ಹುಬ್ಬಳ್ಳಿ ಕಾಟನ್ ಮಾರ್ಕೆಟ್ ಬಂದರಿನಲ್ಲಿ”ಮೋದಿ” ಮತ್ತು”ಶೆಟ್ಟರ್” ಬೋಟ್

0

Gummata Nagari : Dharwad News

ಹುಬ್ಬಳ್ಳಿ: ಒಂದು ಬೋಟ್ ನ್ನು ಓಡಿಸಬೇಕಾದರೆ ನದಿ ಅಥವಾ ಸಮುದ್ರ ಬೇಕು, ಆದ್ರೆ ಈ ಮಕ್ಕಳು ನಮ್ಮ ವಾಣಿಜ್ಯ ನಗರಿ ಹುಬ್ಬಳ್ಳಿಯ ರಸ್ತೆಯಲ್ಲಿ ಬೋಟನ್ನು ಓಡಿಸುವುದರ ಮೂಲಕ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.

ಹೀಗೆ ಹದಗೆಟ್ಟಿರುವ ರಸ್ತೆಯಲ್ಲಿನ ಗುಂಡಿಗಳಲ್ಲಿ, ಚಿಕ್ಕ ಮಕ್ಕಳು ಸಚಿವ ಜಗದೀಶ್, ಶೆಟ್ಟರ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಹಾಕಿ ಗುಂಡಿಗಳಲ್ಲಿ ಹಡಗುಗಳನ್ನು ಬೀಡುತ್ತಿರುವುದು, ಇನ್ನೊಂದು ಕಡೆ ಸಾರ್ವಜನಿಕ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ದೃಶ್ಯ ಕಂಡು ಬಂದಿದ್ದು ನಗರದ ಕಾಟನ್ ಮಾರ್ಕೆಟ್ ನಲ್ಲಿ.

ಸುಮಾರು ವರ್ಷಗಳಿಂದ ನಗರದಲ್ಲಿ ರಸ್ತೆಗಳನ್ನು ನಿರ್ಮಿಸುವಲ್ಲಿ ಸಚಿವ ಜಗದೀಶ್ ಶೆಟ್ಟರ್ ವಿಫಲವಾಗಿದ್ದಾರೆ. ಹೀಗಾಗಿ ಸ್ಥಳಿಯರು ಮತ್ತು ಮಕ್ಕಳು ವಿನುತನವಾಗಿ ಪ್ರತಿಭಟನೆ ಮಾಡಿದ್ದರು.

ಆದ್ದರಿಂದ ಕೂಡಲೆ ನಗರದಲ್ಲಿ ಸುಗಮ ರಸ್ತೆ ನಿರ್ಮಾಣ ಮಾಡುವಂತೆ ಸರ್ಕಾರ ಹಾಗೂ ರಾಜ್ಯಕ್ಕೆ ಒತ್ತಾಯಿಸಿದರು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.