ಚಿಗರಿ ಓಟ ಪ್ರಾರಂಭ

ಓಟ ಪ್ರಾರಂಭಿಸಿದ ಚಿಗರಿ ಮಾಸಿಕ ಪಾಸ್,ಸ್ಮಾರ್ಟ್ ಕಾರ್ಡ್ ಸೇವೆ ಪ್ರಾರಂಭ

0

ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಂದ್ ಆಗಿದ್ದವು. ಆದರೇ ಲಾಕ್ ಡೌನ್ ಸಡಿಲಿಕೆಯಿಂದ ಪುನಾರರಾಂಭಗೊಂಡಿದ್ದು, ಈಗ ಮತ್ತೆ ಸಂಚಾರ ಪ್ರಾರಂಭಿಸಿವೆ.

ಹುಬ್ಬಳ್ಳಿ: ಆಗಷ್ಟೇ ರಸ್ತೆಗೆ ಇಳಿದಿದ್ದ ಚಿಗರಿ ಬಸ್ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಬಂದ್ ಆಗಿದ್ದವು. ಆದರೇ ಲಾಕ್ ಡೌನ್ ಸಡಿಲಿಕೆಯಿಂದ ಪುನಾರರಾಂಭಗೊಂಡಿದ್ದು, ಈಗ ಮತ್ತೆ ಸಂಚಾರ ಪ್ರಾರಂಭಿಸಿವೆ. ಅಲ್ಲದೇ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸಲು ಲಭ್ಯವಿರುವ ಮಾಸಿಕ ರಿಯಾಯಿತಿ ಸ್ಮಾರ್ಟ ಕಾರ್ಡ್ ವಿತರಣೆಗೆ ಬಿ.ಆರ್.ಟಿ.ಎಸ್ ಮುಂದಾಗಿದೆ.

ಪ್ರತಿನಿತ್ಯ ಬಿ.ಆರ್.ಟಿ.ಎಸ್ ಬಸ್ಸುಗಳಲ್ಲಿ ಪ್ರಯಾಣಿಸುವ ನೌಕರರಿಗೆ ಹಾಗೂ ಇತರೇ ಶೈಕ್ಷಣಿಕ ವಾಣಿಜ್ಯ ಕೆಲಸ ಕಾರ್ಯಗಳಿಗಾಗಿ ಮೇಲಿಂದ ಮೇಲೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂಸ್ಥೆ ಹಾಗೂ ಬಿ.ಆರ್.ಟಿ.ಎಸ್ ವತಿಯಿಂದ ಮಾಸಿಕ ರಿಯಾಯಿತಿ ಸ್ಮಾರ್ಟ ಕಾರ್ಡ, ನಗದು ರಹಿತವಾಗಿ ಪ್ರಯಾಣಿಸಲು ಇ-ಪರ್ಸ್ ಹಾಗೂ ಮಾಸಿಕ ರಿಯಾಯಿತಿ ಸ್ಮಾರ್ಟ ಕಾರ್ಡದಾರರಿಗೆ ನಗರ, ಉಪನಗರ ಸಾರಿಗೆಗಳಲ್ಲಿ ವಿಶೇಷ ರಿಯಾಯಿತಿ ಮಾಸಿಕ ಪಾಸುಗಳನ್ನು ಜಾರಿಗೆ ತರಲಾಗಿದೆ.

ಹುಬ್ಬಳ್ಳಿ ಸಿ.ಬಿ.ಟಿ ಕೊರೋನಾ ಹೊಸ ನಿಲ್ದಾಣ 1280 ರೂ, ಹುಬ್ಬಳ್ಳಿ ರೈಲ್ವೇ ಸ್ಟೇಷನ್ ಹಾಗೂ ಸಿ.ಬಿಟಿ ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ 1200 ರೂ, ಹುಬ್ಬಳ್ಳಿ ಎಚ್.ಡಿ.ಎಮ್.ಸಿ ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ 1120 ರೂ, ಹುಬ್ಬಳ್ಳಿ ಎಚ್.ಡಿ.ಎಮ್.ಸಿ ಧಾರವಾಡ ಹೊಸ ನಿಲ್ದಾಣ 1200ರೂ, ಹುಬ್ಬಳ್ಳಿ ಸಿ.ಬಿ.ಟಿ ಸತ್ತೂರ ನಿಲ್ದಾಣ 880ರೂ, ಹುಬ್ಬಳ್ಳಿ ಸಿ.ಬಿ.ಟಿ ನವನಗರ 720 ರೂ, ಧಾರವಾಡ ಹೊಸ ಬಸ್ ನಿಲ್ದಾಣ ನವನಗರ 880ರೂ, ಧಾರವಾಡಬಿ.ಆರ್.ಟಿ.ಎಸ್ ಟರ್ಮಿನಲ್ ನವನಗರ 840 ರೂ, ಧಾರವಾಡ ಹೊಸ ಬಸ್ ನಿಲ್ದಾಣ ಎಸ್.ಡಿ.ಎಮ್.ಆಸ್ಪತ್ರೆ 800 ರೂ, ಧಾರವಾಡ ಬಿ.ಆರ್.ಟಿ.ಎಸ್ ಟರ್ಮಿನಲ್ ಎಸ್.ಡಿ.ಎಮ್.ಆಸ್ಪತ್ರೆ 720ರೂ ಪಾಸಿನ ದರವನ್ನು ನಿಗದಿಪಡಿಸಲಾಗಿದೆ.

ಮೊದಲ ಬಾರಿಗೆ ಮಾಸಿಕ ರಿಯಾಯಿತಿ ಸ್ಮಾರ್ಟ ಕಾರ್ಡ ಪಡೆಯುವರು ಆಧಾರ ಕಾರ್ಡ ಪ್ರತಿ ಹಾಗೂ ಒಂದು ಬಾರಿ ರೂ 150 ಸಂಸ್ಕರಣಾ ಶುಲ್ಕ ಪಾವತಿಸಬೇಕಾಗುತ್ತದೆ.ಅಲ್ಲದೇ ಧಾರವಾಡದಲ್ಲಿನ ಬಿ.ಆರ್.ಟಿ.ಎಸ್ ನಿಲ್ದಾಣ (ಮಿತ್ರ ಸಮಾಜ) ಹಾಗೂ ಹೊಸ ಬಸ್ ನಿಲ್ದಾಣ, ಹುಬ್ಬಳ್ಳಿಯಲ್ಲಿನ ಸಿಬಿಟಿ ಹಾಗೂ ಹಳೇ ಬಸ್ ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.