ಹಿಂಗಾರು, ಬೇಸಿಗೆ ಹಂಗಾಮಿಗೆ ಬಿತ್ತನೆ ಬೀಜ ವಿತರಣೆ

0

ಬೆಳೆವಾರು ರಿಯಾಯಿತಿ ದರಗಳ ವಿವರ
ಜೋಳ ಸಾರ್ವಜನಿಕ ತಳಿ ಪ್ರತಿ ಕೆ.ಜಿ.ಗೆ ಸಾಮಾನ್ಯ ವರ್ಗದವರಿಗೆ 20 ರೂ., ಪರಿಶಿಷ್ಟ ಜಾತಿ, ಪಂಗಡದವರಿಗೆ 30 ರೂ. ನಿಜಚೀ ಟಿ ಅವರಿಗೆ ಸಾಮಾನ್ಯರಿಗೆ 19 ರೂ., ಎಸ್ಸಿ, ಎಸ್ಟಿಗೆ 28.50 ರೂ., ಕಡಲೆ ಸಾಮಾನ್ಯ 25 ರೂ., ಎಸ್ಸಿ, ಎಸ್ಟಿಗೆ 37.50 ರೂ., ಸೂರ್ಯಕ್ರಾಂತಿ ಸಂಕರ ಸಾಮಾನ್ಯ 80 ರೂ., ಎಸ್ಸಿ, ಎಸ್ಟಿಗೆ 120 ರೂ., ಮೆಕ್ಕಜೋಳ ಸಾಮಾನ್ಯ 20 ರೂ., ಎಸ್ಸಿ, ಎಸ್ಟಿಗೆ 30 ರೂ., ಶೇಂಗಾ ಕಾಳು ಹೊಸ ತಳಿ ಪ್ರಾಮಾಣಿತ ಸಾಮಾನ್ಯರಿಗೆ 22 ರೂ, ಎಸ್ಸಿ ಎಸ್ಟಿ ಅವರಿಗೆ 33 ರೂ, ನೀಜಚೀಟಿ ಸಾಮಾನ್ಯರಿಗೆ 21 ರೂ, ಎಸ್ಸಿ, ಎಸ್ಟಿಗೆ 32 ರೂ, ಹಳೆ ತಳಿಗೆ ಸಾಮಾನ್ಯ 20 ರೂ, ಎಸ್ಸಿ, ಎಸ್ಟಿಗೆ 30 ರೂ, ನಿಜಚೀಟಿ ವಿಧಕ್ಕೆ ಸಾಮಾನ್ಯರಿಗೆ 19 ರೂ, ಎಸ್ಸಿ, ಎಸ್ಟಿಗೆ 28.50 ರೂ. ಆಗಿರುತ್ತದೆ.

Gummata Nagari : Bagalkot News

ಬಾಗಲಕೋಟೆ : ಜಿಲ್ಲೆಯಲ್ಲಿ ಪ್ರಸಕ್ತ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬಿತ್ತನೆಗಾಗಿ ಎಲ್ಲ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಮಾರಾಟ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲು ದಾಸ್ತಾನು ಮಾಡಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.

ವಿವಿಧ ಬೆಳೆಗಳಾದ ಕಡಲೆ, ಜೋಳ, ಸೂರ್ಯಕಾಂತಿ, ಮೆಕ್ಕೆ ಜೋಳ, ಶೇಂಗಾ, ಗೋಧಿ ಇತ್ಯಾದಿ ಬೆಳೆಗಳ ಅವಶ್ಯಕತೆಗನುಗುಣವಾಗಿ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದ್ದು, ರೈತ ಭಾಂದವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಎಲ್ಲಾ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೇರ್ ಅಥವಾ ಅವರ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ಬಿತ್ತನೆ ಬೀಜ ವಿತರಿಸಲಾಗುತ್ತದೆ.

