ಹೈದರಾಬಾದ್ ಚುನಾವಣೆ; ಟಿ.ಆರ್.ಎಸ್ ಗೆ ಮುನ್ನಡೆ, ಎರಡನೇ ಸ್ಥಾನದಲ್ಲಿ ಎಂಐಎಂ

0

Gummata Nagari : India News

ಹೈದರಾಬಾದ್: ಹೈದರಾಬಾದ್ ನಗರಪಾಲಿಕೆ (ಜಿಎಚ್‌ಎಂಸಿ ಚುನಾವಣೆ) ಎಣಿಕೆ ಶುಕ್ರವಾರ ಆರಂಭವಾಗಿದೆ. ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ (ಟಿ.ಆರ್‌.ಎಸ್) ಮುನ್ನಡೆ ಸಾಧಿಸಿದರೆ. ಎಐಐಎಂಐಎಂ ಎರಡನೆಯ ಸ್ಥಾನದಲ್ಲಿದೆ. ಬಿಜೆಪಿ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ. ಆರಂಭಿಕ ಪ್ರವೃತ್ತಿಗಳಲ್ಲಿ, ಬಿಜೆಪಿಗೆ ಮುನ್ನಡೆ ಸಿಗುತ್ತಿದೆ ಎಂದು ತೋರಿಸಲಾಗಿತ್ತು. ಹೈದರಾಬಾದ್ ನಗರ ಪಾಲಿಕೆ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿ, ಟಿ.ಆರ್.ಎಸ್ ಮತ್ತು ಒವೈಸಿ ನಡುವೆ ಭೀಕರ ವಾಗ್ದಾಳಿಗಳು ನಡೆದಿದ್ದವು. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಹೈದರಾಬಾದ್‌ನ ಮಾಜಿ ಮೇಯರ್ ಮತ್ತು ಅಸದುದ್ದೀನ್ ಒವೈಸಿ ಅವರ ಪಕ್ಷ ಅಖಿಲ ಭಾರತ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲೀಮೀನ್ (ಎಐಎಂಐಎಂ) ಅಭ್ಯರ್ಥಿ ಮೊಹಮ್ಮದ್ ಮಾಜೀದ್ ಹುಸೇನ್ ಮೆಹದಿಪಟ್ಟಣದಿಂದ ಗೆದ್ದಿದ್ದಾರೆ.

ಈ ವರ್ಷದ ನಗರ ಪಾಲಿಕೆ ಚುನಾವಣೆಯಲ್ಲಿ ಮತಗಳ ಧ್ರುವೀಕರಣಕ್ಕೂ ಹೆಚ್ಚಿನ ಪ್ರಯತ್ನ ಮಾಡಲಾಯಿತು. ಚುನಾವಣೆಯಲ್ಲಿ ಸ್ವಚ್ಚತೆ, ರಸ್ತೆಗಳು, ನೀರು, ಪಾಕಿಸ್ತಾನ, ಮೊಹಮ್ಮದ್ ಅಲಿ ಜಿನ್ನಾ, ಸರ್ಜಿಕಲ್ ಸ್ಟ್ರೈಕ್ ಮತ್ತು ಹೈದರಾಬಾದ್ ಹೆಸರನ್ನು ಉಲ್ಲೇಖಿಸಲಾಗಿದೆ. ದುಬ್ಬಾಕ್‌ ನಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಕಾರಣ ಬಿಜೆಪಿಯಲ್ಲಿ ವಿಶ್ವಾಸ ತುಂಬಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಂತಹ ಅನೇಕ ಹಿರಿಯ ನಾಯಕರು ಮತ್ತು ಕೇಂದ್ರ ಸಚಿವರು ಹೈದರಾಬಾದ್ ನಗರಪಾಲಿಕೆ ಚುನಾವಣೆಯಲ್ಲಿ ಕಣದಲ್ಲಿಳಿಯಬೇಕಾಯಿತು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.