ಮಾನವೀಯತೆ ಮೆರೆದ ಸದಲಗಾ ಪಿಎಸ್ಐ ಬೀಳಗಿ

0

Gummata Nagari : Belgaum News

ಚಿಕ್ಕೋಡಿ: ಅಪಘಾತ ಸಂಭವಿಸಿ ತೀವ್ರ ಗಾಯಗೊಂಡಿದ್ದ ಬೈಕ ಸವಾರನನ್ನ ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಿ.ಎಸ್.ಐ ಆರ್.ವೈ.ಬೀಳಗಿ ಮಾನವೀಯತೆ ಮೆರೆದಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಸದಲಗಾ ನಗರದ ಗಣಪತಿ ಮಂದಿರದ ಬಳಿ ಕೆ.ಎಸ್.ಆರ್.ಟಿ.ಸಿ.ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನ ಮುಖಕ್ಕೆ ತೀವ್ರವಾದ ಗಾಯವಾದ ಘಟನೆ ನಡೆದಿದೆ.

ಅಪಘಾತದ ಸುದ್ದಿ ತಿಳಿದ ಸದಲಗಾ ಪಿ.ಎಸ್.ಐ ಆರ್.ವೈ.ಬೀಳಗಿ ಘಟನಾ ಸ್ಥಳಕ್ಕೆ ಆಗಮಿಸಿದವರೇ ಯಾವುದೇ ಅಂಬುಲೆನ್ಸ್ಗೆ ಕಾಯದೇ ತಮ್ಮದೇ ಇಲಾಖೆಯ ಸ್ವಂತ ವಾಹನದಲ್ಲಿ ಗಾಯಾಳು ಬೈಕ ಸವಾರನನ್ನು ಚಿಕಿತ್ಸೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳಿಸುವ ಮೂಲಕ ಪಿ.ಎಸ್.ಐ ಮಾಡಿದ ಈ ಕೆಲಸ ಮಾನವೀಯತೆಗೆ ಸಾಕ್ಷಿಯಾಯಿತು. ನಂತರ ಸಂಚಾರ ದಟ್ಟನೆಯಾಗಿದ್ದನ್ನು ಮುಂದೆ ನಿಂತು ತಕ್ಷಣ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಬಸ್ ಹಾಗೂ ಬೈಕ ನಡುವೆ ಅಪಘಾತ ಸಂಭವಿಸಿದಾಗ ಬೈಕ ಸವಾರನ ಮುಖಕ್ಕೆ ತೀವ್ರವಾದ ಗಾಯವಾಗಿದ್ದನ್ನು ನೋಡುತ್ತಿರುವ ಜನ ಮೊದಲು ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡಲಿಲ್ಲ ಇನ್ನೂ ಕೆಲವರು ಮೊಬೈಲ್‌ನಲ್ಲಿ ಅಪಘಾತದ ಚಿತ್ರೀಕರಣ ಮಾಡುತ್ತಿದ್ದರು ಅಲ್ಲಿಯವರು ಮಾನವೀಯತೆ ತೋರುವ ಕೆಲಸ ಮಾಡಲಿಲ್ಲ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.