ಉದ್ಯೋಗ ಖಾತ್ರಿ : ಹೊಸ ಯೋಜನೆಯ ಕರಪತ್ರ ಬಿಡುಗಡೆ

0

Gummata Nagari : Bagalkot News

ಬಾಗಲಕೋಟೆ : ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತ್ರಿ ಯೋಜನೆಯಡಿ ರೈತರಿಗೆ ಅನುಕೂಲವಾಗುವಂತೆ ಹೊಸ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಲಾಭವನ್ನು ರೈತರು ಪಡೆದುಕೊಳ್ಳುವಂತೆ ಬೆವೂರ ಪಂಚಾಯತ ಅಭಿವೃಧ್ದಿ ಅಧಿಕಾರಿ ವಿಜಯಕುಮಾರ ಕೋತಿನ ತಿಳಿಸಿದರು.

ಬೇವೂರ ಗ್ರಾಮ ಪಂಚಾಯತಿ ಆವರಣದಲ್ಲಿ ರೈತರಿಗೆ ಉದ್ಯೋಗ ಖಾತ್ರಿಯ ಹೊಸ ಯೋಜನೆಯ ಕರಪತ್ರವನ್ನು ರೈತರಿಗೆ ವಿತರಿಸಿ ಮಾತನಾಡಿದ ಅವರು ಪ್ರತಿ ಅರ್ಹ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ 2.50 ಲಕ್ಷ ರೂ.ಗಳ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಎಂ.ಜಿ.ಎನ್.ಆರ್.ಇ.ಜಿ.ಇ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಬರುವ 60 ವಿವಿಧ ಬೆಳೆಗಳನ್ನು ಬೆಳೆಯುವುದು, ಕೃಷಿ, ಅರಣ್ಯ ಇಲಾಖೆಯಡಿ ಬರುವ ಕಾಮಗಾರಿಗಳಾದ ಕೃಷಿ ಹೊಂಡ, ಬದು ನಿರ್ಮಾಣ, ಗೊಬ್ಬರಗುಂಡಿ, ರೇಷ್ಮೆ ಕೃಷಿ ಕಾಮಗಾರಿ, ಜಾನುವಾರು ಶೆಡ್ ನಿರ್ಮಾಣ, ವೈಯಕ್ತಿಕ ಬಚ್ಚಲು ಗುಂಡಿ, ವೈಯಕ್ತಿಕ ಕೈತೋಟ ನಿರ್ಮಾಣ, ಈರುಳ್ಳಿ ಸಂಗ್ರಹಣಾ ಗೋದಾಮು ನಿರ್ಮಾಣ ಕಾಮಗಾರಿ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ ಆಡಳಿತಾಧಿಕಾರಿ ಜಗದೀಶ ರಕ್ಕಸಗಿ, ಕಾರ್ಯದರ್ಶಿ ಆರ್.ಕೆ.ಬಡಿಗೇರ, ದ್ವಿತೀಯ ದರ್ಜೆ ಸಹಾಯಕ ಆರ್.ಐ.ಅಂಕದ ಸೇರಿದಂತೆ ಗ್ರಾಮದ ರೈತರು ಇತರರು ಉಪಸ್ಥಿತರಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.