ಮಹಿಳಾ ಪ್ರಯಾಣಿಕರ ಜೊತೆಗಿದೆ ಮೇರಿ ಸಹೇಲಿ

ಹುಬ್ಬಳ್ಳಿ ನೈಋತ್ಯ ರೈಲ್ವೆಯಿಂದ ವಿನೂತನ ಪ್ರಯತ್ನ

0

Gummata Nagari : Dharwad News

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಆನ್ ಲಾಕ್ ಸಂದರ್ಭದಲ್ಲಿ ಹಲವಾರು ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳ ಕಾರ್ಯಾಚರಣೆ ಕೈಗೊಂಡಿದ್ದು, ಈ ಹಿಂದೆ ಎಸ್.ಡಬ್ಲ್ಯೂ.ಆರ್ ವ್ಯಾಪ್ತಿಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಹಾಗೂ ಮಹಿಳಾ ಪ್ರಯಾಣಿಕರಿಗೆ ಭದ್ರತೆಯನ್ನು ಒದಗಿಸಲು ನೈಋತ್ಯ ರೈಲ್ವೆ ಹುಬ್ಬಳ್ಳಿ ಆರ್.ಪಿ.ಎಫ್ ಪಡೆಯು ವಿನೂತನ ನಿರ್ಧಾರವನ್ನು ಕೈಗೊಂಡಿದೆ.

ನೈಋತ್ಯ ರೈಲ್ವೆ ವಲಯದ ಆರ್‌ಪಿಎಫ್ ಪಡೆಯು ‘ಮೇರಿ ಸಹೇಲಿ’ ಎಂಬುವಂತ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು, ಮಹಿಳಾ ಪ್ರಯಾಣಿಕರಿಗೆ ವಿಶಿಷ್ಟ ರೀತಿಯ ಭದ್ರತೆಯನ್ನು ಒದಗಿಸುವ ಮೂಲಕ ಮಹಿಳೆಯರು ಇನ್ನುಮುಂದೆ ಸರಗಳ್ಳರ ಹಾಗೂ ಬ್ಯಾಗ ಕಳ್ಳರ ಭೀತಿಯನ್ನು ಬಿಟ್ಟು ನಿರ್ಭಯವಾಗಿ ಪ್ರಯಾಣ ಮಾಡುಬಹುದಾಗಿದೆ.

ಡೈರೆಕ್ಟರ್ ಜನರಲ್ ಆಫ್ ಆರ್.ಪಿ.ಎಫ್ ಅರುಣ್ ಕುಮಾರ್ ನಿರ್ದೇಶನದ ಮೇರೆಗೆ ಹಾಗೂ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಆರ್.ಎಸ್. ಚೌಹಾನ್ ಸಲಹೆ ಮೇರೆಗೆ ‘ಮೇರಿ ಸಹೇಲಿ’ ಉಪಕ್ರಮವನ್ನು ಹುಬ್ಬಳ್ಳಿ ವಿಭಾಗದ ಆರ್‌ಪಿಎಫ್ ಪ್ರಾರಂಭಿಸಿದೆ.

ಹುಬ್ಬಳ್ಳಿ ವಿಭಾಗದ ರೈಲುಗಳಲ್ಲಿನ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ.ಮತ್ತು ಮಹಿಳೆಯರು ರೈಲ್ವೆ ಪ್ರಯಾಣದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವ ವಿನೂತನ ನಿರ್ಧಾರ ಇದಾಗಿದೆ.

ಹುಬ್ಬಳ್ಳಿ ವಿಭಾಗದಲ್ಲಿ 4 ಜೋಡಿಗಳಲ್ಲಿ ‘ಮೇರಿ ಸಹೇಲಿ’ ಉಪಕ್ರಮವನ್ನು ಪರಿಚಯಿಸಲಾಗಿದ್ದು, ಮಹಿಳಾ ಸಬ್ ಇನ್ಸ್‌ಪೆಕ್ಟರ್ ಮತ್ತು ಮಹಿಳಾ ಕಾನ್‌ಸ್ಟೆಬಲ್‌ಗಳ ತಂಡ ಆರಂಭಿಕ ನಿಲ್ದಾಣಗಳಲ್ಲಿ ರಚಿಸಲಾಗಿದೆ.

ಮಹಿಳೆಯರು ಏಕಾಂಗಿಯಾಗಿ ಪ್ರಯಾಣಿಸುತ್ತಿರುವುದನ್ನು ಗುರುತಿಸಿ ಮುನ್ನೆಚ್ಚರಿಕೆಗಳ ಬಗ್ಗೆ ತಂಡವು ಮಹಿಳಾ ಪ್ರಯಾಣಿಕರಿಗೆ ತಿಳಿಸುತ್ತದೆ. ಅಲ್ಲದೇ 182 ಭದ್ರತಾ ಸಹಾಯ ಮಾರ್ಗವನ್ನು ಸಂಪರ್ಕಿಸಬಹುದು.ಹುಬ್ಬಳ್ಳಿ ವಿಭಾಗಕ್ಕಾಗಿ mysaheliubl@gmail.com ಮತ್ತು ಮೊಬೈಲ್ ಸಂಖ್ಯೆ 7022626987 ಅನ್ನು ಭದ್ರತೆಗಾಗಿ ಹುಬ್ಬಳ್ಳಿ ವಿಭಾಗದ ಮೂಲಕ ಸಂಪರ್ಕಿಸಬಹುದು.

Gummata Nagari | Leading Kannada News Network in Vijayapura (Bijapur) ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTubeInstagram ಅನುಸರಿಸಿ..

Leave A Reply

Your email address will not be published.