ಸ್ವಪರಾಗಸ್ಪರ್ಶಿ ಬೆಳೆಗಳ ಪ್ರಮಾಣಿತ ಬಿತ್ತನೆ ಬೀಜಗಳನ್ನು ರೈತರಿಗೆ ಒಮ್ಮೆ ವಿತರಿಸಿದಲ್ಲಿ, ಬೀಜ ಬದಲಿಕೆ ಅನುಪಾತದನ್ವಯ ಮುಂದಿನ ಮೂರು ವರ್ಷಗಳ ಬಳಿಕ ಅದೇ ಬೆಳೆ/ತಳಿಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುವ ಕಾರಣ ರೈತರು ಒಳ್ಳೆಯ ಬೀಜಗಳನ್ನು ಮುಂದಿನ ವರ್ಷಗಳ ಬಿತ್ತನೆಗಾಗಿ ಕಾಯ್ದಿಟ್ಟುಕೊಳ್ಳಲು ಕೋರಿದ್ದಾರೆ. ಹೋಬಳಿವಾರು ಕೇಂದ್ರಗಳಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ತಮ್ಮ ಹೋಬಳಿಯ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ಕೆ-ಕಿಸಾನ್ ತಂತ್ರಾAಶದ ಆನ್‌ಲೈನ್ ಬಿಲ್ಲುಗಳ ಮುಖಾಂತರ ವಿತರಿಸುತ್ತಿರುವ ಕಾರಣ, ಬಿತ್ತನೆ ಬೀಜ ಪಡೆಯಲು ರೈತರು ಈಖUIಖಿS/ಕೆ-ಕಿಸಾನ್ ನೋಂದಣಿ ಸಂಖ್ಯೆ (ಈIಆ), ಬೀಜದ ಪಾಸ್ ಪುಸ್ತಕ ಹಾಗೂ ಆಧಾರ ಕಾರ್ಡನ್ನು ತೆಗೆದುಕೊಂಡು ಬರಬೇಕು.

ಮಾರಾಟಕ ಕೇಂದ್ರಗಳ ವಿವವ ಇಂತಿದೆ. ಬಾದಾಮಿ ತಾಲೂಕಿನ ಬಾದಾಮಿ ರೈತ ಸಂಪರ್ಕ ಕೇಂದ್ರ (8277933519), ಕುಳಗೇರಿ (8277933524), ಕೆರೂರ (8277933550), ಗುಳೇದಗುಡ್ಡ (8277933524), ಬಾಗಲಕೋಟೆ ತಾಲೂಕಿನ ಬಾಗಲಕೋಟೆ ರೈತ ಸಂಪರ್ಕ ಕೇಂದ್ರ (8277933540), ಕಲಾದಗಿ (8277933532), ರಾಂಪೂರ (8277933538), ಹುನಗುಂದ ತಾಲೂಕಿನ ಹುನಗುಂದ ಮತ್ತು ಕೂಡಲ ಸಂಗಮ ರೈತ ಸಂಪರ್ಕ ಕೇಂದ್ರ (8277933566), ಅಮೀನಗಡ ಮತ್ತು ಗುಡೂರ (8277933557), ಕರಡಿ ಮತ್ತು ಹುನಗುಂದ ಎಪಿಎಂಸಿ (8277933566), ಇಲಕಲ್ಲ ಮತ್ತು ಕಂದಗಲ್, ನಂದವಾಡಗಿ ಪಿಕೆಪಿಎಸ್ (8277933562).

ಬೀಳಗಿ ತಾಲೂಕಿನ ಬೀಳಗಿ, ಅನಗವಾಡಿ ರೈತ ಸಂಪರ್ಕ ಕೇಂದ್ರ (8277933543), ಜಮಖಂಡಿ ತಾಲೂಕಿನ ಜಮಖಂಡಿ (8277933572), ಸಾವಳಗಿ, ಚಿಕ್ಕಲಕಿ ಕ್ರಾಸ್, ಗೋಠೆ (8277933580), ತೇರದಾಳ, ಜಮಖಂಡಿ ಮಹಾಲಿಂಗಪೂರ (8277933579), ಮುಧೋಳ ತಾಲೂಕಿನ ಮುಧೋಳ ರೈತ ಸಂಪರ್ಕ ಕೇಂದ್ರ (8277933588), ಲೋಕಾಪೂರ, ಮುಧೋಳ ಹೆಚ್ಚುವರಿ ಮಾರಾಟ ಕೇಂದ್ರ (8277927771)ವನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.