ರೈತನಾಯಕ ಗಡದನ್ನವರ ಪುತ್ಥಳಿ ನಿರ್ಮಾಣಕ್ಕೆ ನೆರವಾಗಿ

0

Gummata Nagari : Bagalkot News

ಮುಧೋಳ : ಉತ್ತರ ಕರ್ನಾಟಕದ ರೈತ ಹೋರಾಟಗಾರ, ರೈತ ನಾಯಕ ದಿ.ರಮೇಶ ಗಡದನ್ನವರ ಅವರ ಸ್ಮರಣಾರ್ಥವಾಗಿ ಮುಧೋಳ ತಾಲೂಕಿನ ಪಿ.ಎಂ.ಬುದ್ನಿ ಗ್ರಾಮದ ಕೆರೆಯ ಮಧ್ಯದಲ್ಲಿ ಅಂದಾಜು 15.ಅಡಿಯ ಬೃಹತ್ ಕಂಚಿನ ಪುತ್ಥಳಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ರೈತ ಹೋರಾಟಗಾರ, ಮೂರ್ತಿ ಪ್ರತಿಷ್ಠಾಪನೆ ಸಮಿತಿ ಮುಖಂಡ ಸುಭಾಸ ಕೋರಡ್ಡಿ ತಿಳಿಸಿದ್ದಾರೆ.

ನಗರದ ಕಾನಿಪ. ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಮುಂಚೂಣಿಯಲ್ಲಿದ್ದ ರಮೇಶ ಗಡದನ್ನವರ ನಾಡಿನ ರೈತರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಅಂತಹ ಮಹಾನ್ ನಾಯಕನ ಪುತ್ಥಳಿ ನಿರ್ಮಾಣಕ್ಕಾಗಿ ರೈತರಿಂದ ವಂತಿಗೆ ಸ್ವೀಕರಿಸಲು ನಿರ್ಧರಿಸಿದ್ದು, ರೈತರು ಸ್ವಯಂಪ್ರೇರಿತರಾಗಿ ವಂತಿಕೆ ನೀಡುವುದರ ಮೂಲಕ ರೈತನಾಯಕನ ಪುತ್ಥಳಿ ನಿರ್ಮಾಣಕ್ಕೆ ರೈತರು, ಅವರ ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಅವರು ಕೋರಿದ್ದಾರೆ.

ನಾಗಪ್ಪ ಪೂಜಾರ ಮಾತನಾಡಿ, ರೈತಪರ ಧ್ವನಿಯಾಗಿದ್ದ ರಮೇಶ ಗಡದನ್ನವರ ಅವರ ಪುತ್ಥಳಿ ನಿರ್ಮಾಣಕ್ಕೆ ಯಾವುದೇ ರಾಜಕೀಯ ನಾಯಕರ ಬಳಿ ವಂತಿಗೆ ಸ್ವೀಕರಿಸಲು ನಿರ್ಧರಿಸಿಲ್ಲ. ರೈತರು ದುಡಿದ ದುಡ್ಡಿನಿಂದಲೇ ಗಡದನ್ನವರ ಅವರ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ಕಾರ್ಯಕ್ಕೆ ರೈತರು ನೆರವಾಗುವರು ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಪುತ್ಥಳಿ ನಿರ್ಮಾಣಕ್ಕೆ ಧನಸಹಾಯ ಮಾಡುವ ಆಸಕ್ತರು ಅಕೌಂಟ್ ನಂಬರ್ 920010062400767 ಐಎಫ್‌ಎಸ್ಸಿ ಕೋಡ್  UTIB0002023 ಎಕ್ಸಿಸ್ ಬ್ಯಾಂಕ್‌ಗೆ ಹಣ ಸಂದಾಯ ಮಾಡಬಹುದು ಎಂದು ಸಮೀತಿಯವರು ವಿನಂತಿಸಿದ್ದಾರೆ.

ಸಮಿತಿ ಮುಖಂಡರಾದ ರುದ್ರಯ್ಯ ಹುನ್ನೂರ, ರಮೇಶ ಹೂಗಾರ, ಚನ್ನಪ್ಪ ರಡ್ಡೇರಟ್ಟಿ, ಮಲ್ಲಪ್ಪ ಯಾದವಾಡ, ಹಣಮಂತ ಹಿಪ್ಪಲಿ, ಶಂಕ್ರಪ್ಪ ಭಾಗನ್ನವರ, ಅನ್ನಪ್ಪ ಕೋಲೂರ ಇತರರು ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.