ನವದೆಹಲಿ: ಕಳೆದೊಂದು ವಾರದಿಂದ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ಸಿಂಗ್ (74) ಭಾನುವಾರ ನಿಧನರಾದರು.
ಕಳೆದ ಜೂನ್ ನಲ್ಲಿ ರಘುವಂಶ್ ಪ್ರಸಾದ್ ಅವರು ಕೊವಿಡ್ ಪಾಸಿಟಿವ್ ಆಗಿದ್ದರು ನಂತರ ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿ ಬಂದಿದ್ದರು. ಕೊವಿಡ್ ಗುಣಮುಖರಾದ ನಂತರ ಕಾಣಿಸಿಕೊಂಡಿದ್ದ ಆರೋಗ್ಯ ಸಮಸ್ಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಶುಕ್ರವಾರ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಪಲಕಾರಿಯಾಗದೆ ಭಾನುವಾರ ನಿಧನಹೊಂದಿದರು.
ಲೋಕಸಭೆಗೆ ದಾಖಲೆಯ ಐದು ಬಾರಿ ಆಯ್ಕೆಯಾಗಿದ್ದ ಅವರು ವೈಶಾಲಿ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಸೊಲಿನ ರುಚಿ ಉಂಡಿದ್ದರು.
ಬಿಹಾರ ಮುಖಂಡ ರಘುವಂಶ್ ಪ್ರಸಾದ್ ಅವರು ಕಳೆದ ಜೂನ್ ನಲ್ಲೆ ಆರ್.ಜೆ.ಡಿ ಪಕ್ಷಕ್ಕೆ ರಾಜಿನಾಮೆ ನೀಡಿ. ಇದೆ ಸೆಪ್ಟಂಬರ್ 10 ರಂದು ಆರ್.ಜೆ.ಡಿ ಪಕ್ಷ ತೊರೆದಿದ್ದರು. ಈ ಸಂಬಂಧ ಆರ್.ಜೆ.ಡಿ ನಾಯಕ ಲಾಲು ಪ್ರಸಾದ್ ಅವರಿಗೆ ರಾಜಿನಾಮೆ ಪತ್ರವನ್ನು ರವಾನಿಸಿದ್ದರು. ನಂತರ ಲಾಲು ಪ್ರಸಾದ್ ಅವರ ಮನವೊಲಿಕೆಯಿಂದಾಗಿ ತಮ್ಮ ನಿರ್ಧಾರ ಹಿಂಪಡೆದಿದ್ದರು.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..