ಹುಬ್ಬಳ್ಳಿ: ನಗರದಲ್ಲಿ ಗಾಂಜಾ ಬೇಟೆ ಮುಂದುವರೆದಿದ್ದು, ಶಹರ ಠಾಣೆ ಪೊಲೀಸರು ಮತ್ತೆ ಇಬ್ಬರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂಲತಃ ರಾಜಸ್ಥಾನ ಜೋಧಪುರದ, ಹಾಲಿ ಹುಬ್ಬಳ್ಳಿ ಘಂಟಿಕೇರಿ ಸಿಂದಗಿ ಕಾಂಪ್ಲೆಕ್ಸ್ ನ ಸುಮೇರಸಿಂಗ್ ಮದನಸಿಂಗ್ ರಜಪೂತ ಮತ್ತು ರಾಜಸ್ಥಾನ ಬಾರ್ಡಮೇರ್, ಹಾಲಿ ಕೇಶ್ವಾಪುರ ಆಜಾದಕಾಲನಿ ನಿವಾಸಿ ಸಮುಂದರಸಿಂಗ್ ನೇಪಾಲಸಿಂಗ್ ರಜಪೂತ ಎಂಬಿಬ್ಬರನ್ನ ಬಂಧನ ಮಾಡಿಲಾಗಿದ್ದು, ಬಂಧಿತರಿಂದ ಆರು ಕೆಜಿ ಗಾಂಜಾ ಹಾಗೂ ಡಿಯೋ ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ.
ಸುಮೇರಸಿಂಗ್ ಭೋಜನಾಲಯದಲ್ಲಿ ಕೆಲಸ ಮಾಡುತ್ತಿದ್ದ, ಇನ್ನೋರ್ವ ಇಲೆಕ್ಟ್ರಿಕ್ ಕಾರ್ಯನಿರ್ವಹಿಸುತ್ತಲೇ ಗಾಂಜಾ ಮಾರಾಟ ಮಾಡುತ್ತಿದ್ದರು. ಮಾಹಿತಿ ಆಧರಿಸಿ ದಾಳಿ ನಡೆಸಿ, ಮಾಲು ಸಮೇತ ಆರೋಪಿಗಳನ್ನ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿಕೊಡಿದ್ದಾರೆ.
Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ Facebook । Twitter । YouTube । Instagram ಅನುಸರಿಸಿ..