ಆರೋಗ್ಯ ಇಲಾಖೆಯ ಗುತ್ತಿಗೆದಾರರಿಂದ ವಿನೂತನ ಪ್ರತಿಭಟನೆ

0

Gummata Nagari : Bagalkot News

ಬಾದಾಮಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಾದಾಮಿ ತಾಲೂಕಿನ ಆರೋಗ್ಯ ಇಲಾಖೆಯ ಒಳ ಮತ್ತು ಹೋರ ಗುತ್ತಿಗೆದಾರರು ಸಮಾನ ಕೆಲಸಕ್ಕೆ ಸಮಾನ ವೇತನವೆಂಬ ಘೋಷಣೆಗಳನ್ನು ಕೂಗುತ್ತ ಪ್ಲೇ ಕಾರ್ಡ್ ಹಿಡಿದು ತಾಲೂಕಾ ಸರ್ಕಾರಿ ಆಸ್ಪತ್ರೆಯ ಮುಂಬಾಗದಲ್ಲಿ ಪ್ರತಿಭಟನೆ ಮಾಡುವದರ ಮುಖಾಂತರ ಬಾದಾಮಿ ತಾಲೂಕಾ ಮುಖ್ಯ ವೈದ್ಯಾಧಿಕಾರಿಗಳಿಗೆ, ಆರೋಗ್ಯ ಅಧಿಕಾರಿಗಳಿಗೆ, ಹಾಗೂ ಬಾದಾಮಿ ತಹಶಿಲ್ದಾರ, ಮತ್ತು ಬಾಗಲಕೋಟೆ ಜಿಲ್ಲಾ ಮಟ್ಟದ ಗುತ್ತಿಗೆ ನೌಕರರು ಸೇರಿಕೊಂಡು ಜಿಲ್ಲಾ ಪಂಚಾಯತ ಮುಖ್ಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದರು.

ಬಾದಾಮಿ ತಾಲೂಕಾ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವಿನೋದ ಹೊಸೂರ ಮಾತನಾಡಿ, ಅನೇಕ ವರ್ಷಗಳಿಂದ ಒಳ ಮತ್ತು ಹೊರ ಗುತ್ತಿಗೆದಾರರು ಕೆಲಸ ಮಾಡುತ್ತಿದ್ದೇವೆ ನಮಗೆ ಸರ್ಕಾರದ ಗಮನಕ್ಕೆ ನಮ್ಮ ಬೇಡಿಕೆಗಳಾದ ಒಳ ಮತ್ತು ಹೊರಗುತ್ತಿಗೆದಾರ ನೌಕರರಿಗೆ ಸೇವಾ ಭದ್ರತೆಯನ್ನು ನೀಡಬೇಕು, ನೌಕರರಿಗೆ ಗುತ್ತಿಗೆ ಪದ್ಧತಿ ಎಂಬ ಜೀತ ಪದ್ಧತಿಯನ್ನು ಸರ್ಕಾರವು ಈ ಕೂಡಲೇ ಕೈಬಿಡಬೇಕು, ಎಪ್ರಿಲ್ ಒಂದು ದಿನ ವಿರಾಮ ಮತ್ತು ಬಾಂಡ್ ಪದ್ಧತಿಯನ್ನು ಕೈ ಬಿಡಬೇಕು, ನಮ್ಮ ಗುತ್ತಿಗೆ ನೌಕರರಿಗೆ ಸರ್ಕಾರದ ಭರವಸೆಗಳು ಸಾಕು ಕೂಡಲೇ ಕಾರ್ಯರೂಪಕ್ಕೆ ತರಬೇಕು, ಕರೋನಾ ಸಮಯದಲ್ಲಿ ಜೀವದ ಹಂಗು ತೋರೆದು ಕೆಲಸ ಮಾಡುತ್ತಿರುವ ನೌಕರರಿಗೆ ಚಪ್ಪಾಳೆ ಬೇಡಾ ನಮ್ಮಗೆ ಸೌಲಭ್ಯಗಳನ್ನು ನೀಡಿ, ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರಿಗೆ ಕೋವಿಡ್-19 ಆಪತ್ತು ಪ್ರೋತ್ಸಾಹ ಧನ ಎಲ್ಲರಿಗೂ ನೀಡಿ ಮೃತ ಕುಟುಂಬಕ್ಕೆ ಪರಿಹಾರವನ್ನು ಘೋಷಣೆ ಮಾಡಬೇಕು, ಇನ್ನು ಅನೇಕ ಬೇಡಿಕೆಗಳನ್ನು ಇಡೆರಿಸಬೇಕೆಂದು ಸರ್ಕಾರಕ್ಕೆ ಬಾದಾಮಿ ತಾಲೂಕಾ ಆರೋಗ್ಯ ಇಲಾಖೆಯ ಎಲ್ಲ ಒಳ ಮತ್ತು ಹೋರ ಗುತ್ತಿಗೆದಾರರು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದ್ದರು.

ಈ ಸಂದರ್ಭದಲ್ಲಿ ವಿನೋದ ಹೊಸೂರ, ರಾಜು ಅಂಬಿಗೇರ, ಗಂಗಾಧರ ಪಿರಂಗಿ, ತಬ್ರೆಜ್ ಕರ್ನೂಲ್, ಶೋಭಾ ಕನ್ನೂರ, ಕೃಷ್ಣಾ ಪೂಜಾರಿ ಹಾಗೂ ಅನೇಕರು ಭಾಗವಹಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.