ವಿಶ್ವ ಪ್ರವಾಸೋದ್ಯಮ ದಿನಾಚಾರಣೆ ಆಚರಣೆ

0

Gummata Nagari : Bagalkot News

ಬಾದಾಮಿ : ಐತಿಹಾಸಿಕ ಸ್ಥಳ ಚಾಲುಕ್ಯ ನಾಡಿನ ರಾಜ್ಯಧಾನಿಯಾದ ಬಾದಾಮಿ ನಗರದಲ್ಲಿ ಬಾಗಲಕೋಟೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ, ಬಾದಾಮಿ ಹೋಟೆಲ್ ಅಸೋಸಿಯೇಷನ್ ಸಹಯೋಗದೊಂದಿಗೆ ವಸ್ತು ಸಂಗ್ರಹಾಲಯ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಆಚರಿಸಿದರು.

ಪಾರಂಪರಿಕ ನಡಿಗೆಯ ಮೂಲಕ ಗುಹಾಂತರ ದೇವಾಲಯ, ವಸ್ತು ಸಂಗ್ರಹಾಲಯ, ಭೂತನಾಥ ದೇವಾಲಯ, ಕಪ್ಪೆ ಆರ್ಭಟ್ಟನ ಶಾಸನ, ಮಾಲಗತ್ತಿ ಶಿವಾಲಯವನ್ನು ವಿಕ್ಷಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಅನೇಕರಿಗೆ ಗೌರವ ಸನ್ಮಾನ ಮಾಡಿದ್ದರು. ನಿವೃತ್ತ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕರವೀರಪ್ರಭು ಕ್ಯಾಲಕೊಂಡ ಅತಿಥಿ ಉಪನ್ಯಾಸ ನೀಡಿದ್ದರು.

ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾಧಿಕಾರಿ ಕ್ಯಾಪ್ಟನ್ ರಾಜೇಂದ್ರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಅಧಿಕಾಗಳು, ಮಾಂತೇಶ ಹಟ್ಟಿ, ಅರುಣಕುಮಾರ ಶಹಾಪುರ ಹಾಗೂ ಅನೇಕರು ಭಾಗವಹಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.