ಸಾರಿಗೆ ನೌಕರರ ಮುಷ್ಕರ: ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಿಸದೇ ಸಾವು

0

Gummata Nagari: Bagalkot

ಬಾಗಲಕೋಟೆ: ಸಾರಿಗೆ ನೌಕರರ ಪ್ರತಿಭಟನೆಯ ಮಧ್ಯೆಯೂ ಬಸ್​ ಓಡಿಸುತ್ತಿದ್ದಾಗ ಕಿಡಿಗೇಡಿಗಳು ಕಲ್ಲು ಎಸೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಸಾವನ್ನಪ್ಪಿರುವ ಘಟನೆ ಜಮಖಂಡಿ ತಾಲೂಕಿನ ಕವಟಗಿ ಪುನರ್ ವಸತಿ ಕೇಂದ್ರದ ಬಳಿ ನಡೆದಿದೆ.

ಎನ್.ಕೆ ಅವಟಿ (55 ವರ್ಷ) ಮೃತ ಬಸ್ ಚಾಲಕ. ಸಾರಿಗೆ ನೌಕರರ ಮುಷ್ಕರದ ನಡುವೆಯೂ ಎನ್.ಕೆ ಅವಟಿ ಕೆಲಸಕ್ಕೆ ಹಾಜರಾಗಿದ್ದರು. ಆದರೆ ಕೆಲ ಕಿಡಿಗೇಡಿಗಳು ಕಲ್ಲು ಎಸೆದ ರಭಸಕ್ಕೆ ಬಸ್‌ನ ಗಾಜು ಒಡೆದು ಚಾಲಕ ಅವಟಿ ಅವರ ಎದೆಗೆ ಬಲವಾಗಿ ಬಿದ್ದಿತ್ತು. ಕೂಡಲೇ ಅವರನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಿಜಯಪುರದಿಂದ ಜಮಖಂಡಿ ನಗರಕ್ಕೆ ಬರುತ್ತಿತ್ತು ಎಂದು ತಿಳಿದುಬಂದಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.