ಉದ್ಯೋಗ ಖಾತ್ರಿ ಯೋಜನೆಗೆ ಎಳ್ಳು ನೀರು ಬಿಟ್ಟ ಮುತ್ತಲಗೇರಿ ಗ್ರಾ.ಪಂ ಆಡಳಿತ ಮಂಡಳಿ

0

Gummata Nagari : Bagalkot News

ಬಾದಾಮಿ :  ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದ ಮತ್ತಲಗೇರಿ ಗ್ರಾಮ ಪಂಚಾಯತ ಆಡಳಿತ ಮಂಡಳಿ ಪಂಚಾಯತ ಸದಸ್ಯರ ಹಾಗೂ ಬಿಸಿಯೂಟ ಯೋಜನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂಧಿಗಳಿಗೆ ನರೇಗಾ ಯೋಜನೆಯ ಹಣ ಸಂದಾಯ ಮಾಡಿದ್ದಾರೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದು, ಗ್ರಾಮದ ಜನತೆಗೆ ವರ್ಷದಲ್ಲಿ 100 ದಿನ ಉದ್ಯೋಗ ಸೃಷ್ಟಿಸುವ ಮೂಲಕ ಗ್ರಾಮಾಂತರ ಪ್ರದೇಶದ ಜನರಿಗೆ ವರದಾನವಾಗಿದೆ ಆದರೆ ಬಾದಾಮಿ ತಾಲೂಕ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮುತ್ತಲಗೇರಿ ಗ್ರಾಮ ಪಂಚಾಯತಿಯಲ್ಲಿ ನಡೆದ ನರೇಗಾ ಯೋಜನೆಯ‌ ಕಾಮಗಾರಿಯ ಸರ್ಕಾರದ ಆದೇಶ ಕ್ಕೆ ಬೆಲೆ ಕೊಡದೆ ಗ್ರಾಮ ಪಂಚಾಯತಿ ಸದಸ್ಯರ ಹೆಸರ ಮೇಲೆ ಮತ್ತು ಶಾಲೆಗಳಲ್ಲಿ ಬಿಸಿಯೂಟ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ನರೇಗಾ ಯೋಜನೆಯ ಹಣ ಸಂದಾಯ ಮಾಡಿದ್ದಾರೆ.

ಸರಕಾರದ ನಿಯಮ ವನ್ನು ಉಲ್ಲಂಘನೆ ಮಾಡಿ ಗ್ರಾಮ ಪಂಚಾಯತಿ ಸದಸ್ಯರ ಹೆಸರ ಮೇಲೆ ನರೇಗಾ ಯೋಜನೆ ಅಡಿಯಲ್ಲಿ ಬಿಲ್ ಸಂದಾಯ ಮಾಡಬಾರದು ಅಂತ ಸರ್ಕಾರ ಆದೇಶ ಸಂಖ್ಯೆ ಗ್ರಾ ಅ ಪ 314/ಉಖಾಯೋ 2017 ದಿನಾಂಕ 18.08.2018 ರನ್ವಯ ಪಂಚಾಯತ ಸದಸ್ಯರು ಅಕುಶಲ ಕಾರ್ಮಿಕರಾಗಿ ಕಾರ್ಯನಿರ್ವಹಿಸಲು ಅನರ್ಹರರು ಅಂತ ಆದೇಶ ಇದ್ರು  ಕೂಡಾ ಮುತ್ತಲಗೇರಿ ಗ್ರಾಮ ಪಂಚಾಯತಿ ಯಲ್ಲಿ 2015 ರಿಂದ 2020 ರ ವರೆಗೆ ಸದಸ್ಯರಾಗಿ ಆಯ್ಕೆಯಾದ ಸದಸ್ಯರ ಹೆಸರ ಮೇಲೆ ಬಿಲ್ ಸಂದಾಯ ಮಾಡಿದ್ದಾರೆ.

ಸದಸ್ಯರಾದ ಯಲ್ಲವ್ವ ಸಿದ್ದಪ್ಪ ಹಣಮಸಾಗರ (ಗ್ರಾಮ ಪಂಚಾಯತಿ ಸದಸ್ಯರು) ಇವರ ಜಾಬ್ ಕಾರ್ಡ್ ನಂಬರ್ KN-01-001-021-001/12809.ಮತ್ತೆ NMR ಗಳು 5075, 8689, 10172, 3352, 3725, 9078, 9162, 1708 ಒಟ್ಟು ಇವರ ಹೆಸರಲ್ಲಿ ಸಂದಾಯವಾದ   ಒಟ್ಟು ಮೊತ್ತ 20625 ರೂಪಾಯಿಗಳು. ಯಲ್ಲವ್ವ  ಮಲ್ಲಪ್ಪ ಮೇಲನಾಡ (ಗ್ರಾಮ ಪಂಚಾಯತಿ ಸದಸ್ಯರು)ಇವರ ಜಾಬ್ ಕಾರ್ಡ್ ನಂಬರ್ KN-01-001-021-003/1111. NMR ಗಳು 791, 1413, 6503, 4836, 6471, 8347 ಇವರ ಹೆಸರಲ್ಲಿ  ಒಟ್ಟು ಸಂದಾಯವಾದ  ಹಣ 8715 ರೂಪಾಯಿಗಳು. ರಂಗವ್ವ ಲಕ್ಷ್ಮಣ ವಾಲಿಕಾರ  (ಗ್ರಾಮ ಪಂಚಾಯತಿ ಸದಸ್ಯರು) ಇವರ ಜಾಬ್ ಕಾರ್ಡ್

KN-01-001-021-001/12384 NMR ಗಳು 1154, 1160, 8015, 1950, 3724, 1546, 2798 ಇವರ ಹೆಸರಲ್ಲಿ ಒಟ್ಟು ಸಂದಾಯವಾದ ಹಣ 15749ರೂಪಾಯಿಗಳು. ಬಸವ್ವ  ತಾಯಪ್ಪ ಮಾದರ ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುತ್ತಲಗೇರಿ ಅಡುಗೆ ಸಹಾಯಕಿಯಾಗಿ ಕೆಲಸಮಾಡುತ್ತಾರೆ. ಇವರ ಜಾಬ್ ಕಾರ್ಡ್ ನಂಬರ್ KN-01-001-021-003/770 NMR ಗಳು 1602, 8347 ಇವರ ಹೆಸರಲ್ಲಿ ಒಟ್ಟು ಸಂದಾಯವಾದ ಹಣ 2988 ರೂಪಾಯಿಗಳು ಸಂದಾಯ ಮಾಡಿದ್ದಾರೆ.

-ನಾಗರತ್ನಾ ದಾಟನಾಳ

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.