ವಿಶ್ವ ಬಿದಿರು ಬಾಂಬು ದಿನಾಚಾರಣೆ

0

Gummata Nagari : Bagalkot News

ಬಾದಾಮಿ : ನಗರದ ಕೇತೇಶ್ವರ ಎಂಟಪ್ರೈಸ್ ಮೇದಾರ ಸಮಾಜದ ಭಾಂದವರು ಹಮ್ಮಿಕೊಂಡಿದ ವಿಶ್ವ ಬಿದಿರು ಬಾಂಬು ದಿನಾಚರಣೆ ಅಂಗವಾಗಿ ಬಿದಿರುಗಳಿಗೆ ಪೂಜೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾನಾಡಿದ ಸಂಗಮೇಶ ಮೇದಾರ ಮತ್ತು ಪ್ರವೀಣ ಮೇದಾರ ನಮ್ಮ ಸಮುದಾಯದವರಿಗೆ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಬಿದಿರು ಬಾಂಬುಗಳಿಂದ ತಯಾರು ಮಾಡುವ ವಸ್ತಗಳಾದ ನಿಚ್ಚನಿಕ್ಕಿ, ಕುರಿ ತಟ್ಟಿ, ರೊಟ್ಟಿ ಬುಟ್ಟಿ, ಕೇರುವ ಮರ, ಮದುವೆಯ ಬಾಸಿಂಗ ಬುಟ್ಟಿ, ಬಿಸನಿಕೆ, ಪತ್ರಿ ಬುಟ್ಟಿ ಹೀಗೆ ಅನೇಕ ವಸ್ತುಗಳನ್ನು ತಯಾರಿಸಿ ನಮ್ಮ ಜೀವನೋಪಾಯ ನಡೆಸಬೇಕು ಇದು ನಮ್ಮ ಕುಲಕಸುಬುವಾಗಿದೆ. ಕರ್ನಾಟಕದಲ್ಲಿ ಒಟ್ಟು 32500 ಜನ ಸಂಖ್ಯೆಯನ್ನು ನಮ್ಮ ಸಮಾಜ ಹೊಂದಿದೆ. ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಸುಮಾರು 2500 ಜನಸಂಖ್ಯೆ, ಬಾದಾಮಿಯಲ್ಲಿ 80 ಜನರು ಇದ್ದಾರೆ ಎಂದು ಹೇಳಿದ್ದರು.

ಈ ಸಂದರ್ಭದಲ್ಲಿ ಮಂಜುನಾಥ ಮೇದಾರ, ಪರಶುರಾಮ ಮೇದಾರ, ದಾನೇಶ ಮೇದಾರ ಮತ್ತು ಅನೇಕರು ಭಾಗವಹಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.