ಪೊಲೀಸ್ ವ್ಯವಸ್ಥೆ ತ್ಯಾಗ, ಬಲಿದಾನ ಪ್ರತೀಕ; ಪ್ರೊ. ಚೆಟ್ಟಿ

0

Gummata Nagari : Dharwad News

ಧಾರವಾಡ : ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡಿ, ಜನಸಾಮಾನ್ಯರಿಗೆ ನೆಮ್ಮದಿಯ ಬದುಕು ನೀಡಲು ಸದಾ ಶ್ರಮಿಸುವ ಪೊಲೀಸ್ ವ್ಯವಸ್ಥೆ ತ್ಯಾಗ, ಬಲಿದಾನದ ಪ್ರತೀಕವಾಗಿದೆ ಎಂದು ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಎಂ.ಬಿ. ಚಟ್ಟಿ ಹೇಳಿದರು.

ಇಂದು ಬೆಳಿಗ್ಗೆ ನಗರದ ಪೊಲೀಸ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಿಸಿದ್ದ ರಾಷ್ಟಿçÃಯ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು.

ಪೊಲೀಸ್ ಸಿಬ್ಬಂದಿಗಳು ವೈಯಕ್ತಿಕ ಬದುಕು ಕುಟುಂಬ ಹಿತ ಬದಿಗಿಟ್ಟು, ಸಮಾಜದ ಸ್ವಾಸ್ಥ್ಯ ಕಾಪಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಧೈರ್ಯ, ಸಾಹಸಗಳಿಂದ ಅಪರಾಧ ಮುಕ್ತ ಸಮಾಜ ಮುಕ್ತಗೊಳ್ಳಲು ಸಾಧ್ಯವಾಗುತ್ತದೆ ಎಂದು ಪ್ರೊ. ಚಟ್ಟಿ ತಿಳಿಸಿದರು.

ಕೊರೊನಾದಂತಹ ಕಠಿಣ ಪರಿಸ್ಥಿತಿಯಲ್ಲೂ ಕೊರೊನಾ ವಾರಿಯರ್ಸಳಾಗಿ ಪೊಲೀಸರು ದುಡಿಯುತ್ತಿದ್ದಾರೆ. ಸಾರ್ವಜನಿಕರ ಹಿತ ಕಾಪಾಡಲು ಸದಾಕಾಲ ದುಡಿಯುತ್ತಾರೆ. ಸಮಾಜ ಅವರ ತ್ಯಾಗ, ಬಲಿದಾನಗಳನ್ನು ಸ್ಮರಿಸಿ, ಗೌರವಿಸಿದಾಗ ಮಾತ್ರ ಅದಕ್ಕೆ ಬೆಲೆ ಬರುತ್ತದೆ. ಸರ್ಕಾರ ಪೊಲೀಸ್ ಇಲಾಖೆ ಸಿಬ್ಬಂದಿಗಳಿಗೆ ಇನ್ನು ಹೆಚ್ಚಿನ ಸೌಕರ್ಯ ಸವಲತ್ತು ನೀಡಬೇಕೆಂದು ಅವರು ಅಭಿಪ್ರಾಯಪಟ್ಟರು.

ಧಾರವಾಡ ಎಎಸ್‌ಐಎಸ್‌ಎಫ್ ಕಮಾಂಡೆಂಟ್ ವಿ. ಫೈಜುದ್ದೀನ ಅತಿಥಿಗಳಾಗಿದ್ದರು.

ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಅವರು ಕಳೆದ ಸಾಲಿನಲ್ಲಿ ದೇಶ ಹಾಗೂ ಸಮಾಜದ ರಕ್ಷಣೆಗಾಗಿ ಪ್ರಾಣ ಕಳೆದುಕೊಂಡ ದೇಶದ 259 ಜನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ಹೆಸರು ಸ್ಮರಿಸಿ, ಗೌರವ ಸಲ್ಲಿಸಿದರು.

ಉಪ ಪೊಲೀಸ್ ವರಿಷ್ಠಾಧಿಕಾರಿ ರವಿ ನಾಯಕ್ ಸ್ವಾಗತಿಸಿರು. ಡಿಎಆರ್ ವಿಭಾಗದ ಡಿಎಸ್‌ಪಿ ಶಿವಾನಂದ ಜಿ.ಸಿ. ವಂದಿಸಿದರು. ಡಾ.ಎ.ಸಿ. ಅಲ್ಲಯ್ಯನವರಮಠ ಕಾರ್ಯಕ್ರಮ ನಿರೂಪಿಸಿದರು. ಡಿ.ಎ.ಆರ್ ನ ಆರ್.ಪಿ.ಐ. ಜಿ.ಸಿ. ಡೂಗನವರ ನೇತೃತ್ವದಲ್ಲಿ ಪರೇಡ್ ಮೂಲಕ ಗೌರವ ರಕ್ಷೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪೊಲೀಸ್ ಸ್ಮಾರಕಕ್ಕೆ ಮುಖ್ಯ ಅತಿಥಿಗಳು ಸೇರಿದಂತೆ ಎಸ್.ಪಿ., ಡಿ.ವಾಯ್.ಎಸ್.ಪಿ, ಡಿ.ಸಿ.ಆರ್.ಬಿ. ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಜಿಲ್ಲಾ ಪೊಲಿಸ್ ಕಚೇರಿ ಆಡಳಿತಾಧಿಕಾರಿ ಎಂ.ಎಸ್. ಹಿರೇಮಠ, ಬಸವರಾಜ ದೇಗನಾಳ, ಸಿಪಿಐ ವಿಜಯಕುಮಾರ್ ಬಿರಾದಾರ, ಧಾರವಾಡ ಗ್ರಾಮೀಣ ಮಹಿಳಾ ಪಿಎಸ್‌ಐ ಸುಮಾ ನಾಯಕ, ಪಿಎಸ್‌ಐಗಳಾದ ವ್ಹಿ.ಎಸ್. ಮಂಕಣಿ, ಎ.ಎಸ್. ಹಳ್ಳಿಯವರ, ಪೊಲೀಸ್ ವಸತಿ ಶಾಲೆ ಪ್ರಾಚಾರ್ಯ ಡಾ.ವೈ.ಪಿ. ಕಲ್ಲನಗೌಡರ ಸೇರಿದಂತೆ ಇತರರು ಪುಷ್ಪ (ರೀತ್) ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸಿಪಿಐಗಳಾದ ಎಸ್.ಸಿ. ಪಾಟೀಲ, ರಮೇಶ ಗೋಕಾಕ, ಪಿಎಸ್‌ಐ ಮಹೇಂದ್ರಕುಮಾರ ನಾಯಕ್ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು. ಸಿಬ್ಬಂದಿಗಳು, ನಿವೃತ್ತ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.