ಉಸಿರಾಟದ ಸಮಸ್ಯೆಯಿಂದ ಏಮ್ಸ್ ಗೆ ದಾಖಲಾದ ಅಮಿತ್ ಶಾ

ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರ ಅನುಪಸ್ಥಿತಿಯಲ್ಲಿ ಶಾ ಚಿಕಿತ್ಸೆ

0

ಅಮಿತ್ ಶಾ ಅವರನ್ನು ವಿವಿಐಪಿಗಳಿಗಾಗಿ ಕಾಯ್ದಿರಿಸಲಾದ ಕಾರ್ಡಿಯೋ ನ್ಯೂರೋ ಟವರ್‌ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರ ಅನುಪಸ್ಥಿತಿಯಲ್ಲಿ ಶಾ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರು ನೀಡಿರುವ ಮಾಹಿತಿಯಂತೆ ಅಮಿತ್ ಶಾ ಅವರ ಸ್ಥಿತಿ ಈಗ ಸ್ಥಿರವಾಗಿದೆ.

ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸ್ (ಏಮ್ಸ್) ಗೆ ಶನಿವಾರ ರಾತ್ರಿ ಮತ್ತೆ ದಾಖಲಿಸಲಾಗಿದೆ. ಶಾ ಅವರು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ, ತಡ ರಾತ್ರಿ 11 ಗಂಟೆಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. 

ಅವರನ್ನು ವಿವಿಐಪಿಗಳಿಗಾಗಿ ಕಾಯ್ದಿರಿಸಿದ ಕಾರ್ಡಿಯೋ ನ್ಯೂರೋ ಟವರ್‌ನಲ್ಲಿ ಇರಿಸಲಾಗಿದೆ. ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಅವರ ಮಾರ್ಗದರ್ಶನದಲ್ಲಿ ಶಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. 

ಶಾ ಈ ಮೊದಲು  ಒಂದು ತಿಂಗಳಿನಿಂದ ಕೋವಿಡ್ ಪಾಸಿಟಿವ್  ನಿಂದ ಚೇತರಿಸಿಕೊಂಡ ಕೆಲವೇ ದಿನಗಳ ನಂತರ ಮತ್ತೆ ಉಸಿರಾಟದ ತೊಂದರೆಗಾಗಿ ಏಮ್ಸ್ ಗೆ ದಾಖಲಿಸಲಾಗಿದೆ. 

ಆಗಸ್ಟ್ 2 ರಂದು ಅವರು COVID-19 ಗೆ ಗುರುಗ್ರಾಮ್‌ನ ಮೆಡಂತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆಗಸ್ಟ್ 14 ರಂದು ನೆಗಿಟಿವ್ ಪರೀಕ್ಷೆಯ ನಂತರ ಅವರನ್ನು ಡಿಶ್ಚಾರ್ಜ್ ಮಾಡಲಾಯಿತು. ಅದಾದ ಬಳಿಕ ಅವರನ್ನು ಮತ್ತೆ ಏಮ್ಸ್ ಗೆ ಚಿಕಿತ್ಸೆಗೆ ಸೇರಿಸಲಾಗಿದೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.