ಚಿಮ್ಮಲಗಿ ಗ್ರಾಮಕ್ಕೆ ಜಿಪಂ ಅಧ್ಯಕ್ಷೆ ಭೇಟಿ, ಪರಿಶೀಲನೆ

0

Gummata Nagari : Bagalkot News

ಬಾಗಲಕೋಟೆ : ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಬಾಯಕ್ಕ ಮೇಟಿ ಅವರು ಗುಳೇದಗುಡ್ಡ ತಾಲೂಕ ಮಂಗಳಗುಡ್ಡ ಗ್ರಾಮ ಪಂಚಾಯತ ವ್ಯಾಪ್ತಿಯ ಚಿಮ್ಮಲಗಿ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

ಮಂಗಳಗುಡ್ಡ ಗ್ರಾಮದ ಸಾರ್ವಜನಿಕರು ನೀಡಿದ ದೂರಿನ ಅನ್ವಯ ಚಿಮ್ಮಲಗಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದನದ ತೊಟ್ಟಿ ನಿರ್ಮಾಣ ಕಾಮಗಾರಿಯಲ್ಲಿ ಲೋಪದೋಷವಿರುವುದು ಕಂಡುಬಂದಿತು. ಎಂಜಿಎನ್‌ಆರ್‌ಇಜಿ ಅಡಿಯಲ್ಲಿ ಸಂಪೂರ್ಣ ಕಡಗಳನ್ನು ಪರಿಶೀಲಿಸಿದಾಗ ಆಡಳಿತಾತ್ಮಕ, ತಾಂತ್ರಿಕ ಅನುಮೋದನೆ ಇಲ್ಲದೇ ಅಂದಾಜು ಪತ್ರಿಕೆಯ ಅನುಸಾರವಾಗಿ ಕಾಮಗಾರಿ ಅನುಷ್ಠಾನ ಆಗಿರುವದಿಲ್ಲ. ಜಿಪಿಎಸ್ ಅಥವಾ ಛಾಯಾಚಿತ್ರಗಳು ಅಪಲೋಡ್ ಆಗಿರುವದಿಲ್ಲ. ಅಭಿಯಂತರರ ಸಹಿ ಇರದಿರುವುದು ಸೇರಿದಂತೆ ಇತರೆ ದೋಷಗಳು ಕಂಡುಬಂದಿರುವುದಾಗಿ ತಿಳಿಸಿದರು.

ಸಾರ್ವಜನಿಕರ ಕುಡಿಯುವ ನೀರಿನ ಬಗ್ಗೆ ಪರಿಶೀಲಿಸಲಾಗಿ ಸ್ವಚ್ಛತೆಯಲ್ಲಿ ವೈಪಲ್ಯ ಇರುವುದನ್ನು ಕಂಡರು. ಅಲ್ಲದೇ ಆಶ್ರಯ ಮನೆಗಳಿಗೆ ಫಲಾನುಭವಿಗಳಿಗೆ ಹಂತ ಹಂತವಾಗಿ ನೀಡುವ ಹಣವು ಸಂದಾಯ ವಾಗದಿರುವ ಬಗ್ಗೆ ಸಾರ್ವಜನಿಕರು ದೂರು ಸಲ್ಲಿಸಿದರು. ಗ್ರಾ.ಪಂ ಕಚೇರಿಗೆ ಭೇಟಿ ನೀಡಿ 14ನೇ ಹಣಕಾಸಿನ ಅಡಿಯಲ್ಲಿ ಆರ್.ಡಬ್ಲೂಎಸ್ ಸೇರಿದಂತೆ ಎಲ್ಲ ಕಡತಗಳನ್ನು ಪರಿಶೀಲಿಸಲಾಗಿ ಅಪೂರ್ಣಗೊಂಡಿರುವುದು ಕಂಡುಬಂದಿತು.

ಸಾರ್ವಜನಿಕರ ದೂರಿನ ಮೇರೆಗೆ ಕಡತಗಳ ಪರಿಶೀಲನೆಯಲ್ಲಿ ದೋಷಾರೋಪಗಳು ಕಂಡುಬಂದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ ಅಬಿವೃಧ್ದಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿ.ಪಂ ಸಿಇಒ ಅವರಿಗೆ ಸೂಚಿಸಲಾಗುವುದೆಂದು ಬಾಯಕ್ಕ ಮೇಟಿ ತಿಳಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.