ನಿರ್ವಹಿಸುತ್ತಿದ್ದು. ಈ ಒಂದು ತರಬೇತಿ ಕೇಂದ್ರದಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕೋರ್ಸನ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಸಂಧರ್ಭದಲ್ಲಿ ಬೆಳಗಾವಿ ಜಿ.ಟಿ.ಟಿ.ಸಿ ಪ್ರಾಂಶುಪಾಲರಾದ ಬಿ.ಜಿ.ಮೊಗೇರ, ಧಾರವಾಡ ಜಿ.ಟಿ.ಟಿ.ಸಿ ನೋಡಲ್ ಅಧಿಕಾರಿ ಅಶೋಕ ವಾಲಿಕರ, ಚಿಕ್ಕೋಡಿ ಜಿ.ಟಿ.ಟಿ.ಸಿ ಪ್ರಾಂಶುಪಾಲರಾದ ಖಾನ ಮೆಹೆಬೂಬ ಅಲಿ, ಧಾರವಾಡ ಜಿ.ಟಿ.ಟಿ.ಸಿ ಪ್ರಾಂಶುಪಾಲರಾದ ಶಿವನಾಂದ ಕುಂಬಾರ , ದಾಂಡೇಲಿ ಜಿ.ಟಿ.ಟಿಸಿ ಪ್ರಾಂಶುಪಾಲರಾದ ಶೀತಲಕುಮಾರ, ಗೋಕಾಕ ಜಿ.ಟಿ.ಟಿ.ಸಿ ಪ್ರಾಂಶುಪಾಲ ಉಮೇಶ ಬಡಕುಂದ್ರಿ ಹಾಗೂ ಕಾಲೇಜಿನ ಪ್ರಾಧ್ಯಾಪಕ ವರ್ಗದವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.