ಸರಕಾರದ ವೈಪಲ್ಯ ಖಂಡಿಸಿ 21 ರಂದು ಪ್ರತಿಭಟನೆ

ಕೊರೊನಾ ಮತ್ತು ನೆರೆ ಹಾವಳಿ ನಿರ್ವಹಣೆಯಲ್ಲಿ ಸರಕಾರ ವಿಫಲ : ತಿಮ್ಮಾಪೂರ ಆರೋಪ

0

Gummata Nagari : Bagalkot News

ಮುಧೋಳ : ಮಹಾಮಾರಿ ಕರೊನಾ ಹೊಡೆತಕ್ಕೆ ಅನೇಕ ಅಮಾಯಕರು ತಮ್ಮ ಜೀವವನ್ನು ಕಳೆದುಕೊಂಡರು. ನದಿಗಳ ಪ್ರವಾಹಕ್ಕೆ ಬೆಳೆ ಮನೆ ಮಠ ಆಸ್ತಿಪಾಸ್ತಿ ಕಳೆದುಕೊಂಡ ಜನತೆ ನಲುಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇವುಗಳ ನಿರ್ವಹಣೆಯಲ್ಲಿ ವಿಫಲವಾಗಿವೆ ಎಂದು ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಆರೋಪಿಸಿದರು.

ಸರಕಾರದ ವೈಫಲ್ಯದ ಜನರಿಗೆ ತಿಳಿಸಲು ಶನಿವಾರ ನ.21 ರಂದು 11 ಘಂಟೆಗೆ ನಗರದಲ್ಲಿ ಸರಕಾರದ ವಿರುದ್ದ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಲಾಗುವದು ಎಂದು ತಿಮ್ಮಾಪೂರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬೃಷ್ಠಾಚಾರ ತಾಂಡವವಾಡುತ್ತಿದ್ದು, ಅಧಿಕಾರಿಗಳೇ ತಮ್ಮ ದರ್ಬಾರ ನಡೆಸಿದ್ದಾರೆಂದು ಲೇವಡಿ ಮಾಡಿದರು. ಗೋ ಸಂರಕ್ಷಣೆ ಬಗ್ಗೆ ಮಾತನಾಡುವ ಇವರು ಸ್ತ್ರೀ ಸಂರಕ್ಷಣೆ ಮೊದಲು ಮಾಡಬೇಕೆಂದು ಆಗ್ರಹಿಸಿದರು. ನಗರಸಭೆ ಚುನಾವಣೆಯಲ್ಲಿ ತಹಶೀಲದಾರರು ತಮಗೆ ಗುರುತಿನ ಬಗ್ಗೆ ಕೇಳಿದಕ್ಕೆ ತಿಮ್ಮಾಪೂರ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು.

ತಾ.ಪಂ. ಅಧ್ಯಕ್ಷ ತಿಮ್ಮಣ್ಣಾ ಬಟಕುರ್ಕಿ ಹಾಗೂ ಉದಯಸಿಂಗ ಪಡತಾರೆ ಮಾತನಾಡಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ನೀಡುವ ಪರಿಹಾರ ಧನವನ್ನು ನೀಡುವಲ್ಲಿ ಅಧಿಕಾರಿಗಳು ಯಾವುದೆ ತಾರತಮ್ಮ ಮಾಡದೆ ಅರ್ಹ ಸಂತ್ರಸ್ತರಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪಕ್ಷದ ನಗರ ಅಧ್ಯಕ್ಷ ದಾನೇಶ ತಡಸಲೂರ, ಪ್ರಮುಖರಾದ ಸಿದ್ದು ಕೊಣ್ಣೂರ, ಪರಮಾನಂದ ಕುಟ್ರೋಟ್ಟಿ, ಹಣಮಂತ ತಿಮ್ಮಾಪೂರ ಇತರರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.