ಎಬಿವಿಪಿ ಧಾರವಾಡ ಶಾಖೆಯ ವತಿಯಿಂದ “ಆಕ್ಸಿಜನ್ ಚಾಲೆಂಜ್” ಅಭಿಯಾನ

0

Gummata Nagari : Dharwad

ಧಾರವಾಡ : ಎಬಿವಿಪಿ ಧಾರವಾಡ ಶಾಖೆಯ ವತಿಯಿಂದ “ಆಕ್ಸಿಜನ್ ಚಾಲೆಂಜ್” ಅಭಿಯಾನ ಇಡೀ ಕರ್ನಾಟಕದಾದ್ಯಂತ ನಡೆಯುತ್ತಿದ್ದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಸುಮಾರು 1000 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನಿಡಿದ್ದು ಇಂದು ಮತ್ತು ನಾಳೆ 1000 ಸಸಿಗಳನ್ನು ನೆಡಲು ಧಾರವಾಡ ಎಬಿವಿಪಿ ಕಾರ್ಯಕರ್ತರು ಸಂಕಲ್ಪ ಮಾಡಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪರಿಸರ ಸಂರಕ್ಷಣೆಗಾಗಿ ಕಳೆದ ಹಲವು ವರ್ಷಗಳಿಂದ ವಿನೂತನ ಅಭಿಯಾನ, ಯೋಜನೆ ಹಾಗೂ ಕಾರ್ಯಕ್ರಮಗಳಿಂದ ಪರಿಸರ ಜಾಗೃತಿ ಹಾಗೂ ಸಸಿ ಗಳನ್ನ ನೆಡುವುದು ಅಷ್ಟೆ ಅಲ್ಲದೆ ಅವುಗಳನ್ನ ಪಾಲನೆ ಪೋಷಣೆ ಮಾಡುವಂತಹ ಮಹತ್ತರ ಕೆಲಸವನ್ನ ಮಾಡುತ್ತಾ ನಾಡನ್ನ ಹಚ್ಚ ಹಸಿರಾಗಿಸುವ ಸಂಕಲ್ಪದೊಂದಿದೆ ಪ್ರತಿ ಕ್ಷಣವೂ ಪ್ರಕೃತಿ ಮಾತೆಯ ಸೇವೆಗಾಗಿ ತೊಡಗಿಸಿಕೊಂಡಿದೆ,

ಪ್ರತಿ ವರ್ಷದಂತೆ ಈ ವರ್ಷವೂ ಸಹಾ ಬರಿದಾದ ಪ್ರಕೃತಿ ಮಾತೆಯ ಒಡಲನ್ನ ಮತ್ತೆ ಹಸಿರಾಗಿಸಲೂ ನವನವೀನವಾಗಿ ಕಂಗೊಳಿಸುವಂತೆ ಮಾಡಲು ತಾಯಿ ಭಾರತ ಮಾತೆಯ ಕೊರಳು ಹಸಿರಿನಿಂದಲೇ ಶೃಂಗರಿಸಬೇಕೆಂಬ ಮಹತ್ವಾಕಾಂಕ್ಷೆಯನ್ನ ಹೊಂದಿ “OxgenChallenge” ನೀಡಿ ಪರಿಸರ ದಿನದ ಈ ಶುಭ ಸಂದರ್ಭದಲ್ಲಿ ಮತ್ತೆ ಸಸಿಗಳನ್ನ ನೆಟ್ಟು ಪರಿಸರದ ರಕ್ಷಣೆಗೆ ಸಜ್ಜಾಗಿದೆ.

ಕೋರೋನಾ ಮಹಾಮಾರಿಯ ಈ ವಿಷಮ ಪರಿಸ್ಥಿತಿಯಲ್ಲಿ ಎಲ್ಲರೂ ನಿಮ್ಮ ಮನೆಯ ಸುತ್ತ ಮುತ್ತಲಿನ ಪರಿಸರದಲ್ಲಿ ಗಿಡಮರಗಳನ್ನ ನೆಟ್ಟು ಪಾಲನೆ ಪೊಷಣೆ ಮಾಡಿ ಇಂದಿನ ಸಮಾಜಕ್ಕೂ ಹಾಗೂ ಮುಂದಿನ ಪಿಳಿಗೆಗೂ ಅನುಕೂಲ ವಾಗುವ ಹಾಗೆ ಸುಂದರ ಪರಿಸರವನ್ನ ನಿರ್ಮಾಣ ಮಾಡೋಣ.
“ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ”
ನಾಡನ್ನ ಹಸಿರಾಗಿಸುವ ಸಂಕಲ್ಪ ತೊಟ್ಟು ಸಸಿಗಳನ್ನ ನೇಡೊಣ….
ಇಂದು ಪ್ರಮುಖ ಪಾರ್ಕ್ ಗಳಲ್ಲಿ ಮಾಡಲಾಯಿತು ಈ ಅಭಿಯಾನದಲ್ಲಿ ಎಬಿವಿಪಿ ರಾಜ್ಯ ಅಧ್ಯಕ್ಷರಾದ ಡಾ ವೀರೇಶ್ ಬಾಳಿಕಾಯಿ ಜಿಲ್ಲಾ ಪ್ರಮುಖರಾದ ಶ್ರೀ ಅಶೋಕ್ ಕಬ್ಬೇರ, ಕೆಯುಡಿ ಘಟಕದ ಅಧ್ಯಕ್ಷರಾದ ಪ್ರೋ.ವೇದಮೂರ್ತಿ, ಪ್ರೋ.ಲೋಕೇಶ್, ಪ್ರೊ. ಇರಪ್ಪ ಪತ್ತಾರ್ ಹಾಗೂ ಅರುಣ್ ಅಮರಗೋಳ, ಸಂದೇಶ್ ಪವರ್ , ಉಲ್ಲಾಸ್ ಗೋಡಿ, ಸ್ಪೂರ್ತಿ ಅಬಲೂರ್ ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.