ಚೀನಿ ಸೈನಿಕರನ್ನು ಯಾವಾಗ ಹೊರಹಾಕುತ್ತೀರಿ?

ಬೀಹಾರ ಚುನಾವಣೆ: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪ್ರಶ್ನೆ

0

Gummata Nagari : India News

ಬಿಹಾರದ ಯುವ ಸೈನಿಕರು ಹುತಾತ್ಮರಾದಾಗ, ಭಾರತದ ಪ್ರಧಾನಿ ಆ ದಿನ ಏನು ಹೇಳಿದರು ಮತ್ತು ಏನು ಮಾಡಿದರು ಎಂಬುದು ಮುಖ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದರು.

ಬಿಹಾರದ ನವಾದಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಇಂಡೋ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಉದ್ವಿಗ್ನತೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, “ಲಡಾಕ್‌ನಲ್ಲಿ ಭಾರತದ ಗಡಿಯಿದೆ, ಅಲ್ಲಿ ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಇತರ ರಾಜ್ಯಗಳ ಸೈನಿಕರು ದೇಶವನ್ನು ರಕ್ಷಿಸುತ್ತಾರೆ. ಚೀನಾದ ಸೈನ್ಯವು ಭಾರತದೊಳಗೆ ಇದೆ. ಆದರೂ ಪ್ರಧಾನಮಂತ್ರಿಗಳು ನಮ್ಮ ಸೈನಿಕರನ್ನು ಅವಮಾನಿಸಿ ಭಾರತದ ಒಳಗೆ ಯಾರೂ ಬಂದಿಲ್ಲಾ ಎಂದು ಅವರು ಏಕೆ ಹೇಳಿದರು.

ಮೋದಿಯವರು ಸುಳ್ಳು ಹೇಳಿದ್ದಾರೆ ಎಂದು ಅವರು ಆರೋಪಿಸಿದ ಅವರು “ಇಂದು ಅವರು ತಲೆ ಬಾಗುತ್ತೇವೆ ಎಂದು ಹೇಳುತ್ತಾರೆ ಆದರೆ ಯಾವುದೇ ಚೀನೀ ಸೈನಿಕರು ಭಾರತದೊಳಗೆ ಬರಲಿಲ್ಲ ಎಂದು ಅವರು ಸುಳ್ಳು ಹೇಳಿದ್ದಾರೆ. ಭಾರತದಲ್ಲಿ ಕುಳಿತಿರುವ ಚೀನೀ ಸೈನಿಕರನ್ನು ನೀವು ಯಾವಾಗ ಹೊರಹಾಕುತ್ತೀರಿ? ಇದನ್ನು ಹೇಳಿ ಎಂದು ಪ್ರಶ್ನಿಸಿದರು.

“ಇಲ್ಲಿ ಬಿಹಾರಿಗಳಿಗೆ ಸುಳ್ಳು ಹೇಳಬೇಡಿ. ನೀವು ಎಷ್ಟು ಉದ್ಯೋಗ ನೀಡಿದ್ದೀರಿ ಎಂದು ಅವರಿಗೆ ವಿವರಿಸಿ. ಕಳೆದ ಚುನಾವಣೆಯಲ್ಲಿ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಹೇಳಿದ್ದೀರಿ. ಯಾರಿಗಾದರೂ ಸಿಕ್ಕಿದೆಯೇ?”

ಸೈನಿಕರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳ ಮುಂದೆ ತಲೆ ಬಾಗುತ್ತೇವೆ ಎನ್ನುತ್ತಾರೆ, ಮನೆಗೆ ಹೋದಾಗ, ಅಂಬಾನಿ ಅದಾನಿಯ ಕೆಲಸವನ್ನು ಮಾಡುತ್ತಾರೆ. ಭಾಷಣಗಳನ್ನು ನೀಡುತ್ತಾರೆ, ನಿಮ್ಮ ಮುಂದೆ ತಲೆ ಬಾಗುತ್ತಾರೆ, ಆದರೆ ಕೆಲಸ ಮಾಡುವ ಸಮಯ ಬಂದಾಗ ಬೇರೆಯವರ ಕೆಲಸ ಮಾಡುತ್ತಾರೆ ಎಂದು ಪ್ರಧಾನಿ ವಿರುದ್ದ ವಾಗ್ದಾಳಿ ನಡೆಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.