ವಿವಿಧ ಕಾಮಗಾರಿಗಳಿಗೆ ಸಿದ್ಧರಾಮಯ್ಯ ಚಾಲನೆ

0

Gummata Nagari

ಬಾದಾಮಿ : ಮಾಜಿ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕ, ಬಾದಾಮಿ ಮತಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರು ಬಾದಾಮಿ ತಾಲೂಕ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಚಾಲನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಬಾದಾಮಿ ತಾಲೂಕಿನ ತಾಲೂಕ ಆರೋಗ್ಯಾಧಿಕಾರಿಗಳ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟನೆ, ಜಿಲ್ಲಾ ಪಂಚಾಯತ್ ಬಾಗಲಕೋಟೆ, ಮೀನುಗಾರಿಕೆ ಇಲಾಖೆ, ಬಾದಾಮಿ ಇವರ ಅಡಿಯಲ್ಲಿ ಮೀನುಗಾರಿಕೆ ಸಹಾಯಕ ನಿರ್ದೇಶಕರು(ಶ್ರೇಣಿ-2), ಬಾದಾಮಿ ನೂತನ ಕಟ್ಟಡ ಉದ್ಘಾಟನೆ, ಲೋಕಪಯೋಗಿ ಇಲಾಖೆ ಅಡಿಯಲ್ಲಿ ಬಾದಾಮಿ ತಾಲೂಕಿನ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ, ಪಶು ಚಿಕಿತ್ಸಾಲಯ ನೀರಲಕೇರಿ ನೂತನ ಕಟ್ಟಡ ಆರ್.ಐ.ಡಿ.ಎಫ್. ಟ್ರೆಂಚ್ 24 ಕಾಮಗಾರಿಯ ಭೂಮಿ ಪೂಜೆ ಸಮಾರಂಭ, ಆರ್.ಐ.ಡಿ.ಎಫ್. ಯೋಜನೆಯಡಿ ತಾಲೂಕ ಪಶು ಆಸ್ಪತ್ರೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಸಮಾರಂಭ, ಬಾದಾಮಿ ತಾಲೂಕಿನ ಬಾದಾಮಿ ಮತಕ್ಷೇತ್ರದಲ್ಲಿ ಬರುವ ನೀರಲಕೇರಿ ಉಮತಾರ ತಾಲೂಕ ಗಡಿವರೆಗೆ ರಸ್ತೆ ಸುಧಾರಣ ಮತ್ತು ಡಾಂಬರೀಕರಣ ಭೂಮಿ ಪೂಜೆ ಹೀಗೆ ಹತ್ತು ಹಲವಾರು ಯೋಜನೆಗಳಿಗೆ ಸಿದ್ದರಾಮಯ್ಯ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವರುಣಾ ವಿಧಾನಸಭಾ ಮತಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ, ಬಾಗಲಕೋಟೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗಂಗೂಬಾಯಿ ರಾ ಮೇಟಿ, ಮಾಜಿ ಶಾಸಕ ಹೆಚ್ ವಾಯ್ ಮೇಟಿ, ಕೆಪಿಸಿಸಿ(ಹಿಂ.ವ.ವಿ) ರಾಜ್ಯ ಕಾರ್ಯದರ್ಶಿಗಳಾದ ಮಹೇಶ ಎಸ್ ಹೊಸಗೌಡ್ರ, ಕಾಳಿದಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ, ಪುರಸಭೆ ಸದಸ್ಯ ರಾಜಮಹ್ಮದ ಭಾಗವಾನ, ಇನ್ನಿತರ ಘಟಕಗಳ ಸದಸ್ಯರು, ಮುಖಂಡರು,ತಾಲೂಕ ಆಡಳಿತ ಅಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.