ರೈತ ಮಸೂದೆ ಕಾಯ್ದೆ ರದ್ದು ಪಡಿಸುವವರಗೆ ನಾವು ಬಿಡಲ್ಲಾ

0

Gummata Nagari : Darwad News

ಹುಬ್ಬಳ್ಳಿ : ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಜಾರಗೆ ತಂದಿದೆ. ಇದು ರೈತರ ಪರವಾಗಿಲ್ಲ. ಈ ಕಾಯಿದೆಯಿಂದ ರೈತರಿಗೆ ಮಾರಕವಾಗಿದೆ ಎಂದು ರಿಪಬ್ಲಿಕ್ ಡೆಮಾಕ್ರಟಿಕ್ ಪಕ್ಷದ ಹುಬ್ಬಳ್ಳಿ ಧಾರವಾಡ ಜಿಲ್ಲಾ ಘಟಕದ ಅದ್ಯಕ್ಷ ಮಲ್ಲಿಕಾರ್ಜುನ ತೋಟಗೇರ್ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಮೂಲಕ ಮಾತನಾಡಿದ ಅವರು, ರೈತರ ಪಾಲಿಗೆ ಮರಣಶಾಸನವಾಗಿರುವ‌ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ಉತ್ತೇಜನ ಮತ್ತು ಸೌಲಭ್ಯ ಮಸೂದೆಗೆ ಒತ್ತಾಯದ ಮೂಲಕ, ಅಂಗೀಕಾರ ಪಡೆಯುವ ಮೂಲಕ ಬಿಜೆಪಿ ಸರ್ಕಾರ ಸಂಸದೀಯ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದೆ.

ಭಾರತದ ರೈತರ ಆಶಾಕಿರಣವಾದ ಕೃಷಿ ಕ್ಷೇತ್ರವನ್ನು ಸರ್ವನಾಶ ಮಾಡಲು ಹೊರಟಿರುವುದು ದುರಂತ. ರೈತರಿಗೆ ಇದರಿಂದ ಲಾಭವಿಲ್ಲ ಎಂದು ಕಿಡಿಕಾರಿದರು.

ರೈತರಿಗೆ ನೆರವಾಗುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಈ ತಿದ್ದುಪಡಿಯನ್ನು ತಂದಿದ್ದರೆ ಇದನ್ನು ಮೊದಲು ವಿಸ್ತೃತ ಚರ್ಚೆಗೊಳಪಡಿಸಬೇಕಿತ್ತು. ರೈತ ಪ್ರತಿನಿಧಿಗಳು, ಎಪಿಎಂಸಿ ಪದಾಧಿಕಾರಿಗಳು ಮತ್ತು ವರ್ತಕರ ಅಭಿಪ್ರಾಯ ಪಡೆದು ಈ ತಿದ್ದುಪಡಿಯನ್ನು ರೂಪಿಸಬೇಕಾಗಿತ್ತು. ಅದನ್ನು ಬಿಟ್ಟು ತರಾತುರಿಯಲ್ಲಿ ಕಾಯಿದೆ ತಿದ್ದುಪಡಿ ತರಲು ಹೊರಟಿರುವುದು ಖಂಡನೀಯ. ಹೀಗಾಗಿ ರಾಷ್ಟ್ರಪತಿಗಳಾದರು ರೈತ ವಿರೋಧಿ ಮಸೂದೆಗೆ ಅಂಕಿತ ಹಾಕದೇ ಆಡಳಿತ ಪಕ್ಷಕ್ಕೆ ತಿಳುವಳಿಕೆ ನೀಡಿ ಮರಳಿ ಕಳಿಸಬೇಕೆಂದು ಒತ್ತಾಯಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.