ಸ್ಮಾರ್ಟ್ ಸಿಟಿ ಕಾಮಗಾರಿಯ ಹೊಂಡಕ್ಕೆ ಬಿದ್ದ ನಾಲ್ವರು: ಓರ್ವ ಬಾಲಕಿ ಸಾವು

0

Gummata Nagari : Dharwad News

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ವಾಣಿಜ್ಯ ನಗರಿಯಲ್ಲೀಗ ಎಲ್ಲಿ ನೋಡಿದರೂ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿವೆ. ಇನ್ನೊಂದೆಡೆ ಸ್ಮಾರ್ಟ್ ಸಿಟಿ ಯೋಜನೆಗಳ ಕಾಮಗಾರಿಗಳು ಸಾರ್ವಜನಿಕ ಪ್ರಾಣಕ್ಕೆ ಕಂಟಕವಾಗಿ ಪರಿಗಣಿಸುತ್ತಿವೆ. ಸದ್ಯ ಈ ಯೋಜನೆ ಬಾಲಕಿಯನ್ನು ಬಲಿ ಪಡೆದುಕೊಂಡಿದೆ.

ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯ ಆವರಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿಗಳನ್ನ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯ ಹೊಂಡದ ಪಕ್ಕದಲ್ಲೇ ಆಟವಾಡುತ್ತಿದ್ದ ಮೂವರು ಬಾಲಕರು ಹಾಗೂ ಓರ್ವ ಬಾಲಕಿ ಹೊಂಡಕ್ಕೆ ಬಿದ್ದಿದ್ದಾರೆ. ಈ ಪೈಕಿ ಬಾಲಕಿ ಹೊಂಡದಲ್ಲಿ ಮುಳಗಿ ಮೃತಪಟ್ಟಿದ್ದಾಳೆ.

ಘಟನೆಯಲ್ಲಿ ಹುಬ್ಬಳ್ಳಿಯ ಗಿರಣಿಚಾಳದ ತ್ರಿಶಾ ಎಂಬ ಬಾಲಕಿ ಸಾವಿಗೀಡಾಗಿದ್ದು, ಆಕೆಯ ಜೊತೆಗೆ ಹೊಂಡಕ್ಕೆ ಬಿದ್ದಿದ್ದ ಮೂವರು ಬಾಲಕರನ್ನ ಸ್ಥಳೀಯ ವಿಕಲಚೇತನ ಯುವಕ ಸುರೇಶ ಹೊರಕೇರಿ ಕಾಪಾಡಿದ್ದಾರೆ. ಈ ಮೂವರು ಬಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹದಿನೈದು ಅಡಿ ತೆಗ್ಗು ತೆಗೆದು ಹಾಗೇಯೇ ಬಿಟ್ಟ ಪರಿಣಾಮ ಹೊಂಡದಲ್ಲಿ ಸಂಪೂರ್ಣವಾಗಿ ನೀರು ತುಂಬಿದೆ. ಆಟವಾಡುತ್ತಲೇ ಎಲ್ಲರೂ ಅದರಲ್ಲಿ ಬಿದ್ದಿದ್ದು, ಅದೃಷ್ಟವಶಾತ್ ಸುರೇಶ ಹೊರಕೇರಿ ನೋಡಿದ್ದರಿಂದ ಮೂವರು ಬಾಲಕರು ಬಚಾವ್ ಆಗಿದ್ದಾರೆ. ಆದರೆ ಬಾಲಕಿ ಮೃತಪಟ್ಟಿದ್ದಾಳೆ.

ಇಂದು ಕರ್ನಾಟಕ ಬಂದ್ ಇದ್ದ ಪರಿಣಾಮ ಇಂದಿರಾ ಗಾಜಿನ ಮನೆಯಲ್ಲಿ ಜನರ ಓಡಾಟ ವಿರಳವಾಗಿತ್ತು. ಹೀಗಾಗಿ ಯಾರ ಗಮನಕ್ಕೂ ಬಂದಿಲ್ಲ. ಘಟನೆಯ ಕುರಿತು ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.