ಬಾದಾಮಿ ತಾಲೂಕು ನೆರೆ ಹಾನಿ ವೀಕ್ಷಿಸಿದ ಶಾಸಕ ಸಿದ್ದರಾಮಯ್ಯ

0

Gummata Nagari  : Bagalkot News

ಬಾದಾಮಿ : ಬಾದಾಮಿ ತಾಲೂಕಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಹುಬ್ಬಳ್ಳಿ – ಬಿಜಾಪುರ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ಇರುವ ಕೊಣ್ಣೂರ ಗ್ರಾಮದ ಮೇಲ ಸೇತುವೆ ಹಾಗೂ ಗೋವನಕೊಪ್ಪ ಗ್ರಾಮದಲ್ಲಿ ಇರುವ ಹಳೆ ಬ್ಯಾರೇಜ್‌ನ್ನು ಮಾಜಿ ಸಿಎಂ ಸಿದ್ದರಾಮಯ್ಯ ವೀಕ್ಷಣೆ ಮಾಡಿದರು.

ನಂತರ ಗದಗ ಮತ್ತು ಬಾಗಲಕೋಟೆಗೆ ಸಂಪರ್ಕಿಸುವ ಬಾದಾಮಿ ಮಾರ್ಗದ ಮಧ್ಯದಲ್ಲಿ ಬರುವ ಚೋಳಚಗುಡ್ಡ ಗ್ರಾಮದಲ್ಲಿ ಇರುವ ಚೆಕ್ ಡ್ಯಾಂ, ಹಾಗೂ ಗದಗ ಜಿಲ್ಲೆಯ ಹೊಳೆ ಆಲೂರ, ಮತ್ತು ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಬರುವ ನೀರಲಗಿ ಗ್ರಾಮದ ಮಧ್ಯೆ ಇರುವ ಮೇಲಸೇತುವೆಗಳನ್ನು ವೀಕ್ಷಿಸಿ ಪ್ರವಾಹ ಬಂದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಸಂಚಾರಕ್ಕೆ ಅನಾನುಕೂಲವಾಗುವುದರಿಂದ ಸೇತುವೆ ಕಟ್ಟಡಗಳನ್ನು ಎತ್ತರವಾಗಿ ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಲು ಮನವಿ ಮಾಡಿಕೊಂಡರು. ನಂತರ ಎಲ್ಲ ಮೇಲಸೇತುವೆಗಳನ್ನು ವೀಕ್ಷಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ವರುಣಾ ವಿಧಾನಸಭೆ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಎಚ್.ವಾಯ್.ಮೇಟಿ, ಕೆಪಿಸಿಸಿ (ಹಿಂ.ವ.ವಿ.) ರಾಜ್ಯ ಕಾರ್ಯದರ್ಶಿ ಮಹೇಶ ಹೊಸಗೌಡ್ರ, ಬಾಗಲಕೋಟೆ ಜಿಲ್ಲ ಪಂಚಾಯತ್ ಅಧ್ಯಕ್ಷೆ ಗಂಗೂಬಾಯಿ ಮೇಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಬಿ.ಹಂಗರಗಿ, ಬಾದಾಮಿ ಪುರಸಭೆ ಸದಸ್ಯ ರಾಜಮಹ್ಮದ ಬಾಗವಾನ ಮತ್ತು ಅನೇಕರು ಮತ್ತು ಬಾದಾಮಿ ತಾಲೂಕಿನ ಎಲ್ಲ ಅಧಿಕಾರಿಗಳು ಭಾಗವಹಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.