ಪೋಷಣ ಮಾಸಾಚರಣೆ: ವಿವಿಧ ಕಾರ್ಯಕ್ರಮ

0

Gummata Nagari : Bagalkot News

ಬಾದಾಮಿ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ಪೋಷಣ ಮಾಸಾಚರಣೆ ಅಂಗವಾಗಿ ತಾಲೂಕಾ ಪಂಚಾಯತ್ ಬಾದಾಮಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಬಾದಾಮಿ ಸಹಯೋಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೋಷಣ ಮಾಸಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಗ್ರಾಮದ ಕೋರಿಮಠ ಸಮುದಾಯ ಭವನದಲ್ಲಿ  ಆಯೋಜಿಸಲಾಗಿತ್ತು.

ಇದರಲ್ಲಿ ಆಕರ್ಷಣಿಯ ಸ್ಪರ್ಧೆಯಾದ ತಾಯಂದಿರು ಒಲೆ, ಗ್ಯಾಸ್, ಮಕ್ಕಳಿಗೆ ಪೌಷ್ಟಿಕ ಆಹಾರ ರೆಡಿ ಮಾಡುವ ಅಡುಗೆ ಕಾರ್ಯಕ್ರಮಗಳನ್ನು ನೋಡುವದಕ್ಕೆ ವಿಶೇಷವಾಗಿತ್ತು.

ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಮೈತ್ರಾ ರಾಜೇಶ್ ದೇಸಾಯಿ, ದ್ವಿತೀಯ ಸ್ಥಾನ ನೇತ್ರಾವತಿ ಆನಂದ ಜೋಶಿ, ತೃತೀಯ ಅನುಶ್ರೀ ಶಿ ಕಳಸಣ್ಣವರ ಪಡೆದುಕೊಂಡರು ಇದೆ ಸಂದರ್ಭದಲ್ಲಿ 5 ನೇ ಅಂಗನವಾಡಿ ಕೇಂದ್ರಕ್ಕೆ T.V. ಕೊಡಮಾಡಲ್ಪಟ್ಟಿರತಕ್ಕಂತ ಗ್ರಾಮದ ಯುವಕರಾದ ಮಹಾಗುಂಡಪ್ಪ ವಿರುಪಾಕ್ಷಪ್ಪ ಹುಂಬಿ ಹಾಗೂ ವೀರೇಶ್ ಶಿವಶಂಕಪ್ಪ ಅಂಗಡಿ ಇವರಿಗೆ ಶಾಲು ಹೊದಿಸಿ ಸನ್ಮಾನಿಸಿದ್ದರು.

ಮಕ್ಕಳ ಬೆಳವಣಿಗೆಗಾಗಿ ಹಾವು ಮತ್ತು ಏಣಿ ಆಟವನ್ನು ಆಡಿಸಿದರು .ಈ ಕಾರ್ಯಕ್ರಮದಲ್ಲಿ ಕಲಾತಂಡದವರು ಹಾಜರಿದ್ದು ಗರ್ಭಿಣಿಯರ  ಮಕ್ಕಳ ಪೌಷ್ಟಿಕತೆ ಹಾಗೂ ಅಂಗನವಾಡಿಯ ಎಲ್ಲ ಯೋಜಬಗ್ಗೆ ಹಾಡು, ನೃತ್ಯ, ನಾಟಕದ ರೂಪದಲ್ಲಿ ಎಲ್ಲ ತಾಯಂದಿರಿಗೆ ಮನವರಿಕೆಯಾಗುವಂತೆ ಮನರಂಜನಾತ್ಮಕವಾಗಿ ವಿವರಿಸಿ ರಂಜಿಸಿದರು.

ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ್ ಅಧ್ಯಕ್ಷರಾದ ರೇಖಾ ತಿರಕಣ್ಣವರ, ತಾ.ಪಂಚಾಯತ್  ಉಪಾಧ್ಯಕ್ಷರಾದ ಪೂರ್ಣಿಮಾ ಪಾಟೀಲ, ಅಭಿವೃದ್ಧಿ ಯೋಜನಾಧಿಕಾರಿ  ಅನ್ನಪೂರ್ಣ ಕುಬಕಡ್ಡಿ, ಮೇಲ್ವಿಚಾರಕರಾದ ಮಂಜುಳಾ ಗುಣಾರೆ, ವೈಶಾಲಿ ಕುಲಕರ್ಣಿ, ಬಸಮ್ಮ ಮುನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ್ ಜೋಶಿ, ಹಾಗೂ ಪ್ರಭುಲಿಂಗ ಮಹಾಲಿಂಗಪುರ ಅನೇಕರು ಉಪಸ್ಥಿರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.