ಗ್ರಾಮೀಣ ಪೊಲೀಸ್ ಠಾಣೆ ಮಂಜೂರು ಮಾಡಿ

0

Gummata Nagari : Bagalkot News

ಮುಧೋಳ : ನಗರದಲ್ಲಿ ಸಾರಿಗೆ ಸಂಚಾರ ಹೆಚ್ಚಾಗುತ್ತಿರುವುದು ಹಾಗೂ ಅಪರಾಧ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದರ ನಿಯಂತ್ರಣಕ್ಕೆ ಗ್ರಾಮೀಣ ಪೊಲೀಸ್ ಠಾಣೆ ಅವಶ್ಯಕತೆ ಇದ್ದು ಶೀಘ್ರ ಮಂಜೂರು ಮಾಡಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ, ನ್ಯಾಯವಾದಿ ದಯಾನಂದ ಪಾಟೀಲ ಸರಕಾರವನ್ನು ಒತ್ತಾಯಿಸಿದ್ದಾರೆ.

ನಗರದ ಕಾನಿಪ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ರನ್ನ ನಾಡು ಮುಧೋಳದಲ್ಲಿ ಟ್ರಾಫಿಕ್ ಸಂಖ್ಯೆಯೂ ಹೆಚ್ಚಾಗಿದೆ. ತಾಲೂಕಿನಲ್ಲಿ 28 ಹಳ್ಳಿಗಳಲ್ಲಿ ಸಂಪರ್ಕ ಕಲ್ಪಿಸುವ ಪೊಲೀಸ್ ಠಾಣಿಗೆ ಪ್ರತ್ಯೇಕವಾಗಿ ಗ್ರಾಮೀಣ ಪೊಲೀಸ್ ಠಾಣಿಯ ಅವಶ್ಯಕತೆಯಿದೆ. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ. ಪ್ರತಿ ವರ್ಷ ಕಬ್ಬು ಬೆಲೆ ಸಮರಕ್ಕಾಗಿ ಮೇಲಿಂದ ಮೇಲೆ ಪ್ರತಿಭಟನೆ ಆರಂಭಿಸಲಾಗುತ್ತಿದೆ. ರಾಷ್ಟ್ರೀಯ, ಧಾರ್ಮಿಕ ಹಬ್ಬಗಳು, ಉತ್ಸವಗಳಿಗೆ ಅನ್ಯ ಜಿಲ್ಲೆಗಳಿಂದ ಸಿಬ್ಬಂದಿ ತರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳಿಗಳ ಒತ್ತಡವೂ ನಗರದ ಠಾಣಿಗೆ ಒತ್ತಡ ಹೆಚ್ಚುತ್ತಿದೆ. ಸಿಬ್ಬಂದಿಯ ಕೊರತೆಯಿಂದ ಎಲ್ಲವನ್ನು ನಿಭಾಯಿಸಲು ಆಗುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಇದನ್ನು ಕಳೆದ ಐದಾರು ವರ್ಷಗಳಿಂದಲೂ ಸರಕಾರದ ಗಮನಸೆಳೆಯುತ್ತಾ ಬರಲಾಗಿದೆ. ಹಿಂದಿನ ಗೃಹ ಸಚಿವ ಡಾ.ಪರಮೇಶ್ವರ, ಎಂ.ಬಿ.ಪಾಟೀಲರ ಗಮನಕ್ಕೆ ತರಲಾಗಿತ್ತು. ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲರ ಗಮನಕ್ಕೆ ತಂದಿದ್ದೇವೆ. ಸರಕಾರದ ಸಕಾರಾತ್ಮಕವಾಗಿ ಸ್ಪಂದನೆ ದೊರೆಯುತ್ತಿಲ್ಲ. ಹಿಂದಿನ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಭಿಷೇಕ್ ಗೋಯಲ್, ಈಶ್ವರಚಂದ್ರ ವಿದ್ಯಾಸಾಗರ ಅವರ ಮೂಲಕ ಸರಕಾರಕ್ಕೆ ಪ್ರಸ್ತಾವಣಿಯೂ ಕಳುಹಿಸಲಾಗಿತ್ತು. ಆದರೆ, ಇದು ಕಾರ್ಯರೂಪಕ್ಕೆ ಬರದೇ ಇರುವುದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಲೋಕಾಪೂರ ಪೊಲೀಸ್ ಠಾಣಿಯ ಸಿಬ್ಬಂದಿ ಮುಧೋಳ ಸಮೀಪದಲ್ಲಿರುವ ಜಾಲಿಬೇರಿ, ರೂಗಿ ಗ್ರಾಮಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು. ಇದು ಇಂದಿನ ಸಿಬ್ಬಂದಿ ಕೊರತೆಯ ಮಧ್ಯಯೂ ಎಲ್ಲರಿಗೂ ಸ್ಪಂದಿಸಲು ಆಗುವುದಿಲ್ಲ. ಎರಡು ಗ್ರಾಮಗಳಿಗೆ ಮತ್ತಷ್ಟು ನಾಗರಾಳದವರಿಗೂ ಸೇರ್ಪಡೆ ಮಾಡಿ ಗ್ರಾಮೀಣ ಪೊಲೀಸ್ ಠಾಣೆ ಮಂಜೂರಾತಿ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಯುವ ಮುಖಂಡ ಸಾಮ್ರಾಟ್ ನಿಂಬಾಳಕರ ಹಾಗೂ ನವೀನ ಬದ್ರಿ ಮಾತನಾಡಿ, ಬೈಪಾಸ್ ಕಾಮಗಾರಿ ಮುಗಿಯವರಿಗೂ ಕಬ್ಬು ಹಂಗಾಮು ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕು. ನಗರದೆಲ್ಲೆಡೆ ಕೆಲವು ಮಾರ್ಪಡಗಳನ್ನು ಮಾಡಬೇಕಾಗಿದೆ. ಬೈಕ್ ಸವಾರ, ಟ್ಯಾಕ್ಟರ್ ಚಾಲಕರಿಗೆ ಡ್ರೈವಿಂಗ್ ಲೈಸನ್ಸ್ ಪಡೆಯಲು ಇಲಾಖೆಯಿಂದ ಅಭಿಯಾನ ಆರಂಭಿಸಬೇಕೆಂದು ಪೊಲೀಸ್ ಹಾಗೂ ಸಾರಿಗೆ ಇಲಾಖೆಗೆ ಅವರು ಮನವಿ ಮಾಡಿಕೊಂಡರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.