ರೈತ ಕಾರ್ಮಿಕರ ಹಿತ ಕಾಪಾಡುವಲ್ಲಿ ಸರಕಾರ ವಿಫಲ

0

Gummata Nagari : Bagalkot News

ಮುಧೋಳ : ಈ ಹಿಂದೆ ಇದ್ದ ರೈತ ಹಾಗೂ ಕಾರ್ಮಿಕರ ಪರವಾಗಿ ಇದ್ದ ಕಾಯ್ದೆಗಳನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೆ ತಂದಿರುವ ರಾಜ್ಯ ಸರಕಾರದ ನಿರ್ಣಯವನ್ನು ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಶಂಕರ ನಾಯಕ ಖಂಡಿಸಿದರು.

ಅವರು ತಾಲೂಕ ಜಾತ್ಯತೀತ ಜನತಾ ದಳ ಪಕ್ಷದಿಂದ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಉಪ ತಹಸೀಲ್ದಾರ್ ಎಸ್.ಆಯ್.ಘಾಟನಿ ಅವರಿಗೆ ಮನವಿ ಅರ್ಪಿಸಿ ಮಾತನಾಡಿದರು.

ಸರಕಾರ ರೈತ, ಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜೆಡಿಎಸ್ ಪ್ರಮುಖರಾದ ಪ್ರಭು ಶೆಟ್ಟರ, ಮಲ್ಲಪ್ಪ ಹೊಸಕೋಟಿ, ಶಂಕರ ಹಲಗಲಿ, ಜೀರಗಾಳ, ಅಬ್ದುಲ್, ಮೌಲಾ, ಗುಡುಸಾಬ, ಮುನೀರ ಜಮಾದಾರ, ಹಾಪೀಜ್ ಮುಲ್ಲಾ, ವೀರೆಶ ನ್ಯಾಮಗೌಡ, ಬಸು ಉಳ್ಳಾಗಡ್ಡಿ, ಸುರೇಶ ಮಡಿವಾಳರ, ಸಂಜು ನಾಯಕರ, ಲಕ್ಷ್ಮಣ ಮರೆಗುದ್ದಿ ಸೇರಿದಂತೆ ಪದಾಧಿಕಾರಿಗಳು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.