ಲಸಿಕೆ ಹೆಸರಿನಲ್ಲಿ ದೇಶ ವಿಭಜಿಸುವ ಸಿದ್ಧತೆ

ಉಚಿತ ಲಸಿಕೆ ನೀಡುವ ಬಿಜೆಪಿಯ ಭರವಸೆಗೆ ಶಿವಸೇನೆ ಖಂಡನೆ

0

Gummata Nagari : India News

ಮುಂಬೈ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಉಚಿತ ಲಸಿಕೆ ನೀಡುವ ಬಿಜೆಪಿಯ ಭರವಸೆಯನ್ನು ಶಿವಸೇನೆ ಖಂಡಿಸಿದೆ. ಶಿವಸೇನೆ ವಕ್ತಾರ ಸಂಜಯ್ ರೌತ್ ಮಾತನಾಡಿ, ಜಾತಿ-ಧರ್ಮದ ಬದಲು ಲಸಿಕೆ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಯೋಜನೆ ಇದೆ ಎಂದು ಹೇಳಿದರು.

ಎಲ್ಲಿ ಬಿಜೆಪಿ ಸರ್ಕಾರ ಇಲ್ಲವೋ ಅಲ್ಲಿ ಕೊರೊನಾ ಲಸಿಕೆ ಸಿಗುವುದಿಲ್ಲವೋ ಎಂದು ಸಂಜಯ್ ರೌತ್ ಪ್ರಶ್ನಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಈ ಬಗ್ಗೆ ಸ್ಪಷ್ಟನೆ ನೀಡಬೇಕು. ಕರೋನಾ ಲಸಿಕೆ ಬಂದಾಗ ಅದನ್ನು ಮನೆ ಮನೆಗೆ ಕಳುಹಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಹಾಗಾದರೆ ನೀವು ಯಾವುದೇ ಹೊಸ ವ್ಯವಸ್ಥೆಯನ್ನು ಮಾಡುತ್ತಿಲ್ಲವೇ? ಎಲ್ಲಿ ಬಿಜೆಪಿ ಸರ್ಕಾರಗಳು ಇರುತ್ತವೆ, ಎಲ್ಲಿ ಬಿಜೆಪಿ ಪರ ಮತ ಚಲಾಯಿಸಲಾಗುತ್ತದೆ ಅಲ್ಲಿ ಮಾತ್ರ ಕೊರೊನಾ ಲಸಿಕೆ ಸಿಗಲಿದೆಯೇ?.

“ಒಂದು ಕಾಲದಲ್ಲಿ ನಾವು ಮಕ್ಕಳಾಗಿದ್ದಾಗ, ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ ಎಂದು ಘೋಷಣೆಯಾಗಿತ್ತು. ಈಗ ನೀವು ನನಗೆ ಮತ ನೀಡಿ, ನಾನು ನಿಮಗೆ ಲಸಿಕೆ ನೀಡುತ್ತೇನೆ ಎಂದು ಹೊಸ ಘೋಷಣೆ ಬಂದಿದೆ. ಯಾವರೀತಿಯಾಗಿ ಈ ದೇಶದಲ್ಲಿ ತಾರತಮ್ಯಮಾಡಲಾಗುತ್ತಿದೆ ಎಂದರೆ ಯಾರು ನಮ್ಮ ಪರ ಮತಚಲಾಯಿಸದಿಲ್ಲವೊ ಅವರಿಗೆ ಲಸಿಕೆ ನೀಡಲಾಗುವುದಿಲ್ಲಾ. ಬಿಹಾರದಲ್ಲಿ ಯಾರಾದರು ಒಬ್ಬರು ನಿಮ್ಮ ಪರ ಮತಚಲಾಯಿಸದಿದ್ದರೆ ಅವರಿಗೆ ಲಸಿಕೆ ಕೊಡುವುದಿಲ್ಲವೇ?, ಮಧ್ಯಪ್ರದೇಶದಲ್ಲೂ ಇದೇ ಹೇಳಲಾಗಿದೆ. ಹಾಗಾದರೆ ದೇಶವನ್ನು ವಿಭಜಿಸುವ ಸಿದ್ಧತೆಗಳು ನಡೆದಿವೆ. ಜಾತಿ-ಧರ್ಮದ ಬದಲು ಲಸಿಕೆ ಹೆಸರಿನಲ್ಲಿ ದೇಶವನ್ನು ವಿಭಜಿಸಲು ಸಿದ್ಧತೆಗಳು ನಡೆಯುತ್ತಿವೆ. ಇದು ಸರಿಯಲ್ಲ ಎಂದರು.

ಉದ್ಯೋಗ ನೀಡುವ ಭರವಸೆಯನ್ನು ಅರ್ಥಮಾಡಿಕೊಳ್ಳಬಹುದು, ಆದರೆ ಲಸಿಕೆ ವಿಷಯದಲ್ಲಿ ನಮ್ಮ ಆಕ್ಷೇಪಣೆ ಇದೆ, ಚುನಾವಣೆ ಮತ್ತು ರಾಜಕೀಯದಲ್ಲಿ ಯಾವ ರೀತಿಯಾಗಿ ಲಸಿಕೆ ಸಮಸ್ಯೆಯನ್ನು ಎತ್ತಿದ್ದಾರೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸಲಾಗುತ್ತಿದೆ. ಇದು ಅವರಿಗೆ ನೋವುಂಟು ಮಾಡುವ ಹೇಳಿಕೆಯಾಗಿದೆ ಎಂದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.